ಕೊಲುವೆನೆಂಬ ಭಾಷೆ ದೇವನದಾದರೆ ಗೆಲುವೆನೆಂಬ ಭಾಷೆ ಭಕ್ತನದಾಗಬೇಕು

0
61

ಬಸವಾದಿ ಶರಣರ ರಚನೆಯ ವಚನ ಎನ್ನುವುದು ಬಹಳ ಮೌಲಿಕವಾದ ನುಡಿ. ‘ವ’ ಎಂಬ ಸೂತ್ರವನ್ನು ಬಿಡಿಸುವುದಾದರೆ, ವ ಎಂಬ ಮೊದಲ ಸೂತ್ರ ಬಿಡಿಸಿ ಹೇಳುವುದಾದರೆ ವಚನದಲ್ಲಿ ಶುದ್ಧನಾಗಿರು ಎಂದರ್ಥ.

ಮಾತನಾಡುವ ಮೂಲಕ ಮನುಷ್ಯ. ಮಾತಿನಿಂದ ಮನುಷ್ಯತ್ವ. ಮಾತು ಮನುಷ್ಯನ ಬಹು ದೊಡ್ಡ ಸಂಪತ್ತು. ಮಾತನಾಡುವ ಯೋಗ್ಯತೆಯನ್ನು ಪ್ರಕೃತಿದತ್ತವಾಗಿ ಪಡೆದುಕೊಂಡ ಮನುಷ್ಯನ ವಚಿಸುವಿಕೆ ಶುದ್ಧವಾಗಿರಬೇಕು. ಮಾತಿನಲ್ಲಿ ಸತ್ಯ ತುಂಬಿರಬೇಕು.

Contact Your\'s Advertisement; 9902492681

೧೨ನೇ ಶತಮಾನದ ಶರಣರು ವಾಚಾಳಿಗಳಂತೆ ವಚಿಸಲಿಲ್ಲ. ನುಡಿದಂತೆ ನಡೆದ ಶರಣರು ತಾವು ಬರೆದಂತೆ ಬಾಳಿದರು. ನಡೆದಂತೆ ನುಡಿದ ಅವರ ಅನುಭಾವದ ನುಡಿಗಳು ವಚನಗಳಾದವು. ಅಂತೆಯೇ ವಿಚಾರವಂತರು
ವಚನಗಳನ್ನು ತತ್ವಶಾಸ್ತ್ರದ ಸಂಗಮ ಎಂದು ಕರೆದರು.

ಜಂಬೂದ್ವೀಪದ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯ ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದು
ಗೆಲುವೆನೆಂಬ ಭಾಷೆ ಭಕ್ತನದು
ಸತ್ಯವೆಂಬ ಕೂರಲಗನೆ ಎತ್ತಿಕೊಂಡು
ಸದ್ಭಕ್ತರು ಗೆದ್ದರು ಕಾಣಾ
ಕೂಡಲಸಂಗಮದೇವಾ

ಎಂಬ ಬಸವಣ್ಣನವರ ವಚನವು ಶರಣರ ವಚನ ಹಾಗೂ ಮಾತಿನ ಮಹತ್ವ ತಿಳಿಸಿಕೊಡುವುದಲ್ಲದೆ ಶರಣರ ನಿಲುವು ತೋರಿಸಿಕೊಡುವಂತಿದೆ.

ಜ್ಞಾನ, ವಿಜ್ಞಾನ ಸುಜ್ಞಾನಗಳ ಸಂಗಮವೇ ವಚನ ಸಾಹಿತ್ಯ. ಇದರಲ್ಲಿ ಅಂಗ ಬದುಕಿನಿಂದ ಲಿಂಗ ಬದುಕಿನೆಡೆಗೆ ಸಾಗುವ ಮೌಲ್ಯಗಳಿವೆ. ಶರಣರ ಮುಂದೆ ಬದುಕಿನ ಗುರಿ, ನಿಲವು ಸ್ಪಷ್ಟವಾಗಿತ್ತು.

ಶರಣರ ಆನುಭಾವಿಕ ವಚನಗಳನ್ನು ಮುಂದಿಟ್ಟುಕೊಂಡು ‘ ನುಡಿದರೆ ಮತ್ತಿನ ಹಾರ, ಸ್ಪಟಿಕದ ಸಲಾಕೆ ಅಷ್ಟೇ ಏಕೆ ಆ ಲಿಂಗವೇ ಮೆಚ್ಚಿ ಹೌದು, ಹೌದು ಎನ್ನುವಂತೆ ಬದುಕಬೇಕು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here