ಜೇವರ್ಗಿ: ತಾಲೂಕಿನ ಜನರ ಸೇವೆಗಾಗಿ ಕಲಬುರಗಿಯ ಇಸ್ಲಾಮಾಬಾದ ಕಾಲೋನಿಯ ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಿಕೊಟ್ಟರು.
ಪಟ್ಟಣದ ಮೈಬೂಬ ಫಂಕಷನ್ ಹಾಲ್ ನಲ್ಲಿ ಬಾನುವಾರ ಆರೋಗ್ಯ ತಪಾಸಣೆ ಶಿಬಿರವು ಜರುಗಿತು.
ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಜನರು ಈ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು. ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ನೂರಾರು ಜನರು ಬಂದು ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು. ಬಿ ಪಿ, ರಕ್ತ ಪರಿಕ್ಷೆ, ಇ ಸಿ ಜಿ, ಸೇರಿದಂತೆ ಅನೇಕ ತಪಾಸಣೆಗಳನ್ನ ಮಾಡಿ, ರೋಗಿಗಳಿಗೆ ಔಷದಿಗಳನ್ನ ಉಚಿತವಾಗಿ ನೀಡಲಾಯಿತು.
ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯ ಇಸ್ಲಾಮಾಬಾದ ಕಾಲೋನಿಯ ಅಲ್ ಶಿಫಾ ಆಸ್ಪತ್ರೆಗೆ ಬೇಟಿ ಕೊಟ್ಟರೆ, ತಪಾಸಣೆ ಶುಲ್ಕದಲ್ಲಿ ೫೦ ಪ್ರತಿಶತ ಕಡಿಮೆ ಮಾಡಲಾಗುವುದು ಎಂದು ತಿಳಿಸಿದರು. ಈ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿ ಸಾರ್ವಜನಿಕರಿಗೆ ತಿಳಿದಿದ್ದರಿಂದ ಅನೇಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಅಲ್ ಶಿಫಾ ಆಸ್ಪತ್ರೆಯ ಮುಖ್ಯಸ್ಥ ಡಾ. ಶೋಹೇಬ್ ಅಸ್ಲಂ, ಡಾ. ಮುತ್ತಿಬ, ಡಾ. ಸಿರಜ ಸಗರಿ, ಡಾ. ತೋಸಿಫ್ ಬಡಾಗರ್, ನಿವೃತ ಆರ್ ಟಿ ಓ ಜಾವಿದ್ ಸಾಬ್, ಅಬ್ದುಲ್ ಸತ್ತಾರ್ ಸಾಹಬ್ ಗಿರಣಿ, ಅಲ್ಲಾಬಕಾಶ್ ಬಾಗ್ಬಾನ್, ಮೋಹಿಯುನುದ್ದಿನ್ ಇನಾಮದಾರ, ವಸಿಂ ಬಾಗ್ಬಾನ್ ಸೋಲಾಪೂರಿ, ದಾವುದ್ ಸಾಬ್ ಇನಾಮದಾರ, ಶೇಕ್ ಸದ್ದಾಮ ಹುಸೇನ್, ನಿಸಾರ್ ಇನಾಮದಾರ ಸೇರಿದಂತೆ ಸಿಬ್ಬಂದಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.