ಅಯಾಜೊದ್ದೀನ್ ಪಟೇಲ್ ಗೆ ಮುಮ್ತಾಜ್ ಶಿರೀನ್ ಪ್ರಶಸ್ತಿ ಪ್ರದಾನ

0
30

ಕಲಬುರಗಿ: ನಗರದ ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಣದಲ್ಲಿ ಯುನೈಟೆಡ್ ಕೌನ್ಸಿಲ್ ಫಾರ್ ಎಜುಕೇಷನ್ ಆ್ಯಂಡ್ ಕಲ್ಟರ್ ಹಾಗೂ ಮೆಹೆಫಿಲ್-ಎ- ನಿಸಾ ಸಂಘಟನೆ ವತಿಯಿಂದ ಆಯೋಜಿಸಿದ್ದ ‘ಉರ್ದು ದಿನ’ ಕಾರ್ಯಕ್ರಮದಲ್ಲಿ ಕಲಬುರಗಿಯ ಹಿರಿಯ ಕಲಾವಿದರಾದ ಅಯಾಜೊದ್ದೀನ್ ಪಟೇಲ್ ಗೆ ಅವರಿಗೆ ಮುಮ್ತಾಜ್ ಶಿರೀನ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೆಹಫಿಲ್ -ಎ-ನಿಸಾ ಸಂಘಟನೆಯ ಅಧ್ಯಕ್ಷೆ ಡಾ.ಶಾಯಿಸ್ತಾ ಯೂಸುಫ್ ವಹಿಸಿದ್ದರು. ಅತಿಥಿಗಳಾಗಿ ಸಾಹಿತಿಗಳಾದ ಇಜಾಝ್ ಅಲಿ ಜೊಹರಿ, ಡಾ.ಅಝಾ ನಬ್ಬಿ, ಇಟ್ಬಾಲ್ ಅಹ್ಮದ್ ಬೇಗ್, ಪ್ರೊ.ಅಲೋಕ್ ರಾಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನಿವೃತ್ತ ಪ್ರಾಧ್ಯಾಪಕಿ ಪ್ರೊ. ಸಬೀಹಾ ಝುಬೇರ್ ಕಾರ್ಯಕ್ರಮ ನಿರೂಪಿಸಿದರು. ವಿವಿಧಶಾಲೆಯ ಮಕ್ಕಳು ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ಮಾಡಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here