ಮಹಿಳೆಯರ ಸುರಕ್ಷತೆಗೆ ಕಠಿಣ ಕ್ರಮಕ್ಕೆ ಶೈನಾಜ್ ಅಕ್ತರ ಆಗ್ರಹ

0
484

ಕಲಬುರಗಿ: ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ದೇಶದಲ್ಲಿ ಹೆಚ್ಚಾಗುತ್ತಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷ ಮಹಿಳೆಯರನ್ನು ಅವಹೇಳನ ಮಾಡುವ ಸಿನಿಮಾ ಮತ್ತು ಜಾಹೀರಾತುಗಳ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಠಿಣ ಕ್ರಮಕೈಗೊಳ್ಳಬೇಕೆಂದು ಇಂಡಿಯನ್ ನ್ಯಾಷನಲ್ ಟ್ರೇಡ್ ಯುನಿಯನ್ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶೈನಾಜ್ ಅಕ್ತರ್ ಅವರು ಒತ್ತಾಯಿಸಿದ್ದಾರೆ.

ಹೆಣ್ಣು ಮಕ್ಕಳಿಗೆ ಹೈಸ್ಕೂಲ್ ಹಂತದಲ್ಲಿ ಮಹಿಳಾ ಸುರಕ್ಷತೆ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಎಲ್ಲ ಹೆಣ್ಣು ಮಕ್ಕಳಿಗೆ ಸುರಕ್ಷತೆಗೆ ಬೇಕಾಗಿರುವಂತಹ ಮಾಹಿತಿಯನ್ನು ನೀಡುವ ಕೆಲಸ ಸರಕಾರಗಳಿಂದ ಆಗಬೇಕೆಂದು ಒತ್ತಾಯಿಸಿದ್ದ ಅವರು ದೇಶದಲ್ಲಿ ಅತ್ಯಾಚಾರಿಗಳನ್ನು ಸಂಸ್ಕಾರಿ ಎಂದು ಸನ್ಮಾನ ಮಾಡುವುದು ಅತ್ಯಾಚಾರಿಗಳಿಗೆ ಸರಕಾರ ಮತ್ತು ರಾಜಕಾರಣಿಗಳು ಬೆನ್ನೆಲುಬು ಆಗಿ ನಿಲ್ಲುತ್ತಿರುವುದರಿಂದ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ.

Contact Your\'s Advertisement; 9902492681

ಇತ್ತೀಚಿನ ದಿನಗಳಲ್ಲಿ ಮಹಿಳೆಯನ್ನು ಅವಹೇಳನಕಾರಿಯಾಗಿ ಬಿಂಬಿಸುವ ವೆಬ್ ಸೀರಿಸ್ ಗಳು ಮತ್ತು ಸಿನಿಮಾಗಳು ದೇಶದಲ್ಲಿ ಬೆಡುಗಡೆ ಆಗುತ್ತಿವೆ. ಅಲ್ಲದೇ ಜಾಹಿರಾತುಗಳಲ್ಲಿ ಮಹಿಳೆಯರನ್ನು ಚಿತ್ರಿಸುವಂತಹ ರೀತಿಯುವು ಅತ್ಯಾಚಾರಕ್ಕೆ ಕಾರಣವಾಗುವಂತಾಗಿದೆ ಆದರಿಂದ ಇಂತಹ ಸಣ್ಣ ಸಣ್ಣ ವಿಷಯಗಳನ್ನು ಗಮನಿಸಿ ಸರಕಾರಗಳು ಕಠಿಣ ಕಾನೂನು ರೂಪಿಸುವುದು ಅಗತ್ಯವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತ್ಯಾಚಾರಗಳಿಗೆ ಅತ್ಯಾಚಾರಿಗಳಿಗೆ ರಾಜಕೀಯ ಮತ್ತು ರಾಜಕಾರಣಿಗಳ ನಿಕಟ ಸಂಬಂಧ ಇರುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮತ್ತು ಕಾನೂನು ಜಾರಿಗೆ ಹಿನ್ನಡೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here