ರಕ್ತ ಹೀನತೆಯನತೆಯನ್ನು ತಡೆದು ಪೌಷ್ಟಿಕ್ ಆಹಾರ ಸೇವನೆಯ ಮಾಡುವುದಕ್ಕೆ ಸಲಹೆ

0
29

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ, ಎಮ್.ಎಸ್. ಇರಾಣಿ ಪದವಿ ಮಹಾವಿದ್ಯಾಲಯ, ಯುನಿಸೆಫ್ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಯೋಗದೊಂದಿಗೆ ಎಮ್.ಎಸ್. ಇರಾಣಿ ಪದವಿ ಪೂರ್ವ ಕಾಲೇಜಿನಲ್ಲಿ “ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ, ಸಾಮಾಜಿಕ ಮತ್ತು ನಡವಳಿಕೆಯ ಬದಲಾವಣೆಗಾಗಿ ಯುವಕರು” ಎಂಬ ಕಾರ್ಯಕ್ರಮವನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶರಣಮ್ಮ ಪಾಟೀಲ ಅವರು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜಶೇಖರ ಬೀರನಳ್ಳಿ ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಎಲ್ಲಾ ವಿದ್ಯಾರ್ಥಿಗಳು ದಿನಾಲು ಹಸಿ ತರಕಾರಿಗಳು, ಮೊಟ್ಟೆ, ಹಣ್ಣುಗಳು, ಬೆಲ್ಲ, ಒಣದ್ರಾಕ್ಷೀ, ಖಜೂರು, ಬದಾಮ, ತುಪ್ಪ ಸೇವನೆ ಮಾಡುವುದರಿಂದ ಸದೃಢ ಆರೋಗ್ಯದ ಜೊತೆಗೆ ರಕ್ತ ಹೀನತೆಯ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯವೆಂದು ಹೇಳಿದರು.

Contact Your\'s Advertisement; 9902492681

ಶಿಲ್ಪಾ ಅಲ್ಲದ ಪ್ರಾಚಾರ್ಯರು, ಪದವಿ ಪೂರ್ವ ಕಾಲೇಜು ಕಲಬುರಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆ ಹಾಗೂ ಸ್ವಾಗತವನ್ನು ಡಾ. ಪ್ರಾಣೇಶ ಎಸ್, ರಾ.ಸೇ.ಯೋ. ಅಧಿಕಾರಿ ನೆರವೇರಿಸಿದರು. ವಂದನಾರ್ಪಣೆಯನ್ನು ಡಾ. ಶಂಕ್ರಪ್ಪ ಕೆ, ಎನ್.ಎಸ್.ಎಸ್. ‘ಬ’ ಘಟಕದ ಕಾರ್ಯಕ್ರಮಾಧಿಕಾರಿಗಳು ನೆರವೇರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here