ಡಾ. ಮಾಜಿದ್ ದಾಗಿ ಉತ್ತರ ಪ್ರದೇಶದ ಸರಕಾರ ಅಕಾಡೆಮಿಯಿಂದ ಅತ್ಯುತ್ತಮ ಕೃತಿ ಪ್ರಶಸ್ತಿಗೆ ಆಯ್ಕೆ

0
61

ಕಲಬುರಗಿ: ಉತ್ತರ ಪ್ರದೆಶ ಸರಕರದ ಅಧೀನಕ್ಕೊಳಪಡುವ ಉರ್ದು ಅಕಾಡೆಮಿ 2018ನೇ ಸಾಲಿನ ಅತ್ಯುತ್ತಮ ಕೃತಿಗಳಲ್ಲಿ  ಕರ್ನಾಟಕದ ಕಲಬುರಗಿ ಜಿಲ್ಲೆಯ ಡಾ. ಮಾಜಿದ್ ದಾಗಿಯವರ ಕೃತಿಯನ್ನು ಆಯ್ಕೆ ಮಾಡಿ ಪ್ರಶಸ್ತಿಯನ್ನು  ಉತ್ತರ ಪ್ರದೇಶ ಉರ್ದು ಅಕಾಡೆಮಿಯ ಕಾರ್ಯದರ್ಶಿಗಳಾದ ಎಸ್. ರಿಝವಾನ್ ರವರು ಅಧಿಕೃತವಾಗಿ ಪ್ರಕಟಿಸಿರುತ್ತಾರೆ.

ಡಾ. ಮಾಜಿದ್ ದಾಗಿಯವರು ಬರೆದಿರುವ ಅಸ್ರೀ ಫಿಕರೆ ನೌ ಕೃತಿಗೆ ಈಗಾಗಲೇ ಕರ್ನಾಟಕ ಸರಕಾರದ ಉರ್ದು ಅಕಾಡೆಮಿಯ ವತಿಯಿಂದ ಪುರಸ್ಕರಿಸಿ ಡಾ. ಮಾಜಿದ್ ದಾಗಿಯವರಿಗೆ 2018 ರಲ್ಲಿಯೇ 25000 ರೂ. ಬಹುಮಾನದೊಂದಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು.

