ಮಾಧಕ ವಸ್ತುಗಳ ಸೇವೆನೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ

0
46

ಕಲಬುರಗಿ: ಜಿಲ್ಲೆಯಲ್ಲಿ ಸಾಕಷ್ಟು ಕಾನೂನುಗಳನ್ನು ತಂದರು ಕೂಡ ಮಾಧಕ ವಸ್ತುಗಳ ಸೇವೆನೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಧೀಶ  ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಲಬುರಗಿ ಸದಸ್ಯ ಕಾರ್ಯದರ್ಶಿಗಳಾದ ಶ್ರೀನಿವಾಸ ನವಲೆ ಹೇಳಿದರು.

ಬುಧುವಾರದಂದು ಜಿಮ್ಸ್ ಕಮುನಿಟಿ ಮೆಡಿಸನ್ ಹಾಲ್‍ನಲ್ಲಿ ಜಿಲ್ಲಾ ಪಂಚಾಯತ್,ಜಿಮ್ಸ್ ಆಸ್ಪತ್ರೆ,ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟೀಯ ಮಾದಕವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕ ವಿರೋಧಿ ದಿನವನ್ನು ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಈ ಹಿಂದೆ ಅμÉ್ಟೂಂದು ಮಾಧಕ ವಸ್ತುಗಳು ಸಿಗುತ್ತಿರಲಿಲ್ಲ ಕಳ್ಳಬಟ್ಟಿ ಸಾರಾಯಿ ಸೇವೆನೆ ಮಾಡುತ್ತಿದ್ದರು ಕಳ್ಳಬಟ್ಟಿ ಸಾರಾಯಿ ಸೇವನೆಯಿಂದ ಅನೇಕ ಜನರ ಸಾವನ್ನಪ್ಪುತ್ತಿದ್ದರು. ಜಿಲ್ಲಾಡಳಿತ ಅವರು ಈಗ ಮಾಧಕ ವಸ್ತುಗಳ ಹವಾಳಿ ಜಾಸ್ತಿಯಾಗಿದೆ ಎಂದರು.

ಮಾಧಕ ವಸ್ತುಗಳ ಸೇವೆನೆಯಿಂದ ನಮ್ಮ ಆರೋಗ್ಯ ಮೇಲೆ ದುಷ್ಪಪರಿಣಾಮ ಬಿಳುತ್ತದೆ ಮಾಧಕ ವಸ್ತುಗಳ ಮೇಲೆ ಒಂದು ಕಾನೂನು ಇದೆ ಮಾಧಕ ವಸ್ತುಗಳನ್ನ ಸಾಗಿಸುವದಾಗಲಿ ಮಾಧಕ ವಸ್ತುಗಳನ್ನ ಬೆಳೆಯುವದಾಗಲಿ ಮತ್ತು ಸಂಗ್ರಹ ಮಾಡುವದಾಗಲಿ ಇದೆಲ್ಲವೂ ಅಪರಾಧ ಎಂದರು.

ಬಳಿಕ ಮಾತನಾಡಿದ ಜಿಲ್ಲಾಮನೋವೈದ್ಯರು ಜಿಲ್ಲಾ ಮಾನಸಿಕ ಆರೋಗ್ಯ ಡಾ. ಮಹಮ್ಮದ್ ಇರಫಾನ್ ಮಹಾಗಾವಿ ಡ್ರಗ್ಸ್ ಅನ್ನು ಸಂಪೂರ್ಣ ನಿಮೂರ್ಲನೆ ಮಾಡುವಂಥದ್ದು ನಮ್ಮ ಗುರಿಯಾಗಿದೆ. ಡ್ರಗ್ಸ್ ಸೇವಿಸುವುದರಿಂದ ಮೆದುಳೆಗೆ ಮತ್ತು ದೇಹಕ್ಕೆ ಹಾನಿಯಾಗುವಂತಹ ಮಾಧಕ ವಸ್ತುವಿಗೆ ಡ್ರಗ್ಸ್ ಎಂದು ಕರೆಯುತ್ತಾರೆ. ಡ್ರಗ್ಸ್ ಸೇವೆನೆಯಿಂದ ದೈಹಿಕ ಸಮಸ್ಯೆ, ಹಣಕಾಸಿನ ಸಮಸ್ಯೆ, ಮಾನಸಿಕ ಸಮಸ್ಯೆ, ಸಮಾಜಿಕ ಸಮಸ್ಯೆಗೆ ಗುರಿಯಾಗುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮನೋವೈದ್ಯರು ಹಾಗೂ ಮುಖ್ಯಸ್ಥರು ಮನೋವೈದ್ಯಕೀಯ ವಿಭಾಗ ಜಿಮ್ಸ್ ಆಸ್ಪತ್ರೆ  ಪ್ರಭು ಕಿರಣ ವ್ಹಿ ಗೋಗಿ, ಪ್ರಬಾರಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು, ಕಲಬುರಗಿ ಡಾ. ವಿವೇಕಾನಂದ ರೆಡ್ಡಿ ಹಾಗೂ ಶಾಲೆ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here