ಕಲಬುರಗಿ: ರೈತರ ಸಾಲ ಮನ್ನ ಮಾಡದಿದ್ದರೆ ಅಧಿವೇಷನ ನಾಡಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಚಿಂಚೋಳಿ ತಾಲೂಕಿನ ಚಿಮ್ಮನಚೂಡದಕ್ಲ ಜರುಗಿದ ಬಿಜೆಪಿ ಸಮಾವಾವೇಶದಲ್ಲಿ ಮಾತನಾಡುದರು. ಬೆಂಗಳೂರಿನಲ್ಲಿ 27 ರಂದು ಪಕ್ಷದ ಮುಖಂಡರ ಜತೆ ಸಭೆ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಹೋರಾಟದ ರೂಪರೇಷ ಸುದ್ದ ಪಡಿಸಲಾಗುವುದು ಎಂದರು. ಚಿಂಚೋಳಿಯಲ್ಲಿ ಸಕ್ಕರೆ ಕಂಪನಿ ಸ್ಥಾಪನೆಗೆ ಬದ್ದ. ಕೋಲಿ ಸಮಾಜ ಎಸ್ಚಿಗೆ ಸೇರಿಸುವ ಚಿಂಚನಸೂರ ಕನಸು ನನಸಾಗಲಿದೆ ಎಂದು ಭರವಸೆ ನೀಡಿದರು.
ಒಂದು ವರ್ಷ ದಿಂದ ಚಿಂಚೋಳಿ ಕ್ಷೇತ್ರ ಅಭಿವೃದ್ಧಿಯಾಗುತ್ತಿಲ್ಲ. ಅಭಿವೃದ್ಧಿಗಾಗಿ ನನಗೆ ಆಶೀರ್ವಾದ ಮಾಡಬೇಕು ಎಂದು ಅಭ್ಯರ್ಥಿ ಡಾ. ಅವಿನಾಶ ಜಾಧವ್ ಮತ ಯಾಚಿಸಿದರು. 24 ತಾಸು ನಿಮ್ಮ ಮಗನಾಗಿ ಸೇವೆ ಸಲ್ಲುಸುವೆ. ರಾಜ್ಯದಲ್ಲಿ ಚಿಂಚೋಳಿ ಕ್ಷೇತ್ರ ಮಾದರಿಯನ್ನಾಗಿಸುವೆ ಎಂದರು.
ಕಾಂಗ್ರೆಸ್ ತಿಗಣಿ ಇದ್ದಂತೆ ಐವತ್ತು ವರ್ಷ ನಿರಂತರವಾಗಿ ಕಾಂಗ್ರೆಸ್ ಪಕ್ಷ ದೇಶದ ಜನತೆಯ ರಕ್ತ ಹೀರುತ್ತಿದೆ ಎಂದು ಕುಡಜಿ ಶಾಸಕ ಪಿ. ರಾಜೀವ್ ಹೇಳಿದರು. ಮನೆಯಲ್ಲಿ ಇರುವ ಒಂದೆರಡು ತಿಗಣಿಗಳ ಕಾಟ ತಾಳಲು ಆಗುತ್ತಿಲ್ಲ. ದೇಶದಕ್ಲಿ ಲಕ್ಷಾಂತರ ಕಾಂಗ್ರೆಸ್ ತಿಗಣಿಗಳ ಕಾಟ ನಿಯಂತ್ರಿಸಲು ಮೋದಿ ಅವರಯ ರಾಮಬಾಣ ದಿವ್ಯ ಔಷದಿಯಾಗುದ್ದಾರೆ ಎಂದರು.
ರಾಜ್ಯ ಸರ್ಕಾರ ಚಿಂಚೋಳಿಯಲ್ಲಿ ಬೀಡು ಬಿಟ್ಟಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿಸರು. ವಿಧಾನ ಸೌಧದಿಂದ ರಾಜ್ಯಭಾರ ಮಾಡಬೇಕಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ ರೆಸಾಟ್೯ ನಲ್ಲಿ ಮಜಾ ಮಾಡ್ತಿದ್ದಾರೆ ಎಂದರು. ಒಬ್ಬ ಡಾ. ಅವಿನಾಶ ಜಾಧವ್ ರನ್ನು ಸೋಲಿಸಲು ಸರ್ಕಾ ರವೇ ಚಿಂಚೋಳಿಯಲ್ಲಿದೆ. ಎಲ್ಲ ಸಚಿವರು ಇಲ್ಲೆ ವಾಸ್ತವ್ಯ ಹೂಡಿದ್ದಾರೆ ಎಂದು ದೂರಿದರು.