0-5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಕಡ್ಡಾಯ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್

0
71

ಕಲಬುರಗಿ: ಫೆ.೨೮ ಯಾವುದೇ ೦-೫ ವರ್ಷದೊಳಗಿನ ಮಕ್ಕಳು ಪಲ್ಸ್ ಪೋಲಿಯೋ ಲಸಿಕೆ ವಂಚಿತರಾಗದಂತೆ ಅಧಿಕಾರಿಗಳು ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಹೇಳಿದರು.

ಬುಧುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಎರಡನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ೨೦೨೪ರ ಜಿಲ್ಲಾಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರ್.ಸಿ.ಎಚ್. ಅಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ ಅವರು ಮಾತನಾಡಿ, ಈಗಾಗಲೇ ತಾಲ್ಲೂಕುಗಲ್ಲಿ ಟಾಸ್ಕಪೋರ್ಸ ಸಭೆಗಳನ್ನು ಅಧಿಕಾರಿಗಳು ಮಾಡಿದ್ದಾರೆ.

Contact Your\'s Advertisement; 9902492681

ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಸಿಬ್ಬಂದಿ ವರ್ಗದವರಿಗೆ ಸೂಚನೆ ನೀಡಲಾಗಿದೆ ೧೦೦ ರಷ್ಟು ಗುರಿ ಸಾಧಿಸುವ ಗುರಿಹೊಂದಲಾಗಿದೆ.೨೦೨೪ರ ಮಾರ್ಚ್ ೩ ರಂದು ಭಾನುವಾರದಂದು ಪೋಲಿಯೊ ಭೂತ ಮುಖಾಂತರ ೦-೫ ವರ್ಷದ ಮಕ್ಕಳಿಗೆ ಬಾಯಿಯ ಮೂಲಕ ೨ ಹನಿ ಪೊಲೀಯೋ ಲಸಿಕೆಯನ್ನು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.

ಉಳಿದ ೩ ದಿನಗಳು ಆರೋಗ್ಯ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಮಕ್ಕಳಿಗೆ ಲಸಿಕೆಯನ್ನ ನೀಡಲಾಗುವುದು ಎಂದರು.

ಈ ಪೋಲಿಯೊ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯಲ್ಲಿನ ಒಟ್ಟು ಗುರಿ ೩೪೧೯೬೧ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಮನೆಗಳು ೫೭೨೮೬೪ ಭೇಟಿ ನೀಡುವ ಗುರಿಹೊಂದಿದೆ ಪೋಲಿಯೊ ಭೂತಗಳು ೧೫೧೭, ಮನೆಗೆ ಭೇಟಿ ನೀಡುವ ತಂಡಗಳು ೧೫೧೭ ಟ್ರಾಂಸಿಟ್ ತಂಡಗಳು (ಬಸ್ ನಿಲ್ದಾಣ/ ರೈಲು ನಿಲ್ದಾಣ) ೧೩೫, ಸಂಚಾರಿ ತಂಡಗಳು -೩೨ ಈ ಕಾರ್ಯಕ್ರಮದಲ್ಲಿ ಒಟ್ಟು ೩೩೦ ಪೋಲಿಯೊ ಕಾರ್ಯಕ್ರಮದ ಮೇಲ್ವಿಚಾರಕರು ಹಾಗೂ ೩೩೬೮ ಲಸಿಕೆ ನೀಡುವ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮತ್ತು ಜಿಲ್ಲಾ ಪಂಚಾಯತ ಸಿಇಓ ಭಂವರ್ ಸಿಂಗ್ ಮೀನಾ ಅವರು ಫೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದರು.

ಡಿಹೆಚ್ಓ ಡಾ.ರತಿಕಾಂತ ಸ್ವಾಮಿ ,ಜಿಲ್ಲಾ ಶಸ್ತ್ರಜ್ಞರು ಮತ್ತು ಅಧಿಕ್ಷಕರು ಜಿಮ್ಸ್ ಆಸ್ಪತ್ರೆ ಡಾ. ಅಂಬಾರಾಯ ರುದ್ರವಾಡಿ, ಜಿಲ್ಲಾ ಸಿ ಸಿ ಟಿ ಅಧಿಕಾರಿಗಳು ಡಾ. ವಿವೇಕಾನಂದ ರೆಡ್ಡಿ, ಜಿಲ್ಲಾ ಡಿ ಎಲ್ ಓ ಅಧಿಕಾರಿಗಳು ಡಾ. ರಾಜಕುಮಾರ ಕುಲಕರ್ಣಿ, ಜಿಲ್ಲಾ ಎನ್ ವಿ ಡಿ ಬಿಸಿ ಅಧಿಕಾರಿಗಳು ಡಾ. ಬಸವರಾಜ ಗುಳಗಿ, ಕಲಬುರಗಿ ತಾಲೂಕಿನ ತಾಲೂಕ ಆರೋಗ್ಯ ಅಧಿಕಾರಿಗಳು ಡಾ. ಮಾರುತಿ ಕಾಂಬಳೆ , ಜಿಲ್ಲಾ ಆಕುಕ ತರಬೇತಿ ಕೇಂದ್ರದ ಪ್ರಾಂಶುಪಾಲರು ಡಾ. ರವಿಕಾಂತಿ ಕ್ಯಾತನಾಳ, ಉಪ ನಿರ್ದೇಶಕರು ಮ ಮ ಕ ಇ ನವೀನ ಕುಮಾರ, ಜಿಲ್ಲಾ ಅಯುಷ ಅಧಿಕಾರಿಗಳು ಡಾ. ಗಿರಿಜಾ , ಡಿ ಎಲ್ ಓ . ತಿಪ್ಪಮ್ಮ ಮಾನಕರ್, ಮತ್ತು ಡಿಪಿಸಿ ವಿರೇಶ ಜವಳಕರ್, ಜಿಲ್ಲಾ ಸಂಯೋಜಕ ರವೀಂದ್ರ ಠಾಕೂರ್, ಜಿಲ್ಲಾ ಸಂಯೋಜಕರು ಆರ್ ಕೆ ಎಸ್ ಕೆ. ಶಿವಕುಮಾರ್ ಕಾಂಬಳೆ , ಜಿಲ್ಲಾ ಎಸ್ ಎನ್ ಸಿ‌ಯು. ಮಕ್ಕಳ ಆರೋಗ್ಯ ಸಮಾಲೋಚಕ ಮಂಜುನಾಥ ಕಂಬಾಳಿಮಠ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here