ಶಹಾಬಾದ :ತಾಪಂಯಲ್ಲಿ ವಿಕಲಚೇತನರಿಗೆ 5% ಅನುದಾನ ಮಿಸಲಿಟ್ಟು ಅನುದಾನವನ್ನು ಅನುμÁ್ಠನ ಮಾಡುವಂತೆ ಒತ್ತಾಯಿಸಿ ಶುಕ್ರವಾರ ಅಂಗವಿಕಲರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮಲ್ಲೇಶಿ ಭಜಂತ್ರಿ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಗವಿಕಲರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮಲ್ಲೇಶಿ ಭಜಂತ್ರಿ ಮಾತನಾಡಿ,
ತಾಪಂ,ಜಿಪಂಗಳಲಿ ್ಲ ವಿಕಲಚೇತನ ಸಲುವಾಗಿ.5% ಅನುದಾನವನ್ನು ಮೀಸಲಿಡಬೇಕೆಂಬುದು ಸರಕಾರ ಆದೇಶ.
ಈ ಹಿಂದೆ ಸರ್ಕಾರ ಅಂಗವಿಕಲರಿಗೆ ಸೌಲಭ್ಯ ಮೂಲಕ 5% ಅನುದಾನದಲ್ಲಿ ಹೊಲಿಗೆ ಯಂತ್ರ, ಕಂಪ್ಯೂಟರ್, ಲ್ಯಾಪ್‍ಟಾಪ್, ತ್ರಿಚಕ್ರ ವಾಹನ ಸೌಲಭ್ಯಗಳನ್ನು ನೀಡುತ್ತ ಬಂದಿದೆ.ಇದರಿಂದ ವಿಕಲಚೇತನರಿಗೆ ವ್ಯಯಕ್ತಿಕವಾಗಿ ತುಂಬಾ ಅನುಕೂಲತೆಯನ್ನು ಪಡೆದಿದ್ದಾರೆ.ಆದರೆ ಸದ್ಯ 5% ಅನುದಾನದಲ್ಲಿ ಕಾಮಗಾರಿಗಳ ಮೂಲಕ ಸೌಲಭ್ಯ ಸರ್ಕಾರ ವಿತರಣೆ ಮಾಡುತ್ತಿದೆ. ಶಾಲೆಗಳಲ್ಲಿ ರ್ಯಾಂಪ್, ಸಮುದಾಯ ಶೌಚಾಲಯ ಸೇರಿದಂತೆ ಇತರ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ವಿಕಲಚೇತನರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.ಆದ್ದರಿಂದ ಕೂಡಲೇ ಈ ಹಿಂದೆ ನೀಡುತ್ತಿದ್ದ ಹೊಲಿಗೆ ಯಂತ್ರ, ಕಂಪ್ಯೂಟರ್, ಲ್ಯಾಪ್ ಟಾಪ್, ತ್ರಿಚಕ್ರ ವಾಹನ ಸೌಲಭ್ಯಗಳನ್ನು ಮತ್ತೆ ಜಾರಿಗೆ ತರಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.
ಕರವೇ ತಾಲೂಕಾಧ್ಯಕ್ಷ ವಿಶ್ವರಾಜ ಫಿರೋಜಾಬಾದ, ಅನಿಲ್ ಮಠಪತಿ, ಸತೀಶ್, ಚಂದು ಕಿಂಡ್ರಿ ಇತರರು ಇದ್ದರು.