ಯಡ್ರಾಮಿ: ಸಮೀಪದ ಆಲೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಆಲೂರ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬವನ್ನು ಉದ್ಘಾಟಿಸಲಾಯಿತು.
ಈ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಣ ಸಂಯೋಜಕರಾದ ಪ್ರಭುಗೌಡ ದೇಸಾಯಿ, ರಾಯಪ್ಪ ದೋರನಹಳ್ಳಿ, ಆಲೂರ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶಾಂತಪ್ಪ ಬಿರಾದಾರ, ಷಣ್ಮುಖಪ್ಪ ಭಜಂತ್ರಿ,ಯಡ್ರಾಮಿ ತಾಲ್ಲೂಕಿನ ಸರಕಾರಿ ನೌಕರರ ಸಂಘದ ಸದಸ್ಯರಾದ ವಿಜಯಕುಮಾರ ಬಡಿಗೇರ, ಯಡ್ರಾಮಿ ತಾಲ್ಲೂಕಿನ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಾಂತಮೂರ್ತಿ ಗೊಂಬಿಮಠ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ, ದೀಪಕ್ ಹಾಗೂ ಆಲೂರು ಕ್ಲಸ್ಟರಿನ ಎಲ್ಲಾ ಮುಖ್ಯ ಗುರುಗಳು ಹಾಜರಿದ್ದರು.ಆಲೂರ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿಗಳಾದ ಭೀಮಾಶಂಕರ ಬಿರಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಕ್ಕಳ ವಿಜ್ಞಾನ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ? ಇದರ ಹಿಂದಿರುವ ಉದಾತ್ತ ಉದ್ದೇಶವೇನು? ಎಂಬುದನ್ನು ವಿವರಿಸಿದರು.ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಜೊತೆಗೆ ಮೂಢನಂಬಿಕೆಗಳ ಮೂಲೋತ್ಪಾಟನೆ ಮಾಡಲು ಈ ರೀತಿಯ ಮಕ್ಕಳ ವಿಜ್ಞಾನ ಹಬ್ಬಗಳು ಸಹಕಾರಿಯಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶಿಕ್ಷಣ ಸಂಯೋಜಕರಾದ ಪ್ರಭುಗೌಡ ಸ್ಥಳೀಯ ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶಾಂತಪ್ಪ ಬಿರಾದಾರ ಇವರು ವಿಜ್ಞಾನದ ಮಹತ್ವದ ಬಗ್ಗೆ ಮಾತನಾಡಿದರು.
ಮಕ್ಕಳಿಂದ ವಿವಿಧ ವೈಜ್ಞಾನಿಕ ಚಟುವಟಿಕೆಗಳನ್ನು ಮಾಡಿಸಲಾಯಿತು. ಕಾರ್ಯಕ್ರಮವನ್ನು ಶಿಕ್ಷಕ ಸಿದ್ದಪ್ಪ ಸಾಥಖೇಡ ನಿರೂಪಿಸಿದರು.ಶಿಕ್ಷಕರಾದ ಸೈದಪ್ಪ ಜ್ಞಾನೇಶ,ಪರಶುರಾಮ,ರಮೇಶ,ಶಿವರಾಜ,ಸಾಹೇಬಗೌಡ ಹಾಗೂ ಶಿಕ್ಷಕಿಯರಾದ ಕವಿತಾ,ರಾಜೇಶ್ವರಿ ಸೇರಿದಂತೆ ಅನೇಕರಿದ್ದರು.