ನವದೆಹಲಿ: ಇಂದು ನಡೆದ ಸಂಸತ್ ಭವನದ ಅಧಿವೇಶನದಲ್ಲಿ ಸಂಸದ ಡಾ. ಉಮೇಶ್ ಜಾಧವ್ ಮಾತನಾಡಿ ಚಿಂಚೋಳಿಯ ಯಾಕಪೂರ ಗ್ರಾಮದಲ್ಲಿ ಝಿಕ್ರಾಬೇಗಂ ಎಂಬ 8 ವರ್ಷದ ಬಾಲಕಿಯ ಮೆಲೆ ಅತ್ಯಾಚಾರ ಹಾಗೂ ಹತ್ಯೆ ಮಾಡಿರುವ ಪ್ರಕರಣದ ಬಗ್ಗೆ ಸದನದಲ್ಲಿ ಮಾತನಾಡಿ ಖಂಡಿಸಿ ಹೈದಾರಾಬಾದನಲ್ಲಿ ನಡೆದ ಘಟನೆ ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಬುದ್ಧಿ ಮಾಂದ್ಯ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ವೇಸಗಿ ಕೊಲೆ ಮಾಡುರುವ ಅಮಾನುಷ ಘಟನೆ ನಡೆದಿದ್ದು ಇದನ್ನು ಖಂಡಿಸುತ್ತೇನೆ ಎಂದರು.
ಈ ಪ್ರದೇಶದಲ್ಲಿ ಆಕ್ರಮ ಸಾರಾಯಿ ಮತ್ತು ಮದ್ಯ ಮಾರಟ ನಡೆಸಯುತ್ತಿದೆ. ಇದರ ವಿರುದ್ಧ ಕಠಿಣ ಕಾನೂನು ತರಬೇಕು ಅತ್ಯಾಚಾರಿಗಳಿಗೆ ಕಠಿಣ ರೀತಿಯಲ್ಲಿ ಶಿಕ್ಷೆಗೆ ಗುರಿ ಪಡಿಸಬೇಕೆಂದು ಸಭಾಪತಿಗಳಿಗೆ ಒತ್ತಾಯಿಸಿ ಮನವಿ ಮಾಡಿದರು.
ಅವರು ಸದನದಲ್ಲಿ ಮಾತನಾಡಿರುವ ವಿಡಿಯೋ ಕ್ಲೀಪ್: ಕೃಪೆ ಲೋಕಸಭಾ ಟಿವಿ