0
18

ನೃಪತುಂಗ ಮಹಾರಾಜರ ಜಯಂತ್ಯುತ್ಸವ

ಇಮೀಡಿಯಾ ಲೈನ್

Contact Your\'s Advertisement; 9902492681

ಕಲಬುರಗಿ: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ “ರಟ್ಟ ಮಾರ್ತಾಂಡದೇವ ರಟ್ಟ ಕುಲ (ರಡ್ಡರು, ರಡ್ಡಿ) ಸೂರ್ಯವಂಶ ರಾಷ್ಟçಕೂಟ ಸಾಮ್ರಾಜ್ಯದ ೮ನೇ ಶತಮಾನದ ರಾಷ್ಟçಕೂಟ ದೊರೆ ಅಮೋಘವರ್ಷ ನೃಪತುಂಗ ಮಹಾರಾಜರ ೧೨೨೪ನೇ ಜಯಂತೋತ್ಸವ” ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದುರ ಮುಖಾಂತರ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಅವರು ಮಾತನಾಡುತ್ತ, ಮಾನವ ಕುಲ ತಾನೊಂದೆ ವಲಂ ಎಂದು ಕನ್ನಡ ನಾಡಿನ ಚಿನ್ನದ ರಾಜ, ಶಾಂತಿ, ಸಹೋದರತೆ, ಸೌಹಾರ್ದತೆಗೆ ಹೆಸರಾದ ಹಾಗೂ ಕನ್ನಡ ಪ್ರಪ್ರಥಮ ಗ್ರಂಥ “ಕವಿರಾಜ ಮಾರ್ಗ”ದ ಕತೃ ಶ್ರೀವಿಜಯರಿಗೆ ಹಾಗೂ ಖ್ಯಾತ ಗಣಿತತಜ್ಞ ಶ್ರೀ ಮಹಾವೀರಾಚಾರ್ಯರಿಗೆ ಆಶ್ರಯದಾತರಾದ ಈ ಅರಸು ೬೪ ವರ್ಷಗಳ ಕಾಲ ಸುದೀರ್ಘವಾಗಿ ಭಾರತ ಮಾತೆಗೆ ಸೇವೆ ಸಲ್ಲಿಸಿದರು. ಬೆಂಗಳೂರಿನ ಪ್ರಮುಖ ರಸ್ತೆಗೆ “ನೃಪತುಂಗ ರಸ್ತೆ” ಎಂದು ಹೆಸರಿಟ್ಟಿರುವುದು ಇವರ ಘನತೆಗೆ ಸಾಕ್ಷಿಯಾಗಿದೆ ಎಂದರು.

ರಾಷ್ಟçಕೂಟರ ಈ ಅರಸು ತಮ್ಮ ಜ್ಞಾನ, ಧೈರ್ಯ, ಸಾಹಸ, ಔದರ್ಯ, ವ್ಯವಹಾರ ಜ್ಞಾನ ಮತ್ತು ಮಾನವೀಯತೆಯಿಂದ ಕನ್ನಡ ನಾಡಿಗೆ ಕೀರ್ತಿ ತಂದುಕೊಟ್ಟರು. ವಿದ್ಯಾರ್ಥಿಗಳೂ ಕೂಡ ಉತ್ತಮವಾದ ಜ್ಞಾನ ಪಡೆದು, ಧೈರ್ಯ ಮತ್ತು ಸಾಹಸಗಳನ್ನು ಸಮಾಜಕ್ಕಾಗಿ ಸದ್ಭಳಕೆ ಮಾಡಿಕೊಂಡು ಪ್ರಾಮಾಣಿಕತೆಯಿಂದ ಓದಿ ಸಾಧನೆ ಗೈದು ಸಮಾಜಕ್ಕೆ ಹಾಗೂ ದೇಶಕ್ಕೆ ಕೊಡುಗೆ ನೀಡಬೇಕೆಂದು ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಮಹೇಶರಡ್ಡಿ ಹೊಸೂರಕರ ಮಾಜಿ ಉಪ ಮೇಯರ್, ಶ್ರೀ ಚಂದ್ರಶೇಖರ ಪರಸರಡ್ಡಿ ಸದಸ್ಯರು, ರಾಷ್ಟಿçÃಯ ಮೀನುಗಾರಿಕೆ ಅಭಿವೃದ್ಧಿ ನಿಗಮ, ಶ್ರೀ ಪ್ರಭುಗೌಡ ಸಿದ್ದಾರೆಡ್ಡಿ, ಶ್ರೀ ಸೂರ್ಯಕಾಂತರೆಡ್ಡಿ, ಶ್ರೀ ವಿಶ್ವನಾಥ ಕಾಮರೆಡ್ಡಿ, ಶ್ರೀ ಮಲ್ಲಾರೆಡ್ಡಿ ಸಾಹುಕಾರ, ಶ್ರೀ ಮಣಿಕಂಠ ಪಾಟೀಲ, ಶ್ರೀ ಸುನೀಲ, ಶ್ರೀ ಗುರುರಾಜರಡ್ಡಿ, ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು. ಸೃಜಲ್ಯ ತಂಡದವರು ಪ್ರಾರ್ಥಿಸಿದರು. ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here