ಕಲಬುರಗಿ: ನಗರದ ಸೆಂಟ್ ಮೇರಿ ಶಾಲೆಯಲ್ಲಿ 5 ರಿಂದ 9 ನೇ ತರಗತಿಯ 200 ಶಾಲಾ ಮಕ್ಕಳಿಗೆ ಆನಾಪಾನ ಧ್ಯಾನ ಕಾರ್ಯಕ್ರಮವು ಜರುಗಿತು.
ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ಬಹು ಉಪಯುಕ್ತವಾದ ಧ್ಯಾನ ಇದಾಗಿದೆ ಎಂದು ವಿದ್ಯಾರ್ಥಿಗಳಿಗೆ ಆನಾಪಾನ ಕಾರ್ಯಕ್ರಮವು ವಿಪಸನ ಪ್ರಚಾರ ಸಮಿತಿ ತಿಳಿಸಿತು.
ಆನಾಪಾನ ಕಾರ್ಯಕ್ರಮದಲ್ಲಿ ಮಧುರ ಸೌಹುಕಾರ್ ವಿಪಾಸನ ಮತ್ತು ಧಮ್ಮಸೇವಕರಾದ ಲಕ್ಷ್ಮಿಹುಬ್ಬಳಿ ಪ್ರದೀಪ್ ಲಾಲ್ ರಾಜಮಹಿಂದ್ರ ಕಿರಣಗಿ ಆನಾಪಾನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದ್ದರು. ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.