ಪಡಸಾವಳಿಲ್ಲಿ ನಿವೃತ್ತ ಸೈನಿಕನಿಗೆ ಅದ್ದೂರಿಯಿಂದ ಗ್ರಾಮಸ್ಥರಿಂದ ಸ್ವಾಗತ

0
45

ಆಳಂದ; ಇಂದಿನ ವ್ಯವಸ್ಥೆಯಲ್ಲಿ ದೇಶ ಸುರಕ್ಷಿತವಾಗಿರಬೇಕಾದರೆ ಗಡಿ ಭಾಗದಲ್ಲಿ ಸೈನಿಕರ ಸೇವೆ ಅಪಾರವಾಗಿದೆ. ಜಾತಿ ಭೇದ ನಮ್ಮಲ್ಲಿ ಬೇಡ ನಾವು ಎಲ್ಲರೂ ಒಂದಾಗಿ ದೇಶಾಭಿಮಾನಿಗಳು ಆಗೋಣ ಎಂದು ಪಡಸಾವಳಿ-ಡೋಣಗಾಂವ ಮಠದ ಪೀಠಾಧಿಪತಿ ಡಾ. ಶಂಭುಲಿಂಗ ಶಿವಾಚಾರ್ಯರು ನುಡಿದರು.

ಭಾನುವಾರ ತಾಲೂಕಿನ ಪಡಸಾವಳಿ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಗೆಳೆಯ ಬಳಗ ವತಿಯಿಂದ ಸಿಐಎಸ್‍ಎಫ್ ನಿವೃತ್ತ ಸಿದ್ಧರಾಮ ಹಣಮಂತರಾವ ಮುನೋಳಿ ಅವರಿಗೆ ಏರ್ಪಡಿಸಿದ ಮಾತೃಭೂಮಿ ಸ್ಮರಣೆಯಲ್ಲಿ ಸೈನಿಕರಿಗೊಂದು ಸಲಾಂ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ತಂದೆ, ತಾಯಿ ರೈತ ಸೈನಿಕರಿಗೆ ಗೌರವಿಸುವ ದೇಶ ಅದು ಭಾರತ ಪ್ರತಿಯೊಂದು ಮನೆಗೊಬ್ಬ ಸೈನಿಕರಾಗಿ ಹೊರ ಹೊಮ್ಮಬೇಕು, ಪ್ರತಿ ಹಂತದಲ್ಲಿ ಪಡಸಾವಳಿ ಗ್ರಾಮವು ಹೆಸರುವಾಸಿಯಾಗಿದೆ, ಮುನೋಳಿಯವರು ಸತತವಾಗಿ 40 ವರ್ಷ ದೇಶ ಸೇವೆಗೈದು ಮರಳಿ ತಾಯನ್ನಾಡಿಗೆ ಬಂದಿದಕ್ಕೆ ಇಲ್ಲಿಯ ಮಣ್ಣಿನ ಖುಣ ಹಾಗೂ ಗ್ರಾಮದ ಧರ್ಮರಾಯ ದೇವರ ಆಶೀರ್ವಾದ ಅವರ ಮೇಲೆಯಿದೆ, ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.

Contact Your\'s Advertisement; 9902492681

ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ದಿನೇ ದಿನೇ ಆತಂಕವಾದಿಗಳು ಹೆಚ್ಚಾಗುತ್ತಿದ್ದಾರೆ. ಗಡಿ ಭಾಗದಲ್ಲಿ ಸೈನಿಕರು ಕಣ್ಣಿಗೆ ನಿದ್ದೆ ಇಲ್ಲದೇ ಹಗಲು ರಾತ್ರಿ ಕಾಯುತ್ತಿರುವುದರಿಂದ ದೇಶದ ಒಳಭಾಗದಲ್ಲಿ ನಾವು ಸುಖರವಾಗಿದ್ದೇವೆ, ನಾನು ಶಾಸಕನ್ನಾಗಿದ್ದಾಗ ಚೀನಾ, ಕಾಶ್ಮೀರ ಗಡಿ ಭಾಗದಲ್ಲಿ ಭೇಟಿ ಕೊಟ್ಟು ಸೈನಿಕರ ನಿಜ ಜೀವನ, ಸ್ಥಿತಿಗತಿ ಕಣ್ಣಾರೆ ಕಂಡಿದ್ದೇನೆ ಅವರಿಗೆ ದಿನಾಲು ಗೌರವಿಸಬೇಕಾಗಿದೆ. ಅವರ ಜೀವನ ಅತ್ಯಂತ ಕಠಿಣವಾಗಿದೆ, ಇದನ್ನು ಅರಿತು ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರಿಗೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದಾರೆ. ಮುನೋಳಿಯವರು ಕೂಡಾ ದೇಶ ಸೇವೆಗೈದು ನಿರಾಳವಾಗಿ ತಮ್ಮ ಹುಟ್ಟುರಿಗೆ ಮರಳಿ ನಮ್ಮಗೆ ಸಂತಸ ತಂದಿದೆ ಎಂದರು.

