ವಾಡಿ ಬಿಜೆಪಿ ಕಛೇರಿಯಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲರ 148ನೇ ಜಯಂತಿ ಆಚರಣೆ

0
31

ವಾಡಿ; ಕೋಮು ಕಲಹದಿಂದ ಧ್ವಂಸಗೊಂಡ ದೇಶಕ್ಕೆ ಸುವ್ಯವಸ್ಥೆ ಮತ್ತು ಶಾಂತಿಯನ್ನು ಮರಳಿ ತಂದ ರಾಷ್ಟ್ರ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ಬಿಜೆಪಿ ಮುಖಂಡ ಸಿದ್ದಣ್ಣ ಕಲ್ಲಶೆಟ್ಟಿ ಹೇಳಿದರು.

ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಂಡಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜಯಂತಿ ಯಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ವಿಭಜನೆಯ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಿದರು,ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಿದರು ಮತ್ತು ಸಾವಿರಾರು ನಿರಾಶ್ರಿತರ ದೇಶದ ನಿವಾಸಿಗಳಿಗೆ ಪುನರ್ವಸತಿ ಒದಗಿಸಿ ಧೈರ್ಯ ತುಂಬಿದರು. ಅದರಂತೆ ನಮ್ಮ ಹೈದ್ರಾಬಾದ್ ಕರ್ನಾಟಕದ ವಿಮೋಚನೆಗಾಗಿ ದಿಟ್ಟ ತನದಿಂದ ಹೋರಾಡಿದ ಮಹಾನ್ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ರು ಎಂದು ಹೇಳಿದರು.

ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ 1947ರ ಆಗಸ್ಟ್‌ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು ಆದರೆ ದೇಶದಾದ್ಯಂತ ಹಬ್ಬಿದ್ದ ನೂರಾರು ರಾಜಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಲು ಇವರು ಹರಸಾಹಸ ಪಟ್ಟರು ಆ ಕೆಲಸವನ್ನು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು ರೈತ ಚಳವಳಿಯ ರೂವಾರಿಗಳಾಗಿದಂತ ನಮ್ಮ ಪಟೇಲರು, ಆ ಸಮಯದಲ್ಲಿ ನಮ್ಮ ದೇಶದ ಗೃಹ ಸಚಿವರಾಗಿದ್ದರು ಅವರು ಭಾರತದ ಏಕತೆಯನ್ನು ಸಮರ್ಥವಾಗಿ ನಿಭಾಯಿಸಿದರು. ಅವರ ಸ್ಮರಣೆಗಾಗಿ ಇಂದು ರಾಷ್ಟ್ರದಾದ್ಯಂತ ಏಕತಾ ದಿನವನ್ನಾಗಿ ನಾವು ಆಚರಿಸಲಾಗುತ್ತಿದೆ ಎಂದರು.

ಯುವ ಮುಖಂಡ ವಿಠಲ ನಾಯಕ,ಮುಖಂಡ ರಾದ ರಾಮಚಂದ್ರ ರಡ್ಡಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ತಾಲ್ಲೂಕ ಉಪಾಧ್ಯಕ್ಷ ಗಿರಿಮಲ್ಲಪ್ಪ ಕಟ್ಟೀಮನಿ, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಉಪಾಧ್ಯಕ್ಷ ಬಸವರಾಜ ಕಿರಣಗಿ, ಖಜಾಂಚಿ ಶಿವಶಂಕರ ಕಾಶೆಟ್ಟಿ,ಕಾರ್ಯದರ್ಶಿಗಳಾದ ರಿಚರ್ಡ್‌ ಮಾರೆಡ್ಡಿ, ಸತೀಶ್ ಸಾವಳಗಿ,ದೇವೇಂದ್ರ ಬಡಿಗೇರ, ಎಸ್ ಸಿ ಮೂರ್ಚಾದ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್,ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಶರಣಗೌಡ ಚಾಮನೂರ,ಭೀಮರಾವ ದೊರೆ,ಅಯ್ಯಣ್ಣ ದಂಡೋತಿ, ಮಲ್ಲಿಕಾರ್ಜುನ ಸಾತಖೇಡ್,ಬಾಬು ಕುಡಿ,ಆನಂದ ಇಂಗಳಗಿ,ಚನ್ನಯ್ಯ ಸ್ವಾಮಿ,ಚಂದ್ರಶೇಖರ ಬೆಣ್ಣೂರಕರ್, ಮಹೇಶ ಕುರಕುಂಟಾ,ವಿಶ್ವ ತಳವಾರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here