ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ್ಲ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ನಿಕಟ ಪೂರ್ವ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜಪಾಲರು ದೂರುದಾರರ ತನ್ನ ದೂರಿನ ಮೇಲೆ ಸೆಕ್ಷನ್ 218 ಬಿಎನ್‍ಎಸ್‍ಎಸ್ ಪ್ರಾಶುಕ್ಯೂಷನಗೆ ಅನುಮತಿ ಕೇಳಿದ್ದಕ್ಕೆ ಹೈ ಕೋರ್ಟ್ ನ್ಯಾಯಮೂರ್ತಿಗಳು ಸಂಪೂರ್ಣ ತಿರಸ್ಕರಿಸಿದ್ದಾರೆ.
ಸೆಕ್ಷನ್ 17 ಎ ಗೆ ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿದ್ದಾರೆ. ಅಂದರೆ ಮೂಡಾದಲ್ಲಿ ಯಾರು ಯಾರು ಎಷ್ಟು ಜನರು ಭಾಗಿಯಾಗಿದ್ದಾರೆ ಎಂದು 3 ತಿಂಗಳಲ್ಲಿ ಸಂಪೂರ್ಣ ತನಿಖೆಯನ್ನು ಮಾಡಿ ಎಂದು ಹೇಳಿದ್ದಾರೆ ಹೊರತು ರಾಜೀನಾಮೆ ಕೊಡಿ ಎಂದು ಹೇಳಿಲ.್ಲ ಚುನಾವಣಾ ಬಾಂಡ್ ಮೂಲಕ ಸುಲಿಗೆ ಆರೋಪದಡಿಯಲ್ಲಿ ತಿಲಕ್ ನಗರ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದ , ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ.ವಿಜಯೇಂದ್ರ, ರಾಜ್ಯ ಮಾಜಿ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ವಿರುದ್ಧ ಎಫ್ ಐ ಆರ್ ದಾಖಲಿಸಲು ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ಮೊದಲು ಅವರು ರಾಜೀನಾಮೆಯನ್ನು ಕೊಡಲಿ. ಆ ಮೇಲೆ ಬೇರೆಯವರಿಗೆ ಕೇಳಲಿ ಎಂದು ಹೇಳಿದರು.
ಅಲ್ಲದೇ ಬಿಜೆಪಿಗರಿಗೆ 5 ಪ್ರಶ್ನೆಗಳನ್ನು ಕೇಳುತ್ತಿದ್ದೇನೆ.ಅದಕ್ಕೆ ಸೂಕ್ತ ಉತ್ತರ ನೀಡಿ ರಾಜೀನಾಮೆ ಬಗ್ಗೆ ಮಾತನಾಡಲಿ. ಚೌಕಿದಾರ್ ಹೊರದೇಶದಲ್ಲಿರುವ ಕರ್ನಾಟಕದ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುತ್ತೇನೆ ಎಂದವರು ಯಾರು ? ಮೈಸೂರು ಮೂಡಾದ ಸೈಟುಗಳನ್ನು ಯಾವ ಸರ್ಕಾರ ಇದ್ದಾಗ ಹಂಚಿದ್ದಾರೆ ? ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಎರಡುವರೆ ಸಾವಿರ ಕೋಟಿ ರೂಪಾಯಿಗೆ ಹರಾಜು ಹಾಕಿದ್ದಾರೆ ಎಂದು ನಿಮ್ಮ ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಅವರ ಮೇಲೆ ನಿಮ್ಮ ಪಕ್ಷದವರು ಯಾವ ಕ್ರಮವನ್ನು ಕೈಗೊಂಡಿದ್ದಾರೆ ? ಗಣಿ ಆರೋಪ ಹೊತ್ತ ಕುಮಾರಸ್ವಾಮಿ ಅವರು ಮೋದಿಜಿ ಅವರ ಸಂಪುಟದಲ್ಲಿ ಮಂತ್ರಿ ಇದ್ದಾರೆ ಅವರನ್ನು ಯಾವ ರೀತಿಯಾಗಿ ಕ್ಲೀನ್ ಮಾಡಿದ್ದಾರೆಂದು ರಾಜ್ಯದ ಜನತೆ ಮುಂದೆ ಹೇಳಿ ? ಗೋದ್ರ ಹತ್ಯಾಕಾಂಡ ಪ್ರಕರಣದಲ್ಲಿ ಅಂದಿನ ಸಿಎಂ ಮೋದಿಜಿ ರಾಜಿನಾಮೆ ನೀಡಿದ್ದಾರೆಯೇ ? ಬ್ಯಾಂಕ್ ಲೂಟಿ ಮಾಡಿ ಅಂಬಾನಿ, ಅದಾನಿ ಸಂಪತ್ತು ಹೆಚ್ಚು ಮಾಡಲು ದಾರಿ ಮಾಡಿ ಕೊಟ್ಟವರು ಯಾರು ಅಂತ ರಾಜ್ಯದ ಜನರಿಗೆ ಹೇಳಿ? ಈ ಎಲ್ಲಾ ಪ್ರಕ್ರಿಯೆಯನ್ನು ಈ ರಾಜ್ಯದ ಜನತೆ ಸೂಕ್ಷ್ಮವಾಗಿ ನೋಡುತ್ತಿದೆ.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಹಿಂಬಾಗಿಲಿನಿಂದ ರಾಜ್ಯಪಾಲರನ್ನು ಬಳಸಿಕೊಂಡು ಕಿತ್ತೊಗೆಯಲು ಹವಣಿಸುತ್ತಿರುವ ಬಿಜೆಪಿಗರೇ ನಿಮ್ಮ ತಾಟಿನಲ್ಲಿಯೇ ಹೊಲಸು ತುಂಬಿದೆ.ಅದನ್ನು ಸ್ವಚ್ಛಗೊಳಿಸಿರಿ.ಅದನ್ನು ಇಲ್ಲಸಲ್ಲದ ಆರೋಪ ಮಾಡುವುದಕ್ಕೆ ತಮಗೆ ಯಾವುದೇ ನೈತಿಕತೆಯಿಲ್ಲ.ಕೂಡಲೇ ಇದನ್ನು ಬಿಟ್ಟು ಸೌಹಾರ್ದತೆಯ ರಾಜಕಾರಣ ಮಾಡಿ ಎಂದು ಎಚ್ಚರಿಕೆ ನೀಡಿದ್ದಾರೆ.