ಕಲಬುರಗಿ: ಇಲ್ಲಿನ ಸೋನಿಯಾ ಗಾಂಧಿ ಆಶ್ರಯ ಕಾಲೋನಿಯ ಹತ್ತಿರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾ ಆಜಾದ್ ಆಂಗ್ಲ ಮಾಧ್ಯಮ ಮಾದರಿಯ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳನ್ನು ಶೌಚಾಲಯ, ಕಸ ಗುಡಿಸುವುದು ಸೇರಿದಂತೆ ಪ್ರಾಂಶಿಪಾಲಲಮ್ಮಾ ತನ್ನ ಮನೆಯ ಕಸ ಹಾಗೂ ಗಾರ್ಡ್ ನ್ ಸ್ವಚ್ಛಗೊಳ್ಳಿಸುವುದು ಸೇರಿ ಸಸಿಗಳಿಗೆ ನೀರು ಹಾಕುವ ಕೆಲಸಕ್ಕೆ ಬಳಿಸಿಕೊಂಡಿರುವ ಆರೋಪ ಕೇಳಿಬಂದಿವೆ.
ಶಾಲೆಯ ಪ್ರಾಂಶಿಪಾಲರು ವಿದ್ಯಾರ್ಥಿಗಳನ್ನು ಶೌಚಾಲಯ ಹಾಗೂ ಕಸಗುಡಿಸುವ ತನ್ನ ಮನೆಯಲ್ಲಿ ಸಹ ಕಸ ಗುಡಿಸುವುದು ಮ್ತು ಗಾರ್ಡನ್ ಸ್ವಚ್ಛತೆಗೆ ಕೆಲಸಕ್ಕೆ ಬಳಿಸಿಕೊಂಡಿರುವು ಬಗ್ಗೆ ಪೋಷಕರು ದೂರು ನೀಡಿದ್ದಾರೆ. ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಕಳುಹಿಸಿದ್ದೇನೆ. ಅವರ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. – ಜಾವಿದ್ ಕರಂಗಿ, ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಲಬುರಗಿ.
ನಗರದ ಸೋನಿಯಾ ಗಾಂಧಿ ಆಶ್ರಯ ಕಾಲೋನಿಯ ಹತ್ತಿರದ ಮೌಲಾನಾ ಆಜಾದ್ ಇಂಗ್ಲಿಷ್ ಮಾದರಿ ಶಾಲೆಯ ಪ್ರಾಂಶಿಪಾಲರಾದ ಝಹೊರಾ ಜಬೀನ್ ವಿದ್ಯಾರ್ಥಿಗಳನ್ನು ಕಸ, ಶೌಚಾಲಯ ಶುಚಿಗೊಳಿಸುವ ಕೆಲಸಕ್ಕೆ ಬಳಸಿಕೊಂಡ ಪ್ರಾಂಶಿಪಾಲರಾಗಿದ್ದಾರೆ.
ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಮನೆಗೆ ಕರೆದುಕೊಂಡು ಹೊಗಿ ತನ್ನ ಕಸ ಗುಡಿಸುವುದು, ಗಾರ್ಡನ್ ಸ್ವಚ್ಛ ಮಾಡಿ ಅವುಗಳಿಗೆ ನೀರು ಹಾಕುವ ಕೆಲಸಕ್ಕೆ ಬಳಿಸಿಕೊಂಡಿರುವ ವಿರುದ್ಧ ಮೊಹಮ್ಮದ್ ಫೌಜಾನ್ ಎಂಬ ವಿದ್ಯಾರ್ಥಿ ಪೋಷಕರಾದ ಮೊಹಮ್ಮದ್ ಜಮೀರ್ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ತನ್ನ ಮಕ್ಕಳನ್ನು ಸ್ವಚ್ಛತೆ ಕೆಲಸಕ್ಕೆ ಬಳಿಸಿಕೊಳ್ಳವ ಬಗ್ಗೆ ಪ್ರಾಂಶಿಪಾಲ ಝಹೋರಾ ಜಬೀನ್ ಪೋಷಕರು ಪ್ರಶ್ನಿಸಿದ್ದಾಗ ಶಾಲೆಯ ಸಿಬ್ಬಂದಿಗಳ ಕೊರತೆಯಿರುವುದರಿಂದ ಶೌಚಾಲಯ ಅವರೆ ಶುಚಿಗೊಳಿಸಲು ಸೂಚಿಸಲಾಗಿದೆ ಎಂದು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿರುವುದಾಗಿ ನೋಂದ ಮಗುವಿನ ಪೋಷಕ ಜಮೀರ್ ತಿಳಿಸಿದ್ದಾರೆ.
ಪ್ರಾಂಶಿಪಾಲರು ಮತ್ತು ಶಿಕ್ಷಕರು ಶಾಲೆಯ ಶೌಚಾಲಯ ಮಕ್ಕಳ ಉಪಯೋಗಿಸಲು ಬೀಡುವುದಿಲ್ಲ, ಶಾಲೆಗೆ ಶಿಕ್ಷಣ ಪಡೆಯಲು ಕಳುಹಿಸಿದ ನಮ್ಮ ಮಕ್ಕಳನ್ನು ಈ ರೀತಿಯಾಗಿ ಬಳಿಸಿಕೊಂಡಿರುವುದ ಖಂಡನೀಯ. ತಕ್ಷಣ ಇವರನ್ನು ಅಮಾನತುಗೊಳ್ಳಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ರೋಜಾ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.