ಗ್ರಾಮೀಣ ನಾಟಕಗಳು ಕಲಾವಿದರ ಸೃಷ್ಟಿಗೆ ಕಾರಣವಾಗಿದೆ

0
16

ಸುರಪುರ: ತಾಲ್ಲೂಕಿನ ಟಿ. ಬೊಮ್ಮನಹಳ್ಳಿ ಗ್ರಾಮದಲ್ಲಿ ಮೂಕನಾಯಕ ಸಾಂಸ್ಕøತಿಕ ಕಲಾ ನಾಟ್ಯ ಸಂಘ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಮಲ್ಲೇಶ ಕೋನ್ಹಾಳ ಅವರು ಬರೆದ ‘ಸಾವು ಬಂದರೂ ಸೆರಗು ಹಾಸಲಾರೆ ಎಂಬ ಸಗರನಾಡು ಗ್ರಾಮೀಣ ನಾಟಕೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ ಮಾತನಾಡಿ, ಈ ಭಾಗದಲ್ಲಿ ಹಾಸುಹೊಕ್ಕಾಗಿರುವ ಗ್ರಾಮೀಣ ನಾಟಕಗಳು ಕಲಾವಿದರ ಸೃಷ್ಟಿಗೆ ಕಾರಣವಾಗಿವೆ. ಇಲ್ಲಿನ ರಂಗ ಕಲಾವಿದರುÀ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುವಷ್ಟು ಪ್ರೌಢಿಮೆ ಹೊಂದಿದ್ದಾರೆ ನಮ್ಮಲ್ಲಿ ನಾಟಕ ಸಾಹಿತಿಗಳು, ರಂಗ ನಟರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಪ್ರೋತ್ಸಾಹದ ಅವಶ್ಯಕತೆ ಇದೆ. ಸುರಪುರ ನಗರದಲ್ಲಿ ರಂಗ ಮಂದಿರ ನಿರ್ಮಿಸಬೇಕು. ಕನ್ನಡ ಸಂಸ್ಕøತಿ ಇಲಾಖೆ ಗ್ರಾಮೀಣ ನಾಟಕಗಳಿಗೆ ಪ್ರತ್ಯೇಕ ಧನ ಸಹಾಯ ನೀಡಬೇಕು. ಈ ದಿಸೆಯಲ್ಲಿ ತಾವು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ಶೋಷಿತರ ಸಂಘಟನೆಗಳ ಒಕ್ಕೂಟದ ರಾಜ್ಯ ಸಮಿತಿ ಅಧ್ಯಕ್ಷ ವೆಂಕೋಬ ದೊರೆ ಅಧ್ಯಕ್ಷತೆ ವಹಿಸಿದ್ದರು. ಸಕ್ರೆಪ್ಪ ಮುತ್ಯಾ ದೇವರಗೋನಾಲ ಸಾನಿಧ್ಯ ವಹಿಸಿದ್ದರು. ತಹಶೀಲ್ದಾರ್ ಕೆ. ವಿಜಯಕುಮಾರ, ಮುಖಂಡರಾದ ಬಲಭೀಮನಾಯಕ ಭೈರಿಮರಡಿ, ಶಿವರಾಜನಾಯಕ ನಾಯ್ಕೋಡಿ, ಭೀಮರಾಯ ಮೂಲಿಮನಿ, ಶಿವರಾಯ ಕಾಡ್ಲೂರ, ಯಲ್ಲಪ್ಪನಾಯಕ ಮಲ್ಲಿಭಾವಿ, ನಾಗಪ್ಪ ಕನ್ನೆಳ್ಳಿ, ಸಣ್ಣದೇಸಾಯಿ ದೇವರಗೋನಾಲ, ರವಿನಾಯಕ ಭೈರಿಮರಡಿ, ಕಾಳಪ್ಪ ಕವಾತಿ, ದೇವಿಂದ್ರಪ್ಪ ಬಾದ್ಯಾಪುರ ಇದ್ದರು.

ಸಂಘದ ಅಧ್ಯಕ್ಷ ಮಲ್ಲೇಶ ಕೋನ್ಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೂರ್ತಿ ಬೊಮ್ಮನಳ್ಳಿ, ಮುತ್ತು ಬಳಗಾನೂರ, ಭೀಮಾಶಂಕರ ಹಲಕರ್ಟಿ, ಬಲಭೀಮ ದೇವಡಿ, ಕೃಷ್ಣ ಹೀರಾಪುರ, ಮೌನೇಶ ದಳಪತಿ, ಸಿದ್ದಣ್ಣ ಶಾರದಳ್ಳಿ, ಶಿವುಮಾನಯ್ಯ ವಾಗಣಗೇರಾ, ಭವಾನಿ ಬೆಂಗಳೂರು, ಸೀಮಾ ಮಹಿಂದ್ರಗಿ, ರಂಜಿತಾ ದುಧನಿ, ಪ್ರಿಯಾಂಕಾ ಹಿರಿಯೂರ ಅವರು ಅದ್ಭುತವಾಗಿ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here