ಅಮರನಾಥ ಪಾಟೀಲ ಪರ ಬಸವರಾಜ ಮದ್ರಿಕಿ ಪ್ರಚಾರ

0
45

ಶಹಾಬಾದ: ಕ್ಷೇತ್ರದ ಹಲವು ಕಡೆ ಪ್ರವಾಸ ಮಾಡಿದಾಗ ಪದವೀಧರರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು, ಈ ಬಾರಿ ಅಮರನಾಥ ಪಾಟೀಲರ ಗೆಲುವು ಖಚಿತ ಎಂದು ಬಿಜೆಪಿ ಜಿಲ್ಲಾ ಮುಖಂಡ ಬಸವರಾಜ ಮದ್ರಿಕಿ ಹೇಳಿದರು.

ಅವರು ರವಿವಾರ ತೊನಸನಹಳ್ಳಿ(ಎಸ್) ಗ್ರಾಮದ ಪದವೀಧರ ಮತದಾರರ ಮನೆಮನೆಗೆ ತೆರಳಿ ಪಧವೀಧರರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಅವರ ಪರ ಮತಯಾಚಿಸಿ ಮಾತನಾಡಿದರು.

Contact Your\'s Advertisement; 9902492681

ಪದವೀಧರರು ಹಲವುಬಾರಿ ಬಿಜೆಪಿಯನ್ನೇ ಬೆಂಬಲಿಸುತ್ತ ಬಂದಿದೆ ಕಳೆದ ಬಾರಿ ಕೆಲ ಕಾರಣದಿಂದ ಸೋಲಬೇಕಾಯಿತು ಈ ಬಾರಿ ಎಲ್ಲ ಕಡೆ ಪರಿಚಿತರಾದ ನಮ್ಮ ಅಭ್ಯರ್ಥಿ ಅಮರನಾಥ ಪಾಟೀಲ ಅವರಿಗೆ ಅತೀ ಹೆಚ್ಚು ಮತ ನೀಡಿದರೆ ಗೆಲುವು ಸುಲಭವಾಗಿತ್ತದೆ ಅಲ್ಲದೇ ಕಾಂಗ್ರೆಸ್ ಭ್ಯರ್ಥಿ ಕಳೆದ ಬಾರಿ ಗೆಲುವು ಸಾಧಿಸಿದ ನಂತರ ಸದನದಲ್ಲಿ ಒಂದು ಪ್ರಶ್ನೆ ಕೇಳಿಲ್ಲ.

ಪದವೀಧರರ ಸಮಸ್ಯೆಯ ಕುರಿತು ಮಾತನಾಡಿಲ್ಲ ಎಂದು ಪದವೀಧರರು ಅಳಲು ತೋಡಿಕೊಂಡಿದ್ದಾರೆ.ಅಲ್ಲದೇ ಅವರ ಕಾರ್ಯಕರ್ತರಿಗೆ ಒಂದು ಬಾರಿ ಮಾತನಾಡಿಲ್ಲ.ಕರೆ ಮಾಡಿದರೇ ಸ್ಪಂದಿಸಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.ಇದರಿಂದ ಮತದಾರರು ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.ಅಮರನಾಥ ಪಾಟೀಲ್ ಅವರು ವಿಧಾನ ಪರಿಷತ್ ಸದಸ್ಯರಿದ್ದಾಗ ಚೆನ್ನಾಗಿಯೇ ಕೆಲಸ ಮಾಡಿದ್ದರು.

ಈ ಹಿಂದೆ ಪದವೀಧರರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಬೆಳಕು ಚೆಲ್ಲಿ ನ್ಯಾಯಕ್ಕಾಗಿ ಹೋರಾಡಿದ್ದರು. ಕ್ಷೇತ್ರದ ತುಂಬೆಲ್ಲ ಹೆಚ್ಚು ಚಿರಪರಿಚಿತರಾಗಿದ್ದವರು. ಕಳೆದ ಬಾರಿ ಕೆಲ ಕಾರಣದಿಂದ ಟಿಕೆಟಕೈ ತಪ್ಪಿತು. ಈ ಬಾರಿ ಅವರಿಗೆ ನಮ್ಮ ಪಕ್ಷದ ಟಿಕೆಟ್ ನೀಡಲಾಗಿದೆ.ಹೀಗಾಗಿ ಪದವೀಧರ ಮತದಾರರು ಅತಿ ಹೆಚ್ಚು ಮತದಾನ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಪ್ರಕಾಶರೆಡ್ಡಿ ಮಾತನಾಡಿ, ಕಳೆದಬಾರಿ ನಮ್ಮ ಅಭ್ಯರ್ಥಿ ಗೆಲ್ಲುವ ಭರವಸೆ ಇತ್ತು ಆದರೆ ಮತಗಳಿದಂದ ಸೋತಿದ್ದೇವೆ. ಆದರೆ ಈ ಬಾರಿ ನಮ್ಮ ಪಕ್ಷದ ಅಭ್ಯರ್ಥಿ ಅಮರನಾಥ ಪಾಟೀಲ ಅವರು ವಿದ್ಯಾರ್ಥಿಗಳ ಅನೇಕ ಸಮಸ್ಯೆಗಳ ಪರ ಧ್ವನಿಯಾಗಿ ಕೆಲಸಮಾಡಿ ಪದವೀಧರರಿಗೆ ಬೆನ್ನೆಲೂಬಾಗಿ ನಿಂತಿದ್ದಾರೆ ಎಂದರು. ಪದವೀಧರರು ನಮ್ಮ ಅಭ್ಯರ್ಥಿ ಪರ ಹೆಚ್ಚಿನ ಒಲವು ತೋರುತಿದ್ದಾರೆ ಹೀಗಾಗಿ ನಮ್ಮ ಅಭ್ಯರ್ಥಿ ಗೆಲ್ಲುವ ಭರವಸೆ ನಮಗಿದೆ ಎಂದರು.

ಸಿದ್ದು ಗೊಳೇದ್,ಶಿಶರಣಪ್ಪ ಪೊಲೀಸ್ ಪಾಟೀಲ,ಮಹೇಶ ಬಂದಳ್ಳಿ, ಬೆಳ್ಳೆಪ್ಪಾ ಖಣದಾಳ, ಸಿದ್ದಣ್ಣ ಭಮ್ಮಶೆಟ್ಟಿ,ರಮೇಶ ನಾಟೇಕಾರ,ಮಲ್ಲಿಕಾರ್ಜುನ ಇಂಗಿನ್,ಮಲ್ಲು ಗೊಳೇದ್,ರಾಜು ಹಲಕರ್ಟಿ,ಮಲ್ಲು ಗೊಳೇದ್ ,ಹೊನ್ನಪ್ಪಗೌಡ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here