ಸಂವಿಧಾನ ಮೌಲ್ಯ ಅರಿತು ನಡೆದರೆ ದೇಶ ಉನ್ನತ ಸ್ಥಾನದಲ್ಲಿರುತ್ತದೆ: ನಿಂಗಣ್ಣ

0
9

ಶಹಾಬಾದ: ಸಂವಿಧಾನದ ಆಶೋತ್ತರಗಳು, ಮೌಲ್ಯಗಳನ್ನು ಅರಿತು ಅದರಂತೆ ಎಲ್ಲರೂ ನಡೆದರೆ ನಮ್ಮ ದೇಶ ಜಗತ್ತಿನಲ್ಲಿಯೇ ಉನ್ನತ ಸ್ಥಾನದಲ್ಲಿರುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಎಂದರು.

ಅವರು ಮಂಗಳವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ಸಂವಿಧಾನ ಸಮರ್ಪಣಾ ದಿನದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

Contact Your\'s Advertisement; 9902492681

ಈ ಸಂವಿಧಾನ ರಚನೆಯ ಹಿಂದೆ ಅನೇಕ ಮಹಾನ್ ವ್ಯಕ್ತಿಗಳ ಶ್ರಮವಿದೆ. ಆ ಮಹಾನ್ ಪುರುಷರು ಸಂಕಷ್ಟಗಳನ್ನು ಎದುರಿಸಿ ನಮಗೆ ಬದುಕಿನ ಹಕ್ಕನ್ನು ಕಲ್ಪಿಸಿದ್ದಾರೆ.ಅದರಲ್ಲೂ ಡಾ.ಅಂಬೇಡ್ಕರ್ ಸಾಕಷ್ಟು ಅಪಮಾನಕ್ಕೆ ಗುರಿಯಾಗಿದ್ದರೂ ದೇಶಕ್ಕೆ ಒಂದು ಉತ್ತಮ ಕೊಡುಗೆ ನೀಡಿದ್ದಾರೆ. ಆ ಸಂವಿಧಾನ ನಮಗೆ ದಾರಿದೀಪವಾಗಿದೆ.ನಾವು ಕೂಡ ಸಂವಿಧಾನದ ಹಾದಿಯಲ್ಲಿ ನಡೆಯಬೇಕಿದೆ ಎಂದು ಹೇಳಿದರು.

ಮಹಾ ಶಕ್ತಿ ಕೆಂದ್ರ ಅಧ್ಯಕ್ಷ ಬಸವರಾಜ ಬಿರಾದಾರ ಮಾತನಾಡಿ,ಸಂವಿಧಾನ ನಮ್ಮ ಧರ್ಮಗ್ರಂಥವಿದ್ಧಂತೆ.ನಮ್ಮ ಸಂವಿಧಾನದ ಆಶಯ ಆಶೋತ್ತರಗಳು ಜಗತ್ತಿನ ಹಲವು ಯಶಸ್ವಿ ಪ್ರಜಾಪ್ರಭುತ್ವ ದೇಶಗಳ ಸಂವಿಧಾನದಲ್ಲೂ ಅಳವಡಿಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಉತ್ತಮ ಸಂವಿಧಾನ ಎಂದು ಹೇಳಿದರು.

ಬಿಜೆಪಿ ಉಪಾಧ್ಯಕ್ಷ ಮಹಾದೇವ ಗೊಬ್ಬೂರಕರ ಹಾಗೂ ಪ್ರ.ಕಾರ್ಯದರ್ಶಿ ದೇವದಾಸ ಜಾಧವ ಮಾತನಾಡಿ,ಭಾರತದ ಸಂವಿಧಾನದ ಮೂಲ ತತ್ವ ವಿವಿಧತೆಯಲ್ಲಿ ಏಕತೆಯಾಗಿದೆ.
ಸಂವಿಧಾನದ ಆಶೋತ್ತರಗಳು, ಮೌಲ್ಯಗಳನ್ನು ಅರಿತು ಅದರಂತೆ ಎಲ್ಲರೂ ನಡೆಯಬೇಕಿದೆ ಎಂದರು.

ಕಾರ್ಯದರ್ಶಿ ರಾಜು ಕುಂಬಾರ, ಮ.ಶಕ್ತಿ ಕೆಂದ್ರ ಅಧ್ಯಕ್ಷ ಬಸವರಾಜ ಬಿರಾದಾರ, ದೇವೆಂದ್ರಪ್ಪ ಯಲಗೊಡ, ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಬಸವರಾಜ ಹಡಪದ, ಭೀಮಯ್ಯ ಗುತ್ತೆದಾರ, ಶಿವಕುಮಾರ ತಳವಾರ, ಶೀವಕುಮಾರ, ರೇವಣಸಿದ್ದ ಮತ್ತಿಮಡು, ಶ್ರೀನಿವಾಸ ದೇವಕರ, ಮೌನೇಶ ಕೊಡ್ಲಿ ವಿನೋದ ಕಟ್ಟಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಓದಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here