ಬಸವಣ್ಣ ಸಂಸ್ಕೃತಿಕ ರಾಯಭಾರಿ ಘೋಷಣೆಗೆ ಶಾಸಕ ಡಾ. ಅಜಯ್ ಸಿಂಗ್ ಹರ್ಷ

0
16

ಕಲಬುರಗಿ: ಸಚಿವ ಸಂಪುಟ ಸಭೆಯಲ್ಲಿ12 ನೇ ಶತಮಾನದ ಸಮಾನತೆಯ ಹರಿಕಾರ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಲು ನಿರ್ಧರಿಸಿರುವ ಸರ್ಕಾರದ ಕ್ರಮವಕ್ಕೆ ಕೆಕೆ ಆರ್ ಡಿ ಬಿ ಅಧ್ಯಕ್ಷರಾದ ಡಾ ಅಜಯ್ ಸಿಂಗ್ ಅವರು ಸ್ವಾಗತಿಸಿ ಹರ್ಷ ವ್ಯಕ್ತ ಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂವಿಧಾನದಲ್ಲಿ ಎತ್ತಿ ಹಿಡಿದಿರುವ ಜಾತಿ, ವರ್ಗ, ಹಾಗೂ ಲಿಂಗ ತಾರತಮ್ಯವಿಲ್ಲದ ಸಮಾಜವನ್ನು ರೂಪಿಸುವ ಕೆಲಸ ಬಸವಣ್ಣನವರ ನೇತೃತ್ವದಲ್ಲಿ ನಡೆದಿದೆ.

Contact Your\'s Advertisement; 9902492681

“ಬಸವಣ್ಣನವರ ಸಾರ್ವಕಾಲಿಕವಾದ ಕಲ್ಯಾಣ ಸಮಾಜವನ್ನು ಕಟ್ಟುವ ಆದರ್ಶ ನೀತಿಯನ್ನು ಬೋಧಿಸಿರುವುದರಿಂದ ದೇಶದ ಸಂವಿಧಾನದ ಆಶಯಗಳಿಗೆ ಅನುಗುಣವಾಗಿರುವ ಅವರ ಚಿಂತನೆಗಳು ಬಸವಣ್ಣನವರ ಸಾಂಸ್ಕೃತಿಕ ನಾಯಕತ್ವಕ್ಕೆ ಬಲ ತುಂಬಿವೆ. ಇವೆಲ್ಲ ಹಿನ್ನೆಲೆಯಲ್ಲಿ
ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸುತ್ತಿರುವುದು ಅತ್ಯಂತ ಸ್ವಾಗತದ ಕ್ರಮವಾಗಿದೆ ಎಂದು ಅಜಯ್ ಸಿಂಗ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸಚಿವ ಸಂಪುಟದ ಈ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸುವೆ.” ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ, ಮಹಿಳಾ ಶಿಕ್ಷಣದಂತ ಮಹತ್ತರ ತತ್ವಗಳು ನಮಗೆ ಸದಾ ಕಾಲ ಪ್ರೇರಣೆ ನೀಡಲಿ ಎಂದು ಅವರು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ವೈಯಕ್ತಿಕರಾಗಿ ಬಸವ  ಪ್ರಭಾವಿತರಾಗಿರೋದರಿಂಡಲೇ ಈ ಕೆಲಸ ಆಗಿದೆ.
ಸಂಪುಟದ ನಿರ್ಧಾರದ ಹಿಂದೆ ಅವರು ನಂಬಿರುವ ತತ್ವಗಳೂ ಕಾರಣವಾಗಿವೆ. ಎಂದು ಡಾ ಅಜಯ್ ಸಿಂಗ್ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here