ಸಂವಾದ ಯುವ ಸಂಪನ್ಮೂಲ ಕೇಂದ್ರದಿಂದ ಬೇಸಿಗೆ ಶಿಬಿರಕ್ಕೆ ಅರ್ಜಿ ಆಹ್ವಾನ

0
137

ಕಲಬುರಗಿ: ಶಿಕ್ಷಣ ಸಂವಾದ, ವೃತ್ತಿ ಮಾರ್ಗದರ್ಶನ, ನಾಟಕ, ಸಿನೆಮಾ, ಸಾಹಿತ್ಯ, ಕಲೆ, ಹಾಡು ಆಟೋಟ ಇವುಗಳನ್ನೆಲ್ಲ ಒಳಗೊಂಡ ಬೇಸಿಗೆ ಶಿಬಿರವು ಆಯೋಜಿಸಲಾಗಿದ್ದು, ಇದರಲಾಭ ಯುವಜನರು ಪಡೆಯಬೇಕೆಂದು ಬದುಕಿನ ದಾರಿ ಬದಲಿಸಲಿದೆ ಎಂದು ಕಲಬುರಗಿ ಸಂವಾದ ಯುವ ಸಂಪನ್ಮೂಲ ಕೇಂದ್ರದ ಸಂಯೋಜಕರು ಅವರು ತಮ್ಮ ಪ್ರಕಣೆಯಲ್ಲಿ ತಿಳಿದ್ದಾರೆ.

ಬೇಸಿಗೆ ಶಿಬಿರ ವಿದ್ಯಾರ್ಥಿನಿಯರಿಗೆ ಮಾತ್ರ ಆಯೋಜಿಸಲಾಗಿದ್ದು, 5 ದಿನಗಳ ಬೇಸಿಗೆ ಶಿಬಿರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಶಿಬಿರದಲ್ಲಿ ಪಿಯುಸಿ ನಂತರ ಮುಂದೇನು?, ಈಗ ಪಿಯು ಓದುತ್ತಿರುವ ಮತ್ತು  ಪದವಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಕಾಡುವ ಪ್ರಶ್ನೆ ಮುಂದೆ ಏನು ಓದಬೇಕು?, ಎಂತಹ ಬದುಕು ಕಟ್ಟಿಕೊಳ್ಳಬೇಕು?, ಎಂತಹ ಹವ್ಯಾಸಗಳನ್ನು ರೂಪಿಸಿಕೊಳ್ಳಬೇಕು?, ಯಾವ ರೀತಿಯ ಸ್ನೇಹ ಸಂಬಂಧಗಳು ಹಿತಕಾರಿ?, ನನ್ನ ಆಸಕ್ತಿಗಳೇನು?, ನನ್ನಲ್ಲಿ ಎಂತಹ ಪ್ರತಿಭೆ ಇದೆ?, ನಾನೇನು ಮಾಡಬಲ್ಲೆ?, ಶಿಕ್ಷಣ ಸಂವಾದ, ವೃತ್ತಿ  ದರ್ಶನ,ನಾಟಕ, ಸಿನೆಮಾ, ಸಾಹಿತ್ಯ, ಕಲೆ, ಹಾಡು ಆಟೋಟ ಇವುಗಳನ್ನೆಲ್ಲ ಒಳಗೊಂಡತೆ ಯುವ ವಿದ್ಯಾರ್ಥಿನಿಯರಿಗೆ ಇರುವ ಗೊಂದಲಗಳಿಂದ ನಿವಾರಿಸುವ ನಿಟ್ಟಿನಲ್ಲಿ ಈ ಬೇಸಿಗೆ ಶಿಬಿರವಾಗಿದ್ದು, ಶಿಬಿರದ ಮೂಲಕ ಬದುಕಿನ ದಾರಿ ಬದಲಿಸಿಕೊಳುವ ನಿಟ್ಟಿನಲ್ಲಿ ಕಾರ್ಯಗಾರಗಳು ಹಮ್ಮಿಕೊಳಲಾಗುವುದು ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿನಿಗೂ ವೈಯಕ್ತಿಕ ಗಮನ ನೀಡಲಾಗುವುದು.

Contact Your\'s Advertisement; 9902492681

ಪಿಯುಸಿ ವಿದ್ಯಾರ್ಥಿನಿಯರಿಗೆ ಮೊದಲ ಆದ್ಯತೆ. ನೋಂದಣಿ ಶುಲ್ಕ ರೂ. 50/- , ಮೊದಲು ಸಂಪರ್ಕಿಸಿದ 25 ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶವಿರುತ್ತದೆ. ನೋಂದಣಿಗೆ ಕೊನೆಯ ದಿನಾಂಕ 05/05/2019. ಮಾಹಿತಿಗೆ ಸಂಪರ್ಕಿಸಿ, ಸಂವಾದ ಯುವಸಂಪನ್ಮೂಲ ಕೇಂದ್ರ, ಗುರುದತ್ತ ಭೋಜನಾಲಯ ಎದುರು, ಐವಾನ್ ಶಾಹಿ ರಸ್ತೆ
ಕಲಬುರಗಿ, ಮೋಬೈಲ್ , 9008330455 ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here