ನನ್ನ ಶಾಲೆ ನನ್ನ ಜವಾಬ್ದಾರಿ ಯೋಜನೆ ಫಲಪ್ರದದಾಯಕವಾಗಲಿದೆ

0
14

ಶಹಾಬಾದ:ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳಿಗೆ ಜವಾಬ್ದಾರಿ ನೀಡುವ ಯೋಜನೆಯೇ ‘ನನ್ನ ಶಾಲೆ; ನನ್ನ ಜವಾಬ್ದಾರಿ’. ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ನಗರಸಭೆಯ ಪ್ರಭಾರಿ ಆಯುಕ್ತರಾದ ಐಎಎಸ್ ಅಧಿಕಾರಿ ಗಜಾನನ ಬಾಳೆ ಹೇಳಿದರು.

ಅವರು ಸರಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾದ ನನ್ನ ಶಾಲೆ ನನ್ನ ಜವಾಬ್ದಾರಿ ಎಂಬ ಯೋಜನೆಯ ಮೂಲಕ ಹಳೆ ವಿದ್ಯಾರ್ಥಿಗಳ ಸಲಹೆ-ಸೂಚನೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಸರಕಾರಿ ಶಾಲೆಗಳ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳ ಸಂಘ ರಚಿಸಿ,ಸರಕಾರಿ ಶಾಲೆಯ ಆಸ್ತಿ ಕಾಪಾಡುವ ನಿಟ್ಟಿನಲ್ಲಿ ಈ ಯೋಜನೆ ಫಲಪ್ರದದಾಯಕವಾಗಲಿದೆ. ತಾವು ಕಲಿತ ಶಾಲೆಯನ್ನು ಮೊದಲು ಭೇಟಿ ನೀಡುವ ಮೂಲಕ ಅದರ ಸ್ಥಿತಿ ನೋಡಿ ಅಥವಾ ತಾವು ಇರುವ ಸ್ಥಳದಲ್ಲೇ ಈ ಕುರಿತು ಮಾಹಿತಿ ಪಡೆದು, ಯಾವ ರೀತಿ ಅಭಿವೃದ್ಧಿ ಆಗಬೇಕು. ಯಾವ ರೀತಿ ಅಭಿವೃದ್ಧಿ ಮಾಡಬಹುದು ಎಂಬುದರ ಕುರಿತು ಸಲಹೆಗಳನ್ನು ನೀಡಬಹುದು. ಅದಕ್ಕೆ ಬೇಕಾದ ಪೂರಕ ಸಹಾಯವನ್ನು ಹಿರಿಯ ವಿದ್ಯಾರ್ಥಿಗಳು ಮಾಡಬಹುದಾಗಿದೆ.

