ಅವಧಿ ಮೀರಿದರು ಕಾಮಗಾರಿ ಆರಂಭಿಸಿಲ್ಲದಿದ್ದರೆ ಮರು ಟೆಂಡರ್ ಮಾಡಿ; ಆರ್.ವಿ.ನಾಯಕ

0
21

ಸುರಪುರ:ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಕೆಡಿಪಿ ಸಭೆ

ಸುರಪುರ: ಅಭಿವೃಧ್ಧಿ ವಿಷಯದಲ್ಲಿ ಸದಾಕಾಲ ಬೆಂಬಲವಿದೆ,ಯಾವುದೇ ಕಾಮಗಾರಿ ನಿರ್ಮಿಸಲು ಇರುವ ಅವಧಿ ಮುಗಿದಿದ್ದರು ಕಾಮಗಾರಿ ಆರಂಭಿಸಲ್ಲದಿದ್ದಲ್ಲಿ ಅಂತಹ ಕಾಮಗಾರಿಗಳ ಮರು ಟೆಂಡರ್ ಕರೆಯುವಂತೆ ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.

ನಗರದ ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಒಬ್ಬೊಬ್ಬ ಗುತ್ತಿಗೆದಾರರಿಗೆ ಹೆಚ್ಚು ಕೆಲಸಗಳನ್ನು ಕೊಟ್ಟಿದ್ದರ ಪರಿಣಾದ ಕೆಲಸಗಳ ನಿರ್ಮಾಣ ನಿಧಾನಗತಿಯಾಗಿದೆ ಇದನ್ನು ಸಹಿಸಲಾಗದು ಎಂದರು.

Contact Your\'s Advertisement; 9902492681

ಅಲ್ಲದೆ ಅನೇಕ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಯೋಜನೆ ಕಾಮಗಾರಿಗಳ ಬಗ್ಗೆ ಜನರಿಂದ ದೂರುಗಳು ಕೇಳಿ ಬರುತ್ತಿವೆ ಕೂಡಲೇ ಪೈಪಲೈನ್ ಹಾಕಿದಲ್ಲಿ ಅಗೆದ ರಸ್ತೆಗಳ ದುರಸ್ತಿಗೊಳಿಸುವಂತೆ ತಿಳಿಸಿದರು.

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ರೋಗಗಳ ಬರದಂತೆ ತಡೆಯಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವಂತೆ ತಿಳಿಸಿದರು.

ಎಲ್ಲಿಯಾದರು ಹೊಸ ಹೈಸ್ಕೂಲ್ ಅವಶ್ಯಕತೆ ಇದ್ದಲ್ಲಿ ತಿಳಿಸುವಂತೆ ಹೇಳಿದರು ಹಾಗೂ ಯಾರೇ ಅಧಿಕಾರಿಗಳು ಏನೆ ಸಮಸ್ಯೆ ಇದ್ದಲ್ಲಿ ಗಮನಕ್ಕೆ ತಂದಲ್ಲಿ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ತಾಲೂಕ ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ,ಸಿಡಿಪಿಓ ಅನಿಲ್ ಕುಮಾರ ಕಾಂಬ್ಳೆ,ಲೋಕೊಪಯೋಗಿ ಇಲಾಖೆ ಎಇಇ ಎಸ್.ಜಿ.ಪಾಟೀಲ್,ಕೃಷಿ ಇಲಾಖೆ ಎ.ಡಿ ಭೀಮರಾಯ ಹವಾಲ್ದಾರ್,ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಹಣಮಂತ್ರಾಯ ಪಾಟೀಲ್,ಬಿಇಓ ಯಲ್ಲಪ್ಪ ಕಾಡ್ಲೂರ,ಸಮಾಜ ಕಲ್ಯಾಣ ಇಲಾಖೆ ಎಡಿ ಮಹ್ಮದ್ ಸಲೀಂ, ಸೇರಿದಂತೆ ಸಾಮಾಜಿಕ ಮತ್ತು ಪ್ರಾದೇಶಿ ಅರಣ್ಯ ಇಲಾಖೆ, ಜೆಸ್ಕಾಂ ಇಲಾಖೆ,ತೋಟಗಾರಿಕೆ ಇಲಾಖೆ,ರೇಷ್ಮೆ ಇಲಾಖೆ,ಸಾರಿಗೆ ಇಲಾಖೆ,ಮೀನುಗಾರಿಕೆ ಇಲಾಖೆ,ಕೆಕೆಆರ್‍ಡಿಬಿ,ಭೂ ಸೇನಾ,ಕೆಬಿಜೆಎನ್‍ಎಲ್ ಇಲಾಖೆ,ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆಗಳಲ್ಲಿನ ಅಭಿವೃಧ್ಧಿ ಹಾಗೂ ಕಾಮಗಾರಿಗಳ ವಿವಿರ ನೀಡಿದರು.

ಇದೇ ಸಂದರ್ಭದಲ್ಲಿ ಸಭೆಗೆ ಬಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಭಾಗವಾಗಿಸಿದ್ದ ಹುಣಸಗಿ ತಹಸಿಲ್ದಾರ್ ಬಸಲಿಂಗಪ್ಪ ನಾಯ್ಕೊಡಿ ಹಾಗೂ ತಾಲೂಕ ಪಂಚಾಯತಿ ಇಓ ಬಸವರಾಜ ಸಜ್ಜನ್ ಮಾತನಾಡಿದರು.ಗ್ರೇಡ-2 ತಹಸಿಲ್ದಾರ್ ಮಲ್ಲಯ್ಯ ದಂಡು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here