Tuesday, July 16, 2024
ಮನೆಬಿಸಿ ಬಿಸಿ ಸುದ್ದಿಏ.13ರಿಂದ 17ರವರೆಗೆ ಹುಣಸಿಹಡಗಿಲನಲ್ಲಿ ಜೈನ ಧರ್ಮದ ಪಂಚಕಲ್ಯಾಣ ಮಹಾ ಮಹೋತ್ಸವ

ಏ.13ರಿಂದ 17ರವರೆಗೆ ಹುಣಸಿಹಡಗಿಲನಲ್ಲಿ ಜೈನ ಧರ್ಮದ ಪಂಚಕಲ್ಯಾಣ ಮಹಾ ಮಹೋತ್ಸವ

ಕಲಬುರಗಿ: ತಾಲೂಕಿನ ಸೂಕ್ಷೇತ್ರ ಹುಣಸಿಹಡಗಿಲ ಗ್ರಾಮದಲ್ಲಿರುವ ದಿಗಂಬರ ಜೈನ ಮಹಾಸಭಾ ಲಕ್ಕೋ ಇವರ ಸಹಯೋಗದಿಂದ ಜೀರ್ಣೋದ್ದಾರವಾದ ಪುರಾತನ ತ್ರಿಕೂಟ ಜಿನಮಂದಿರದ 1008 ಶ್ರೀ ಶಾಂತಿನಾಥ ಭಗವಾನ ಮಂದಿರದ ಧಾಮ ಸಂಪ್ರೋಕ್ಷಣ ಹಾಗೂ ಜಿನಬಿಂಬ ಶುದ್ಧ 1008 ಶ್ರೀ ಮುನಿಸುವ್ರತನಾಥ ಭಗವಾನರ ಹಾಗೂ 1008 ಶ್ರೀ ಮಹಾವೀರ ಭಗವಾನರ ಪಂಚಕಲ್ಯಾಣ ಪ್ರತಿಷ್ಠಾ ಎ. 13 ರಿಂದ 17ವರೆಗೆ 1008 ಪಾರ್ಶ್ವನಾಥ ಭಗವಾನ ಮತ್ತು ಶ್ರೀ ಧರಣೇಂದ್ರಶ್ರೀ ಪದ್ಮಾವತಿದೇವಿ ದಿಗಂಬರ ಜೈನ ಅತಿಶಯ ಕ್ಷೇತ್ರ ಟ್ರಸ್ಟ್ (ರಿ) ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜ್ಞಾಶ್ರಮಣ ಸಾರಸತ್ವಾಚಾರ್ಯ ಪರಮಪೂಜ್ಯ ಶ್ರೀ 108 ಶ್ರೀ ದೇವನಂದಿ ಮುನಿ ಮಹಾರಾಜರ ಮಾರ್ಗದರ್ಶನದಲ್ಲಿ ಪರಮಪೂಜ್ಯ 108 ಶ್ರೀ ಸಕಲಕೀರ್ತಿ ಮುನಿಮಹಾರಾಜರ ಹಾಗೂ 105 ಪರಮಪೂಜ್ಯ ಅರ್ಕಕೀರ್ತಿ ಕ್ಷುಲ್ಲಕರು ಇವರುಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ: ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಹೊಂಬುಜ ಜೈನಮಠ ಇವರ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆ ಪಂಚಕಲ್ಯಾಣ ಮಹಾಮಹೋತ್ಸವ ಜರುಗಲಿದೆ ಎಂದು ಮಹೋತ್ಸವದ ಮಾಧ್ಯಮ ಸಂಯೋಜಕರಾದ ಸುರೇಶ ಎಸ್.ತಂಗಾ ರವರು ತಿಳಿಸಿದ್ದಾರೆ.

