ಕಲಬುರಗಿ: ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ ಹಕ್ಕು ಪತ್ರಕ್ಕಾಗಿ ಡಿ.ಡಿ ಕಟ್ಟಿ ಒಂದು ವರ್ಷ ಕಳೆದರೂ ಸಹ ಹಕ್ಕು ಪತ್ರ ನೀಡುತ್ತಿಲ್ಲ, ದಿನಾಲೂ ಒಂದಲ್ಲ ಒಂದು ನೆಪ ಹೇಳಿ, ಜನರಿಗೆ ಅಲೆದಾಡಿಸುತ್ತಿದ್ದಾರೆ ಮತ್ತು ಸ್ಲಂ ಘೋಷಣೆ ಅರ್ಜಿ ಹಾಕಿ 03 ವರ್ಷ ಗತಿಸಿದರೂ ಸಹ ಘೋಷಣೆ ಪ್ರಕ್ರಿಯೇ ಪ್ರಾರಂಭ ಮಾಡಿರುವುದಿಲ್ಲ. ಅದಕ್ಕಾಗಿ ಹಕ್ಕು ಪತ್ರ ನೀಡುವವರೆಗೆ ಮತ್ತು ಸ್ಲಂ ಘೋಷಣೆ ಆಗುವವರೆಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಛೇರಿ ಎದುರುಗಡೆ ನಿರಂತರ ಧರಣಿ ನಡೆಯಿತು.
ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ಉಪಾಧ್ಯಕ್ಷೆ ಗೌರಮ್ಮ ಮಾಕಾ, ಮಾರುತಿ ಮಿನುಗಾರ, ದ್ಯಾವಮ್ಮ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.