ಕಲಬುರಗಿ: ಕರ್ನಾಟಕ ರಾಜ್ಯೋತ್ಸವ ಆಚರಣೆ

0
39

ಕಲಬುರಗಿ: ನಗರದ ಕನ್ನಡ ಭವನದಲ್ಲಿ ನಾದ ಸಂಗೀತ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಲಾವಿದರ ಸಂಘದ ವತಿಯಿಂದ 68 ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

ಮುಗುಳ ನಾಗಾವಿ ಕಟ್ಟಿಮನಿ ಸಂಸ್ಥಾನ ಹಿರೇಮಠದ ಪೂಜ್ಯಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು . ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ದತ್ತಪ್ಪ ಸಾಗನೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

Contact Your\'s Advertisement; 9902492681

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಶರಾದ ವಿಜಯ ಕುಮಾರ್ ತೇಗಲತಿಪ್ಪಿ, ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ ಅತಿಥಿಗಳಾಗಿ ಆಗಮಿಸಿದ್ದರು.

ಸಂಘದ ಅಧ್ಯಕ್ಷ ಮಧುಸೂದನ್ ಮಲ್ಲಾಬಾದಿ ಉಪಾಧ್ಯಕ್ಷ ವಾಲ್ಮೀಕಿ ಕಾಂಬಳೆ ಹಾಗೂ ಚಾಂದ್ ಜಕ್ಸನ್, ಕಾರ್ಯದರ್ಶಿ ರಾಜು ಕೋಬಾಳ್ ಸಹ ಕಾರ್ಯದರ್ಶಿ ಬಲವಂತ ಉದನೂರು ಖಜಂಚಿಗಳಾದ ಲಕ್ಷ್ಮಿಕಾಂತ್ ಸೀತನೂರ್ ಸಲಹೆಗಾರದ ರೇಣುಕಾ ಬಿರಾದಾರ್ ಪಾರ್ವತಿ ವೀರೇಂದ್ರ ಕುಮಾರ್ ಉರ್ಕಿಮಠ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ ದಸರಾ ಹಬ್ಬದಂದು ಅಲ್ಲಿನ ಜಗನ್ಮೋಹನ್ ಅರಮನೆಯ ವೇದಿಕೆಯಲ್ಲಿ ಮಾತೃಕಲಾ ಸಂಗೀತ ವಿದ್ಯಾಲಯ ಸಂಸ್ಥೆಯಿಂದ ಪಾರ್ವತಿ ವೀರೇಂದ್ರ ಕುಮಾರ್ ಉರ್ಕಿಮಠ ಮತ್ತು ತಂಡ ಇವರುಗಳು ಸುಗಮ ಸಂಗೀತ ನೀಡಿದ್ದಕ್ಕೆ ಸಂಘದ ವತಿಯಿಂದ ಇವರನ್ನು ಸನ್ಮಾನಿಸಲಾಯಿತು.

ಕಲಾವಿದರಾದ ಮಧುಸೂದನ್ ಮಲ್ಲಾಬಾದಿ ವಾಲ್ಮೀಕಿ ಕಾಂಬಳೆ ಲಕ್ಷ್ಮಿಕಾಂತ್ ಸೀತನೂರು, ಪಾರ್ವತಿ ಉರ್ಕಿಮಠ, ರೇಣುಕಾ ಬಿರಾದಾರ್ ಆನಂದ್, ರಾಜಶೇಖರ್ ರೆಡ್ಡಿ ಮಹದೇವ್ ಅಷ್ಟಗಿ, ಮಹಾದೇವ್ ಸಂಘವಿ ಸತೀಶ್ ಪಾಟೀಲ್ ವಿಠ್ಠಲ್ ಮೇತ್ರಿ ಚಂದ್ರಶೇಖರ್ ರೆಡ್ಡಿ ಶಿವಶಂಕರ್ ಪೂಜಾರಿ ನರಸಿಂಹಚಾರ್ಯ ಈ ಎಲ್ಲಾ ಕಲಾವಿದರು ಕರ್ನಾಟಕ ರಾಜ್ಯೋತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಿ, ಕನ್ನಡ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here