ಕಾರ್ತಿಕ ಮಾಸ: ಸಡಗರ ಸಂಭ್ರಮದ ಲಕ್ಷ ದೀಪೋತ್ಸವ

0
91

ಕಲಬುರಗಿ: ನಗರ ಹೊರವಲಯದ ಸೇಡಂ ರಸ್ತೆಯ ಸಣ್ಣೂರ-ಬೆಣ್ಣೂರ್ ಗ್ರಾಮಗಳ ಸೀಮಾಂತರದಲ್ಲಿರುವ ಸದ್ಗುರು ರೂಪರಹಿತ ಮಾತಾ ಮಾಣಿಕೇಶ್ವರಿ ಅಮ್ಮನವರ ಆಶ್ರಮದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಮತ್ತು ಧಾರ್ಮಿಕ ಸಭೆ ಬಹುವಿಜೃಂಭಣೆಯಿಂದ ಜರುಗಿತು.

ಆಶ್ರಮದ ಪೂಜ್ಯರಾದ ಭಾರದ್ವಾಜ ಸ್ವಾಮೀಜಿ ನೇತೃತ್ವದಲ್ಲಿ ತೋನಸನಹಳ್ಳಿ(ಎಸ್) ಶಿವಸಾಯಿ ಸಂಸ್ಥಾನ ಮಠದ ಪೂಜ್ಯ ಶರಣ ಕೊತ್ತಲ್ಲಪ್ಪ ಮುತ್ತ್ಯಾ, ಪೇಠ ಶಿರೂರಿನ ಶ್ರೀಮಠದ ಪೂಜ್ಯ ಸಿದ್ಧಲಿಂಗ ಸ್ವಾಮೀಜಿ, ಕಲ್ಲಬೆನ್ನೂರಿನ ಬಸವರಾಜಪ್ಪ ಸ್ವಾಮಿ, ಯಾನಾಗುಂದಿ ಮಾತಾ ಮಾಣಿಕೇಶ್ವರಿ ಆಶ್ರಮದ ಅಮರಾವತಿ, ತುಳಜಮ್ಮ ಮಾತಾ, ದಂಡೋತಿಯ ಜಯಶ್ರೀ ಮಾತಾ ಸೇರಿ ಅನೇಕ ಹರ ಗುರು ಚರಮೂರ್ತಿಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

Contact Your\'s Advertisement; 9902492681

ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್, ನಿವೃತ್ತ ಡಿವೈಎಸ್ಪಿ ಸಿದ್ರಾಮಪ್ಪ ಸಣ್ಣೂರಕರ್, ಹೈದರಾಬಾದ್‍ನ ಪಟ್ಟಾಭಿ, ತಾಪಂ ಮಾಜಿ ಸದಸ್ಯ ನಾಮದೇವ ರಾಠೋಡ, ಸಣ್ಣೂರ ಗ್ರಾಪಂ ಮಾಜಿ ಅಧ್ಯಕ್ಷ ಪರಮೇಶ್ವರ ದಂಡಿನಕರ್, ಗ್ರಾಪಂ ಉಪಾಧ್ಯಕ್ಷ ರಾಜು ಕಲ್ಲಬೆನ್ನೂರ್, ಸಂಘಟಕ ಮಹೇಶ ನಾಟೀಕಾರ, ಕುಸನೂರ ಜಿಪಂ ಕಾಂಗ್ರೆಸ್ ಮುಖಂಡ ರಾಜು ಚವ್ಹಾಣ, ಕಾಳನೂರ ತಾಪಂ ಕ್ಷೇತ್ರದ ಮುಖಂಡ ಜೀತೇಂದ್ರ ಚವ್ಹಾಣ, ನಾಗಣ್ಣ ನಾಯಿಕೋಡಿ, ಮಾಳಪ್ಪ ಪೂಜಾರಿ, ಚಂದ್ರು ಪೂಜಾರಿ, ಬಂಡಪ್ಪ ಪೂಜಾರಿ, ಭೀಮರಾಯ ವೆಂಕಟಬೆನ್ನೂರ್, ಸಂಗಮ್ಮ ತಾಯಿ, ಜಗದೇವಿ ಬೀದರ, ಪಾರ್ವತಿಬಾಯಿ, ಗ್ರಾಪಂ ಮಾಜಿ ಅಧ್ಯಕ್ಷ ತೇಜಪ್ಪ ಹರಸೂರ, ರಘುವಿರಸಿಂಗ್, ಸಂತೋಷಮ್ಮ ಮಾತಾ, ಸೇರಿದಂತೆ ಹರಸೂರ, ಪೇಠಶಿರೂರ, ಬೆಣ್ಣೂರ, ಸಣ್ಣೂರ, ಮಾಲಗತ್ತಿ ಗ್ರಾಮದ ಸದ್ಭಕ್ತರು ಪಾಲ್ಗೊಂಡಿದರು. ಪ್ರೊ. ಶಿವರಾಜ ಪಾಟೀಲ್ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here