ಸನ್ಮಾನ ಹಾಗೂ ಗೌರವ ಸ್ವೀಕರಿಸಿ ಮಾತನಾಡಿದ ಸಿದ್ಧರಾಮ ಮುನೋಳಿಯವರು ತಮ್ಮ ನಿರಂತರ 40 ವರ್ಷಗಳ ಸೇವೆಯಲ್ಲಿ ಹೋರಾಡಿದಕ್ಕೆ ಹಲವು ಪ್ರಶಸ್ತಿಗಳು, ಪದಕಗಳು ಬಂದಿವೆ, ಆದರೆ ಈ ನನ್ನ ಸೇವೆಯಲ್ಲಿ ಕೌಟುಂಬಿಕ ಜೀವನದ ನೋವುಗಳೊಂದಿಗೆ ದೇಶ ಸೇವೆ ಸಲ್ಲಿಸಿದ್ದೇನೆ. ಇಂದು ನಿವೃತ್ತಿ ಹೊಂದಿ ಸ್ವಗಾಮಕ್ಕೆ ಆಗಮಿಸಿದಾಗ ನನ್ನನ್ನು ಗ್ರಾಮಸ್ಥರು, ಗೆಳೆಯರ ಬಳಗ, ಸ್ವಾಗತಿಸಿ ನೋಡಿದರೆ ಸೈನಿಕನಿಗೆ ಸಿಗುವ ಗೌರವ ಎಂತಹದು ಎಂದು ನನಗೆ ಅರಿವು ಆಗಿದೆ ಎಂದು ಹೇಳಿದರು.

ಮಾಜಿ ಸೈನಿಕರಾದ ಕಲ್ಲಪ್ಪ ಘಾಳೆ, ಶಾಂತಮಲ್ಲಪ್ಪ ಪಾಟೀಲ್, ಲಕ್ಷ್ಮಣ ಜಾಧವ, ಸಚೀನ ಘಾಳೆ, ಬಾಬುಜುಬ್ರೆ, ಚಂದ್ರಕಾಂತ ಯಳಮೇಲಿ ಹಾಗೂ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಅಪ್ಪಾಸಾಬ ತೀರ್ಥೆ, ಶಿವಲಿಂಗಪ್ಪ ಪಾಟೀಲ, ತಿಪ್ಪಣ್ಣ ಕುಂಬಾರ, ಮಲ್ಲಯ್ಯ ಮಠಪತಿ, ನರಸಪ್ಪ ಜಮಾದಾರ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖಂಡರಾದ ಮಲ್ಲಣ್ಣಾ ನಾಗೂರೆ, ಆನಂದ ಗಾಯಕವಾಡ, ಮಹೇಶ ಮುನೋಳಿ, ಸಿದ್ಧು ಹಿರೋಳಿ, ಬಾಬು ಕೋರೆ, ಡಾ. ಚಂದ್ರಕಾಂತ ಮುನೋಳಿ, ಪ್ರಕಾಶ ಬೇಳಂ, ರೇವಣಸಿದ್ಧ ಸ್ಥಾವರ ಮಠ, ಬಸವರಾಜ ಷಡಕ್ಷರಿ, ಹಾಜಿ ದಸ್ತಗೀರ ಸಾಬ,ಸುನೀಲ ಬೈಲಾಟೆ, ದರೆಪ್ಪ ಕುಂಬಾರ, ತುಕಾರಾಮ ಘಾಳೆ, ರಮೇಶ ಕೋರಳ್ಳಿ ಸೇರಿದಂತೆ ಗ್ರಾಮಸ್ಥರು, ಗೆಳೆಯರ ಬಳಗದ ಮುಖಂಡರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಾದನಹಿಪ್ಪರಗಾ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಅಭಿನವ ಶಿವವಲಿಂಗ ಮಹಾಸ್ವಾಮಿಗಳು ಯೋಧ ಸಿದ್ಧರಾಮ ಮುನೋಳಿ ಸನ್ಮಾನ ಗೌರವಿಸಿ ಬೈಕ ರ್ಯಾಲಿಗೆ ಚಾಲನೆ ನೀಡಿದರು. ಬಳಿಕ ಸಾವಳೇಶ್ವರ ಕ್ರಾಸ ದಿಂದ ಗ್ರಾಮದ ಧರ್ಮರಾಯ ಗುಡಿಯವರೆಗೆ ತೆರೆದ ಜೀಪ ವಾಹನದಲ್ಲಿ ರಾರಾಜೀಸುತ್ತಿರುವ ರಾಷ್ಟ್ರ ಧ್ವಜಗಳ ಬೈಕ ರ್ಯಾಲಿಗಳೊಂದಿಗೆ ಮೇರವಣಿಗೆ ಮಾಡುತ್ತಾ ಸಿದ್ಧರಾಮ ಮುನೋಳಿರವರನ್ನು ಕರತರಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here