ಸುಳ್ಳು ಸುದ್ದಿ ಹರಡುತ್ತಿರುವ ಪತ್ರಕರ್ತರೇ: ದೇಶಪ್ರೇಮ ಸಣ್ಣದಾದರೂ ತ್ಯಾಗ ಕೇಳಿಯೇ ಕೇಳುತ್ತದೆ

0
59

ಮೀಡಿಯಾದವರಿಗೆ ದೇಶಪ್ರೇಮ ಸಾಭೀತುಪಡಿಸಲು ಇದು ಸಕಾಲ ! ಪೊಲೀಸರು ಸಧ್ಯ ಎಫ್ಐಆರ್ ಮಾಡಿ ಶಂಕಿತ ವಿಡಿಯೊವನ್ನು ಎಫ್ಎಸ್ಎಲ್ ಗೆ ಕಳುಹಿಸಿದ್ದಾರೆ. ಎಫ್ಎಸ್ ಎಲ್ ವರದಿ ಬರುವವರೆಗೆ ಪೊಲೀಸರು ಕಾಯಲೇಬೇಕು. ಅರ್ಜೆಂಟಾಗಿ ಆರೋಪಿಯನ್ನು ಬಂಧಿಸಬೇಕು ಎಂದಾದರೆ ಮಾಧ್ಯಮದವರು ದೂರು ಕೊಡಬೇಕು. ದೂರು ಕೊಡುವಾಗ ಕಾನೂನಿನ ಕೆಲವು ನಿಯಮಗಳನ್ನು ಪಾಲಿಸಿದರೆ ಆರೋಪಿಯ ಬಂಧನ ಮಾತ್ರವಲ್ಲ, ಶಿಕ್ಷೆಯೂ ಆಗುತ್ತದೆ.

ಪತ್ರಕರ್ತರು ಪೆನ್ ಡ್ರೈವ್/ ಸಿಡಿಯೊಂದಿಗೆ ದೂರು ಕೊಡುವಾಗ 65b ಸರ್ಟಿಫಿಕೇಟ್ ಅನ್ನು ಲಗತ್ತಿಸಬೇಕು. ಯಾವ ಕ್ಯಾಮರಾದಲ್ಲಿ ಶೂಟಿಂಗ್ ಮಾಡಿದ್ದೀರಿ ? ಕ್ಯಾಮರಾದ ಉತ್ಪಾದನಾ ಸಂಖ್ಯೆ ಏನು ? ಅದನ್ನು ಯಾವ ಕಂಪ್ಯೂಟರ್ ಮೂಲಕ ಡೌನ್ ಲೋಡ್ ಮಾಡಲಾಯಿತು ? ಆ ಕಂಪ್ಯೂಟರ್ ನ ಯಾವ ಡಿಸ್ಕ್ ನಲ್ಲಿ ಸೇವ್ ಮಾಡಿ ಆ ಬಳಿಕ ಯಾವ ಪೆನ್ ಡ್ರೈವ್ ಗೆ ಇಳಿಸಲಾಯಿತು ಎಂದು 65b ಸರ್ಟಿಫಿಕೇಟ್ ನಲ್ಲಿ ಉಲ್ಲೇಖಿಸಬೇಕು.

