ಚಿಂಚೋಳಿ: ಕಂಪನಿಯ ಮತ್ತು ಕಾರ್ಮಿಕ ಕಾಯ್ದೆಗಳನ್ನು ನಿರಂತರವಾಗಿ ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ಇಲ್ಲಿನ ಮೇಟ್ರಿಕ್ ಆಗ್ರೋ ಪವರ್ ಲಿಮಿಟೆಡ್ ಪೋಲಕಪಳ್ಳಿ ಕಾರ್ಖಾನೆ ವಿರುದ್ಧ ಭಾರತ ಮುಕ್ತಿ ಮೋರ್ಚಾ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕಂಪನಿಯ ಕಪ್ಪು ಹೋಗೆ ಹೋರಸೊಸುವ ವಿಭಾಗದಲ್ಲಿ ಫೋಕಿಂಗ ಬೈಲರಗಳಿಗೆ ಸಂಬಂಧಪಟ್ಟ ಎಪಿಎಚ್ ಮತ್ತು ಈಎಸಪಿಗಳು ಕೆಟ್ಟು ಹೋಗಿರುವುದರಿಂದ ಕಪ್ಪು ಹೋಗೆ ಹೋರಹೋಗದೆ ಕಂಪನಿ ಒಳಭಾಗದಲ್ಲಿಯೇ ಅತ್ಯಾಧಿಕ ಕಪ್ಪು ಹೊಗೆ ಹೋರಸೂಸುತ್ತಿರುವುದರಿಂದ ಕೆಲಸ ಮಾಡುವ ಕಾರ್ಮಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಅಲ್ಲದೆ ಸಾರ್ವಜನಿಕರಿಗೆ ಮತ್ತು ಕಂಪನಿ ಮುಂಬಾಗದಲ್ಲಿರುವ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿಗಳ ಆರೋಗ್ಯಕ್ಕೆ ಸಮಸ್ಯಯಾಗುತ್ತಿದ್ದು, ಕೊಡಲೆ ಕಂಪನಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಮತ್ತು ಸೇಪ್ಟಿ ಸಾಮಾಗ್ರಿಗಳು ನೀಡದೆದುಡಿಸಿಕೊಳ್ಳುತ್ತಿದೆ, ಕಾರ್ಮಿಕರಿಗೆ ವಿಶ್ರಾಂತಿ ಕೋಣೆ ಮತ್ತು ಶೌಚಾಲಯ ವಿಲ್ಲ, ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವಂತೆ ಸರ್ಕಾರ ಆಧೇಶ ಹೊರಡಿಸಿದರು ಸಹಿತ ಈ ಕಂಪನಿಯವರು ಕನಿಷ್ಠ ವೇತನ ನೀಡದೆ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಆರೋಪಿ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡ ಮಾರುತಿ ಗಂಜಗಿರಿ, ಗೋಪಾಲ ಗಾರಂಪಳ್ಳಿ, ಮೋಹನ ಐನಾಪುರ, ರಾಜಕುಮಾರ್ ಚಿಮ್ಮಾಯಿದ್ಲಾಯಿ, ಮೌನೇಶ್ ಗಾರಂಪಳ್ಳಿ, ಶಿವರಾಜ ಚಿಮ್ಮಾಯಿದ್ಲಾಯಿ, ಬಸವಸಾಗರ, ಮಹೇಶಕುಮಾರ, ಬಸವರಾಜ, ಉಮೇಶ್, ಶ್ರೀಮಂತ ಪವನ, ಸಾಗರ, ದೀಲಿಫ, ಪ್ರಶಾಂತ, ಮಲ್ಲಿಕಾರ್ಜುನ, ಈಶಪ್ಪಾ, ಮಾಹಂತೇಶ, ಮಧುಸೂದನ, ವೀಠಲ್, ಸಂಜುಕುಮಾರ, ಈರಯ್ಯ, ನಾಗರಾಜ ಸೇರಿದಂತೆ ಹಲವರು ಇದ್ದರು.
ಅಲ್ತಾಫ್ ಖಾನ್ ಮುಂತಾದವರು ಉಪಸ್ಥಿತರಿದ್ದರು