ಕಲಬುರಗಿ: ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸಂಸ್ಥೆ ಕಚೇರಿಯಲ್ಲಿ ಭಕ್ತ ಮಾರ್ಖಂಡೇಶ್ವರ ಜಯಂತಿ ನಿಮಿತ್ತ ನೇಕಾರರ ಪದ್ಮಸಾಲಿ ಸಮಾಜದ ಆರಾಧ್ಯದೈವ ಶಿವಭಕ್ತ ಶ್ರೀ ಮಾರ್ಖಂಡೇಶ್ವರ ರ ಜಯಂತಿ ಕಾರ್ಯಕ್ರಮ ಜರುಗಿತು.
ಪದ್ಮಸಾಲಿ ಸಮಾಜದ ನೂತನ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಗೊಂಡ ನಾಗರಾಜ್ ಕೂಸಮಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಮಾರ್ಖಂಡೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು, ಸಂಸ್ಥೆಯ ತಾತ್ಕಾಲಿಕ ಸಂಚಾಲಕರಾದ ನ್ಯಾಯವಾದಿ ಜೇ.ವಿನೋದ ಕುಮಾರ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಸಂಸ್ಥೆಯ ಶಿವಲಿಂಗಪ್ಪಾ ಅಷ್ಟಗಿ ಯವರು ಮಾತನಾಡಿ, ಸಂಸ್ಥೆಯ ಹುಟ್ಟಿದ ಮೇಲೆ ಮೊದಲ ಕಾರ್ಯಕ್ರಮ ವನ್ನು ಹಮ್ಮಿಕೊಂಡ ಪ್ರಯುಕ್ತ ನಮಗೆ ಅತೀವ ಸಂತೋಷ ವಾಗುತ್ತಿದೆ ಎಂದರು.
ಗೌರವ ಸ್ವೀಕರಿಸಿ ನಾಗರಾಜ ಕೂಸಮಾ ಮಾತನಾಡಿ ಹಿಂದೂ ಧರ್ಮದ 18 ಮಹಾಪುರಾಣಗಳಲ್ಲಿ ಒಂದು, ಮಾರ್ಖಂಡೇಶ್ವರ ಪುರಾಣ, ಸಾವಿನ ಬಲೆಯಲ್ಲಿ ಯಮ ರಾಜ ಕರೆದುಕೊಂಡು ಹೋಗಲು ಬಂದಾಗ ಶಿವಭಕ್ತನಾದ ಈತನು ಲಿಂಗಕ್ಕೆ ಅಪ್ಪಿಕೊಂಡಾಗ ಆಶೀರ್ವಾದ ಪಡೆದು ಚಿರಂಜೀವಿ ಯಾದನು, ಅದೇ ರೀತಿ ಈ ಸಂಸ್ಥೆ ಕೂಡಾ ಮಾರ್ಖಂಡೇಶ್ವರನಂತೆ ಶಿವನ ಕೃಪೆಯಿಂದ ಚಿರಂಜೀವಿ ಯಾಗಿ ಉಳಿಯಲಿ ಸಮಾಜ ಕಾರ್ಯಕ್ಕೆ ಬೆನ್ನಲುಬುಯಾಗಿ ಸೇವೆ ಸಲ್ಲಿಸುತ್ತೆನೆ ಎಂದರು.
ವಕೀಲರಾದ ಭಂಡಾರಿ ರಾಜಗೋಪಾಲ ವಂದಿಸಿದರು. ಕಾರ್ಯಕ್ರಮದಲ್ಲಿ SSD ಕಾನೂನು ಸಂಸ್ಥೆಯ ಸದಸ್ಯ ಹಾಗೂ ಪದ್ಮಸಾಲಿ ಸಮಾಜದ ಉಪಾಧ್ಯಕ್ಷ ಶ್ರೀ ವಿಜಯ ಕುಮಾರ ತ್ರೀವೇದಿ, ಕಾರ್ಯದರ್ಶಿ ಕಾಶಿನಾಥ್ ಶೇರ್ಲಾ, ಸದಸ್ಯರಾದ ರಾಮಚಂದ್ರ, ಸಿದ್ದರಾಮ ಕೆಂಚಿ ಇತರರು ಉಪಸ್ಥಿತರಿದ್ದರು.