ಕಲಬುರಗಿ: ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಲೋಕಕಲ್ಯಾಣಾರ್ಥವಾಗಿ ನಡೆಸುತ್ತಿರುವ ಐದನೆಯ ಮೌನ ಅನುಷ್ಠಾನ ಕಾರ್ಯಕ್ರಮವು ಗೋಳಾ (ಕೆ ) ಗ್ರಾಮದ ಅಕ್ಟೊಬರ್ 3 ರಿಂದ 11 ರ ವರೆಗೆ ಒಂಬತ್ತು ದಿನಗಳ ನಡೆಯಲಿದೆ.
ಶ್ರೀ ಸಿದ್ದಲಿಂಗೇಶ್ವರ ಶಾಖಾ ಮಠದಲ್ಲಿ ವಿಜಯದಶಮಿಯ ದಿನ ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಮೌನ ಮಂಗಲವಾಗಲಿದ್ದು ಅಂದು ಸಂಜೆ 6-30 ಗಂಟೆಗೆ ಭಕ್ತರನ್ನು ಉದ್ದೇಶಿಸಿ ವಿಶೇಷ ಆಶೀರ್ವಚನ ದಯಪಾಲಿಸಲಿದ್ದಾರೆ ಎಂದು ಶ್ರೀಮಠದ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ತಿಳಿಸಿದ್ದಾರೆ.