ಸಿಟಿ ಬಸ್‍ಗಳ ಓಡಾಟ ಆರಂಭಿಸಿ ಜನರಿಗೆ ಅನುಕೂಲ ಮಾಡಿ

0
19

ಸುರಪುರ: ನಗರದಲ್ಲಿ ಅನೇಕ ಕಡೆಗಳಿಗೆ ಸಾರ್ವಜನಿಕರ ಓಡಾಟಕ್ಕೆ ಬಸ್‍ಗಳ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗುತ್ತಿದೆ.ಆದ್ದರಿಂದ ನಗರದಲ್ಲಿ ಸಿಟಿ ಬಸ್‍ಗಳ ಓಡಾಟ ಆರಂಭಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ)ದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದರು.

ನಗರದ ಬಸ್ ಡಿಪೋ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಸುರಪುರ ನಗರದ ನ್ಯಾಯಾಲಯ, ಡಿಗ್ರಿ, ಡಿಪ್ಲೋಮಾ ಕಾಲೇಜ್, ಎಪಿಎಮ್‍ಸಿ, ರಂಗಂಪೇಟೆ,ತಿಮ್ಮಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಜನರು ಓಡಾಟಕ್ಕೆ ಆಟೋಗಳನ್ನು ಆಶ್ರಯಿಸುವಂತಾಗಿದೆ.ಇದರಿಂದ ದುಬಾರಿ ಹಣವನ್ನು ನೀಡಿ ಜನರು ಒಡಾಡುವಂತಾಗಿದೆ. ಆದ್ದರಿಂದ ಕೂಡಲೇ ನಗರದಲ್ಲಿ ಸಿಟಿ ಬಸ್‍ಗಳ ಓಡಾಟ ಆರಂಭಿಸಬೇಕು,ಇಲ್ಲವಾದಲ್ಲಿ ಇದೇ 18ನೇ ತಾರಿಖು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಇದಕ್ಕೂ ಸ್ಪಂದನೆ ಸಿಗದಿದ್ದಲ್ಲಿ 24 ರಂದು ಕೆಂಭಾವಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಅಲ್ಲದೆ ಕೆಂಭಾವಿ ಪಟ್ಟಣದಲ್ಲಿ ಖಾಸಗಿ ವ್ಯಕ್ತಿಗಳು ಕರೆ ಮಾಡಿ ಹೇಳಿದರೆ ಕೆಂಭಾವಿಯ ಗಲ್ಲಿಗಳಲ್ಲಿ ಬಸ್ ಓಡಿಸಲಾಗುತ್ತದೆ.ಬಸ್ ಓಡಿಸದ ಚಾಲಕ ಮತ್ತು ನಿರ್ವಾಹಕರ ಹೆಚ್ಚುವರಿ ಭತ್ಯೆ ತಡೆಹಿಡಿಯಲಾಗಿದ್ದು ಕೂಡಲೇ ಭತ್ಯೆ ಬಿಡುಗಡೆ ಮಾಡಬೇಕು ಎಂದು ಎಚ್ಚರಿಸಿದರು.

ನಂತರ ಮನವಿ ಸ್ವೀಕರಿಸಿದ ಡಿಪೋ ಮ್ಯಾನೆಜರ್ ಮಾತನಾಡಿ,ತಾವು ಸಲ್ಲಿಸಿರುವ ಬೇಡಿಕೆಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂ.ಸಂಚಾಲಕ ಮಲ್ಲಿಕಾರ್ಜುನ ಕುರಕುಂದಿ,ಅಜೀಜಸಾಬ್ ಐಕೂರ,ಮಾನಪ್ಪ ಕರಡಕಲ್,ಮಹಾದೇವಪ್ಪ ಬಿಜಾಸಪುರ,ಮಲ್ಲಿಕಾರ್ಜುನ ಶಾಖಾನವರ್,ಮರೆಪ್ಪ ಹಾಲಗೇರ,ರಾಮಣ್ಣ ಶೆಳ್ಳಗಿ,ಬಸವರಾಜ ದೊಡ್ಮನಿ,ಬಸವರಾಜ ಗೋನಾಲ,ದೇವಿಂದ್ರಪ್ಪ ಬಾದ್ಯಾಪುರ,ಮೂರ್ತಿ ಬೊಮ್ಮನಹಳ್ಳಿ,ಜೆಟ್ಟೆಪ್ಪ ನಾಗರಾಳ,ಖಾಜಾಹುಸೇನ್ ಗುಡಗುಂಟಿ,ಶರಣಪ್ಪ ಡಿ.ನಗನೂರ,ಮಹೇಶ ಯಾದಗಿರಿ,ಮಲ್ಲಪ್ಪ ಬಾದ್ಯಾಪುರ,ಸಂಗಪ್ಪ ಚಿಂಚೋಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here