Contact Your\'s Advertisement; 9902492681

ಈ ಕೃತಿಗೆ ಉತ್ತರ ಪ್ರದೇಶ ಉರ್ದು ಅಕಾಡೆಮಿಯೂ ಸಹ ಗಂಭೀರವಾಗಿ ಪರಿಗಣಿಸಿ ಅತ್ಯುತ್ತಮ ಕೃತಿ ಎಂದು ಪುರಸ್ಕರಿಸಿ ಡಾ. ಮಾಜಿದ್ ದಾಗಿಯವರಿಗೆ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರಕಟಿಸಿರುತ್ತಾರೆ. ಉರ್ದು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಂಶೋಧನೆ ನಡೆಸಿರುವ ಡಾ. ಮಾಜಿದ್ ದಾಗಿಯವರು  ಆರು ಉರ್ದು ಸಂಶೋಧನಾ ಗ್ರಂಥಗಳನ್ನು ಬರೆದಿರುತ್ತಾರೆ.  ಜೊತೆಗೆ ಇವರು ಉರ್ದು ಮತ್ತು ಪರ್ಶಿಯನ್ ಭಾಷೆಗಳ ಸಂಶೋಧನಾ ಕಾರ್ಯಗಳಲ್ಲಿ ನಿರತರಾಗಿರುವ ಇವರು ಈ ಕ್ಷೇತ್ರದಲ್ಲಿ ಕರ್ನಾಟಕದಾದ್ಯಂತ ಪ್ರತಿಷ್ಠಿತ ವ್ಯಕ್ತಿಯಾಗಿರುತ್ತಾರೆ. ಬಹುಭಾಷಾ, ಲೋಕ ಸಾಹಿತ್ಯ ಮಂಚ್ ಕಾರ್ಯದರ್ಶಿಗಳಾದ ಇವರು ಗುಲಬರ್ಗಾ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರಾಗಿ, ಲೇಖಕರಾಗಿ, ಕವಿಗಳಾಗಿ, ಸಾಹಿತಿಗಳಾಗಿ, ಪತ್ರಕರ್ತರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಇವರು ಅಂಜುಮನ್-ತರಖ್ಖಿ-ಉರ್ದು-ಎ-ಹಿಂದ್, ಕಲಬುರಗಿಯ ಕಾರ್ಯದರ್ಶಿಗಳಾಗಿ, ಹೈದ್ರಾಬಾದ ಕರ್ನಾಟಕ ಪ್ರದೆಶ ಇತಿಹಾಸ ರಚನಾ ಸಮಿತಿಯ ಸದಸ್ಯರಾಗಿ, ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಹಿರಿಯ ಉಪಾಧ್ಯಕ್ಷರಾಗಿ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಹ  ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಡಾ. ಮಾಜಿದ್ ದಾಗಿಯವರು ಸುಮಾರು ೬೦ಕ್ಕೂ ಮೇಲ್ಪಟ್ಟು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನಗಳಲ್ಲಿ, ವಿಚಾರಸಂಕಿರಣಗಳಲ್ಲಿ ಭಾಗವಹಿಸಿ ಅನೇಕ ಸಂಶೋಧನಾ ವಿಷಯಗಳನ್ನು ಮಂಡಿಸಿರುತ್ತಾರೆ. ಇವರು ಬರೆದಿರುವ ೫೦ಕ್ಕೂ ಮೇಲ್ಪಟ್ಟು ಸಂಶೋಧನಾ ಲೇಖನಗಳು ಅಂತರಾಷ್ಟ್ರೀಯ ಜರ್ನಲ್ಸ್‌ಗಳಲ್ಲಿ  ಪ್ರಕಟಗೊಂಡಿವೆ.  ಅದರಂತೆ ೩೦ಕ್ಕೂ ಹೆಚ್ಚು ಸರಕಾರಿ ಮತ್ತು ಅರೆಸರಕಾರಿ ಸಂಸ್ಥೆಗಳಿಂದ ಡಾ.ಮಾಜಿದ್ ದಾಗಿಯವರಿಗೆ ಪ್ರಶಸ್ತಿಗಳು ಪ್ರದಾನವಾಗಿವೆ. ನೂರಕ್ಕೂ ಮೇಲ್ಪಟ್ಟು ಕಾರ್ಯಕ್ರಮಗಳು ಆಕಾಶವಾಣಿ, ದೂರದರ್ಶನ ಹಾಗೂ ವಿವಿಧ ಚಾನೆಲ್‌ಗಳಲ್ಲಿ ನೀಡಿರುತ್ತಾರೆ. ಇವರು ಸತತವಾಗಿ ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಐಕ್ಯತೆ, ಮಹಿಳೆಯರ ಹಕ್ಕುಗಳು, ಶಾಂತಿ ಸೌಹಾರ್ದತೆಯ ಪೂರಕವಾಗಿ ಇನ್ನೂ ಸಹ ಸಂಶೋಧನಾತ್ಮಕ ಲೇಖನಗಳು ರಚನೆ ಕಾರ್ಯ ಮುಂದುವರೆಸಿರುವುದು ಶ್ಲಾಘನಿಯವಾದ ವಿಷಯವಾಗಿದೆ.

ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿ ಕೇಂದ್ರ ಸ್ಥಾನದಲ್ಲಿರುವ ಡಾ.ಮಾಜಿದ್ ದಾಗಿಯವರು ಉರ್ದು ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದ ಉರ್ದು ಅಕಾಡೆಮಿಯಿಂದ ಅತ್ಯುತ್ತಮ ಕೃತಿಗೆ ಆಯ್ಕೆಯಾಗಿರುವುದು ಸ್ವಾಗತಾರ್ಹವಾದ ಮತ್ತು ಅಭಿನಂದನಾರ್ಹವಾದ ವಿಷಯವಾಗಿದೆ. ಅಷ್ಟೇ ಅಲ್ಲದೆ ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಅದಲ್ಲದೆ ಕರ್ನಾಟಕ ರಾಜ್ಯಕ್ಕೆ ಗೌರವದ ವಿಷಯವಾಗಿದೆ ಎಂದು ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ, ಮುಖಂಡರುಗಳಾದ ಮನೀಷ್ ಜಾಜು, ಶಿವಲಿಂಗಪ್ಪ ಬಂಡಕ್, ಎಚ್.ಎಂ. ಹಾಜಿ, ಅಬ್ದುಲ ರಹೀಮ್, ಅಸ್ಲಂ ಚೌಂಗೆ, ಬಸವರಾಜ ಚಿಡಗುಪ್ಪಿ, ವಿಶಲದೇವ ಧನೇಕರ ಶಿವುಕುಮಾರ ಬಿರಾದಾರ ಸೇರಿದಂತೆ ಅನೇಕರು ಡಾ. ಮಾಜಿದ್ ದಾಗಿಯವರಿಗೆ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here