ಕಲಬುರಗಿ: ಗ್ಯಾಸ್ ಸಿಲಿಂಡರ್ ಗೆ e-kyc ಡಿಸೆಂಬರ್ 31 ಕೊನೆ ದಿನಾಂಕವನ್ನು ವಿಸ್ತರ್ಣ ಮಾಡಬೇಕೆಂದು ಎಂದು ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಬಿನ್ ಅಹ್ಮದ್ ಆಗ್ರಹಿಸಿದ್ದಾರೆ.
ಭಾರತ ಸರ್ಕಾರದ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಗ್ಯಾಸ್ ಸಿಲಿಂಡರ್ ಗೆ ಡಿಸೆಂಬರ್ 31 ರೊಳಗೆ e-kyc ಮಾಡಿಸುವುದು ಕಡ್ಡಾಯ ಎಂದು ಘೋಷಿಸಿದೆ.
ಇದನ್ನು ಡಿಸೆಂಬರ್31 ರೊಳಗೆ ಎಂದು ನಿಗದಿ ಪಡಿಸಿರುವುದು ಸರಿಯಲ್ಲ. ಗ್ರಾಹಕರಿಗೆ ಕನಿಷ್ಠ ಎರಡು ತಿಂಗಳ ಅವಧಿ ದಿನಾಂಕ ವಿಸ್ತರ್ಣ ಮಾಡಿ ಕೇವಲ ಗ್ಯಾಸ್ ಏಜೆನ್ಸಿ ಗಳಿಗೆ ಸೀಮಿತ ಗೊಳಿಸಿದೇ ಬೆರೆ ಬೆರೆ ಕೇಂದ್ರಗಳ ಮೂಲಕ ಇನ್ನೂ ಹೆಚ್ಚಿನ ಕಡೆ ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.