ನಗರದ 71 ವರ್ಷದ ಸರಕಾರಿ ಬಾಲಕರ ಪ್ರೌಢ ಶಾಲೆಯನ್ನು ನಗರಸಭೆಯ 15 ಲಕ್ಷ ರೂ.ಗಳ ಅನುದಾನದಲ್ಲಿ ಉನ್ನತೀಕರಿಸುವ ಮೂಲಕ ಹೊಸ ನೋಟವನ್ನು ನೀಡಬೇಕಾಗಿದೆÉ. ಹಳೆ ವಿದ್ಯಾರ್ಥಿಗಳಿಂದ ಸಲಹೆ ಮತ್ತು ಆರ್ಥಿಕ ಸಹಕಾರ ಪಡೆದು ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಸಾಮಗ್ರಿಗಳು ಒಗ್ಗೂಡಿಸುವ ಪ್ರಯತ್ನ ಮತ್ತು ಸರಕಾರಿ ಶಾಲೆಯ ಆಸ್ತಿ ಕಾಪಾಡುವ ಕೆಲಸ ಮಾಡಬೇಕಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಮಾತನಾಡಿ, ಸರಕಾರ ಎಲ್ಲಾ ಸೌಲಭ್ಯಗಳನ್ನು ನೀಡುತ್ತದೆ. ಆದರೆ ಅದರ ಸದ್ಬಳಕೆ ಆಗುತ್ತಿಲ್ಲ. ಸರಕಾರಿ ಶಾಲೆ ಎಂದರೆ ಅದು ಎಲ್ಲರ ಆಸ್ತಿ.ಆದರೆ ಜನರು ಆ ಬಗ್ಗೆ ತಾತ್ಸಾರ ಮನೋಭಾವನೆ ತೋರುತ್ತಿದ್ದಾರೆ. ಇದು ನಮ್ಮೂರ ಶಾಲೆ, ನಾನು ಕಲಿತ ಶಾಲೆ ಎಂಬ ಮನೋಭಾವನೆಯನ್ನು ಬೆಳೆಸಿಕೊಂಡು ಸರಕಾರಿ ಶಾಲೆಗಳ ಕಡೆಗೆ ಗಮನ ಹರಿಸಿ ಕಾಪಾಡಿಕೊಂಡು ಹೋಗುವುದು ನಮ್ಮ ನಿಮ್ಮ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಸಹಕರಿಸಿ ಎಂದು ಹೇಳಿದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಪ್ರಕಾಶ ನಾಯ್ಕೋಡಿ, ಬಿಆರಸಿ ಮಲ್ಲಿಕಾರ್ಜುನ ಸೇಡಂ, ನಗರ ಸಭೆಯ ಸದಸ್ಯೆ ಲಕ್ಷ್ಮಿಬಾಯಿ ಕುಸಾಳೆ, ಎಇಇ ಶರಣು ಪೂಜಾರ ವೇದಿಕೆ ಮೇಲೆ ಇದ್ದರು.

ಹಳೆ ವಿದ್ಯಾರ್ಥಿಗಳ ಪರವಾಗಿ ಕೃಷ್ಣಪ್ಪ ಕರಣಿಕ, ಶರಣು ವಸ್ತ್ರದ, ವಿದ್ಯಾಧರ ಹುಗ್ಗಿ, ಮೋಹನ ಘಂಟ್ಲಿ ಮತ್ತು ರಮೇಶ ಭಟ್ ಮಾತನಾಡಿದರು.

ಮುಖ್ಯ ಗುರು ಏಮನಾಥ ರಾಠೋಡ ಸ್ವಾಗತಿಸಿದರು, ಶಿಕ್ಷಕಿಯರಾದ ವಾಣಿಶ್ರೀ ಮತ್ತು ವಿಜಯಲಕ್ಷ್ಮಿ ಪಾಟೀಲ ನಿರೂಪಿಸಿದರು, ಶಿಕ್ಷಕಿ ಜಯಶ್ರೀ ವಂದಿಸಿದರು.

ನಗರಸಭೆ ವ್ಯವಸ್ಥಾಪಕ ಶರಣಗೌಡ ಪಾಟೀಲ, ರಘುನಾಥ ನರಸಾಳೆ, ಸಾಬಣ್ಣ ಸುಂಗಲಕರ್,ಮಹ್ಮದ ಮೈನೋದ್ದಿನ, ಶಿವರಾಜಕುಮಾರ, ಶಿಕ್ಷಕಿ ಸಾವಿತ್ರಿ ಮತ್ತು ಹಳೆ ವಿದ್ಯಾರ್ಥಿಗಳಾದ ಶರಣಗೌಡ ಪಾಟೀಲ, ಬಸವರಾಜ ಮಯೂರ, ಅರುಣ ಸುಲ್ವೇದಾರ, ಅನಂತಯ್ಯ ಕಟ್ಟಿಮನಿ, ನಾಗಣ್ಣ ಪಾಟೀಲ, ಬಿಎಸ ಕಾಂಬಳೆ, ತಿಪ್ಪಣ್ಣ ಧನ್ನೆಕರ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here