ಐದು ದಿನಗಳ ಕಾಲ ಜರುಗಲಿರುವ ಈ ಸಮಾರಂಭದಲ್ಲಿ ವರೂರ. ಸೋಂದಾ, ಎನ್.ಆರ್.ಪುರ, ನಾಂದಣಿ. ಕೊಲ್ಲಾಪೂರ ಜೈನಮಠಗಳ ಭಟ್ಟಾರಕರ ಉಪಸ್ಥಿತಿಯಲ್ಲಿ ದಿನಾಂಕ: 13 ಪ್ರಥಮ ದಿನ ಗರ್ಭ ಕಲ್ಯಾಣ. 14 ರಂದು ಪವಿತ್ರ ಜನ್ಮ ಕಲ್ಯಾಣ. 15 ರಂದು ದೀಕ್ಷ ಕಲ್ಯಾಣ ಮತ್ತು ದಿನಾಂಕ 16 ರಂದು ಕೇವಲ ಜ್ಞಾನ ಕಲ್ಯಾಣ, ಕೊನೆಯ ದಿನ 17 ರಂದು ಮೋಕ್ಷ ಕಲ್ಯಾಣ, ಪ್ರೊ. ಡಾ: ಪಂಡಿತ ಮಹಾವೀರ ಪ್ರಭಾಚಂದ್ರ ಶಾಸ್ತ್ರಿ ಸೊಲಾಪೂರ ಮುಖ್ಯ ಪ್ರತಿಷ್ಟಾಚಾರ್ಯ ಶಾಂತಿನಾಥ ಪಂಡಿತ ತಡಕಲ್ ಪ್ರತಿಷ್ಠಾಚಾರ್ಯರು, ಅನಂತಕುಮಾರ ಮಾಲಗತ್ತಿ ಸೋಲಾಪೂರ ಸಹ ಪ್ರತಿಷ್ಠಾಚಾರ್ಯರಾಗಿ ಇವರ ಸನ್ಮಾರ್ಗದರ್ಶನದಲ್ಲಿ ಸಕಲ ಧಾರ್ಮಿಕ ವಿಧಿ-ವಿಧಾನ ಸಮಾರಂಭಗಳು ಜರುಗಲಿವೆ.

ಈ ಭವ್ಯ ಸಮಾರಂಭಕ್ಕೆ ನಾಡಿನ ಹರಗುರು ಚರಮೂರ್ತಿಗಳು, ರಾಜಕೀಯ ಧುರೀಣರು, ಕವಿ-ಕಲಾವಿದರು ಭಾಗವಹಿಸುವರು. ಈಗಾಗಲೇ ಪುಣ್ಯಕ್ಷೇತ್ರ ಹುಣಸಿಹಡಗಿಲ ಗ್ರಾಮವು ಸಮಾರಂಭಕ್ಕಾಗಿ ಸಕಲ ರೀತಿಯಿಂದ ಸನ್ನದ್ದಗೊಂಡಿದ್ದು ಸಕಲ ಹುಣಸಿಹಡಗಿಲ ಗ್ರಾಮಸ್ಥರು ಹಾಗೂ ಕಲಬುರಗಿ ಜಿಲ್ಲಾ ಸಕಲ ಜೈನ ಸಮಾಜ ಬಾಂಧವರು, ಹುಣಸಿಹಡಗಿಲ ಟ್ರಸ್ಟ್‌ನ ಸಮಸ್ತರು ಪಂಚಕಲ್ಯಾಣ ಸಮಾರಂಭದ ಯಶಸ್ವಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಗಲಿರುಳು ಶ್ರಮಿಸುತ್ತಿದ್ದು ವಿವಿಧ ಸಮಿತಿಗಳನ್ನು ರಚಿಸಿ ಪಂಚಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸುವ ಕರ್ನಾಟಕ ಸೇರಿದಂತೆ ರಾಜ್ಯದ ಮತ್ತು ದಕ್ಷಿಣ ಭಾರತದಾದ್ಯಂತ ಆಗಮಿಸುವ ಶ್ರಾವಕ-ಶ್ರಾವಕಿಯರಿಗೆ ಹಾಗೂ ಭಕ್ತಾದಿಗಳಿಗೆ ಅಚ್ಚುಕಟ್ಟಾದ ವಸತಿ ಮತ್ತು ಪ್ರಸಾದ ವ್ಯವಸ್ಥೆ ನಿರ್ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿದಿನ ಯಾತ್ರಾರ್ಥಿಗಳಿಗೆ ಆಗಮಿಸಲು ಕಲಬುರಗಿ ನಗರದ ಸಿಟಿಬಸ್ ನಿಲ್ದಾಣದಿಂದ ಸುಕ್ಷೇತ್ರ ಹುಣಸಿಹಡಗಿಲವರೆಗೂ ಸರಕಾರಿ ಸಾರಿಗೆ ವ್ಯವಸ್ಥೆ ಇದೆ.ಇಂತಹ ಪುಣ್ಯಮಯ ಸಮಾರಂಭದಲ್ಲಿ ಸಮಸ್ತರು ಭಾಗವಹಿಸಿ, ಶ್ರೀ ಧರಣೇಂದ್ರ ಪದ್ಮಾವತಿ ಅಮ್ಮನವರ ಆಶೀರ್ವಾದ ಪಡೆದು ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular