ಕಲಬುರಗಿ: ವೈಲೆಂಟೆನ ಡೇ ನಿಮಿತ್ಯ ನಡೆಯುವ ಅಪಕೃತ್ಯಗಳನ್ನು ತಡೆಯಬೇಕೆಂದು ಹಿಂದೂ ಜಾಗೃತಿ ಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಲೆಂಟೆನ್ ಡೇ ದಿನದಂದು ವಿಶೇಷ ಪೆÇಲೀಸ್ ದಳ ರಚಿಸಿ ಶಾಲಾ-ಕಾಲೇಜುಗಳಲ್ಲಿ ಅನುಚಿತ ಕೃತ್ಯ ಮಾಡುವವರ ಹಾಗೂ ಅತಿ ವೇಗದಿಂದ ವಾಹನ ಚಲಾಯಿಸುವವರ ಮೇಲೆ ಕ್ರಮ ಜರುಗಿಸುವುದು, ಪ್ರೇಮಿಗಳ ದಿನದಂದು ನಡೆಯುವ ತಪ್ಪು ಪ್ರಕಾರಗಳನ್ನು ಗಮನದಲ್ಲಿರಿಸಿ ಸಾರ್ವಜನಿಕ ಸ್ಥಳಗಳ ಉದ್ಯಾನವನಗಳಲ್ಲಿ ಅಯೋಗ್ಯ ಕೃತ್ಯಗಳನ್ನು ತಡೆಯಬೇಕು, ಇಂತಹ ಅಯೋಗ್ಯ ದಿನಾಚರಣೆಯನ್ನು ಪೆÇ್ರೀತ್ಸಾಹ ನೀಡಿದಂತೆ ಶಾಲಾ ಕಾಲೇಜುಗಳಿಗೆ ನಿರ್ದೇಶನ ನೀಡಬೇಕು, ಪಬ್ ಕೆಫೆಗಳಲ್ಲಿ ಕೂಡ ಅನೈತಿಕ ಚಟುವಟಿಕೆಗಳು ನಡೆಯುವ ಸಾಧ್ಯತೆ ಇದ್ದು ಇಂತಹ ಕೆಫೆ ಗಳ ಮೇಲೆ ತೀವ್ರ ನಿಗಾ ವಹಿಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕ ಸ್ಥಳಗಳಾದ ಉದ್ಯಾನವನ, ಜಿಲ್ಲಾ ವಿಜ್ಞಾನ ಬುದ್ಧ ಮಂದಿರ, ನಾಗನಹಳ್ಳಿ ಗಾರ್ಡನ್, ಪೆÇಲೀಸರನ್ನು ನಿಯೋಜಿಸಿ ಬರುವಂತಹ ಯುವಕ ಯುವತಿಯರಿಗೆ ಬುದ್ಧಿವಾದ ತಿಳಿ ಹೇಳಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಲಕ್ಷೀಕಾಂತ ಸ್ವಾದಿ, ದಶರಥ ಇಂಗೋಳೆ, ಮಹದೇವ ಕೋಟ್ನೂರ, ಸಿದ್ದು ಕಂದಗಲ್, ಪ್ರಕಾಶ ವಾಘಮೋರೆ, ರಾಜು ಸ್ವಾಮಿ, ರಾಕೇಶ ಮಠ ಇದ್ದರು.