Contact Your\'s Advertisement; 9902492681

ಈ ರೀತಿ ದೂರಿನೊಂದಿಗೆ ನೀಡಿದ 65b ಯಲ್ಲಿ ಉಲ್ಲೇಖಿತವಾಗಿರುವ ಕ್ಯಾಮರಾ, ಕಂಪ್ಯೂಟರ್, ಹಾರ್ಡ್ ಡಿಸ್ಕ್ ಅನ್ನು ದೂರುದಾರರು ನ್ಯಾಯಾಲಯದಲ್ಲಿ ಕೇಸ್ ಮುಗಿಯುವವರೆಗೂ ತೆಗೆದಿಟ್ಟಿರಬೇಕು. ನ್ಯಾಯಾಲಯದ ವಿಚಾರಣೆಯ ವೇಳೆ “ಹೌದು ನಾನು ಘೋಷಣೆಯನ್ನು ಕೇಳಿಕೊಂಡಿದ್ದು, ನಾನು ದೂರಿನಲ್ಲಿ ಉಲ್ಲೇಖಿಸಿರುವ ಕ್ಯಾಮರಾ, ಕಂಪ್ಯೂಟರ್, ಹಾರ್ಡ್ ಡಿಸ್ಕ್ ಮೂಲಕ ಶೂಟಿಂಗ್, ಡೌನ್ ಲೋಡ್ ಮಾಡಿಕೊಂಡಿದ್ದೇನೆ” ಎಂದು ಒಪ್ಪಿಕೊಳ್ಳಬೇಕು. ನ್ಯಾಯಾಲಯದ ಪ್ರತೀ ಕಲಾಪದಲ್ಲೂ ಭಾಗವಹಿಸಿ ಸಿಡಬ್ಲ್ಯು 1 ಆಗಿ ಸಾಕ್ಷಿ ನುಡಿಯಬೇಕು. ಎದುರುದಾರರ ವಕೀಲರ ಪಾಟಿ ಸವಾಲುಗಳಿಗೆ ಉತ್ತರಿಸಬೇಕು. ಆ ಬಳಿಕ ನ್ಯಾಯಾಲಯದ ಮುಂದೆ ಆರೋಪಿ ಪರ ವಕೀಲರು CrPc section 391(2) r/w 207(v) ಅಡಿಯಲ್ಲಿ ಕ್ಯಾಮರಾ, ಕಂಪ್ಯೂಟರ್, ಹಾರ್ಡ್ ಡಿಸ್ಕ್ ಅನ್ನು ಕೇಳಿದಾಗ ನ್ಯಾಯಾಲಯದ ವಶಕ್ಕೆ ನೀಡಬೇಕು.

ವಿಪರ್ಯಾಸ ಎಂದರೆ ಯಾವ ಮಾಧ್ಯಮದವರೂ ಕೂಡಾ ಲಕ್ಷಾಂತರ ಮೌಲ್ಯದ ಕ್ಯಾಮರಾ, ಕಂಪ್ಯೂಟರ್ ಅನ್ನು ವರ್ಷಾನುಗಟ್ಟಲೆ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ.‌ ನ್ಯಾಯಾಲಯಕ್ಕೆ ಹಾಜರಾಗಿ ಬಾಕ್ಸ್ ನಲ್ಲಿ ನಿಂತು ಸಾಕ್ಷಿ ಹೇಳುವುದಕ್ಕಂತೂ ಸುತರಾಂ ಒಪ್ಪಲ್ಲ. ಈ ವರೆಗೆ ಪತ್ರಕರ್ತರು ಇಂತದ್ದನ್ನು ಮಾಡಿಯೇ ಇಲ್ಲ.

ಹಾಗಾಗಿ, ದೇಶಪ್ರೇಮ ಎನ್ನುವುದು ಮಾತನಾಡಿದಷ್ಟು ಸುಲಭವಲ್ಲ. ದೇಶಪ್ರೇಮ ತ್ಯಾಗವನ್ನು ಬಯಸುತ್ತದೆ. ಬದುಕಿನ ಅಮೂಲ್ಯ ಅವಧಿಯ ಕೆಲ ಸಮಯವನ್ನು ಕೇಳುತ್ತದೆ. ಮಾತನಾಡುವ ದೇಶಪ್ರೇಮಿ ಮಾಧ್ಯಮದವರು ಸಣ್ಣ ತ್ಯಾಗಕ್ಕೆ ಸಿದ್ದರಿದ್ದಾರೆಯೇ ?

  • ನವೀನ್ ಸೂರಿಂಜೆ

ಹಿರಿಯ ಪತ್ರಕರ್ತ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here