ಸರ್ಕಾರ ಸವಿತಾ ಸಮಾಜದವರ ನೆರವಿಗೆ ಬರಲಿ

0
87

ಶಹಾಬಾದ: ನಗರದ ಲಾಕ್‍ಡೌನ್ ಪರಿಣಾಮ ಸವಿತಾ ಸಮುದಾಯ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.ಕೂಡಲೇ ಸರ್ಕಾರ ಸವಿತಾ ಸಮಾಜದವರಿಗೆ ಲಾಕ್‍ಡೌನ್ ತೆರವುಗೊಳಿಸುವವರೆಗೂ ತರಕಾರಿ ಹಾಗೂ ಆಹಾರದ ಕಿಟ್‍ಗಳನ್ನು ವಿತರಿಸಬೇಕೆಂದು ಸವಿತಾ ಸಮಾಜದ ಅಧ್ಯಕ್ಷ ದಶರಥ ಕೋಟನೂರ್ ಆಗ್ರಹಿಸಿದ್ದಾರೆ.

ನಗರದಲ್ಲಿ ಸುಮಾರು 28 ಕುಟುಂಬಗಳಿವೆ.ಅವರಿಗೆ ಕ್ಷೌರಿಕ ವೃತ್ತಿಯ ಮೇಲೆ ಅವಲಂಭಿತರಾಗಿದ್ದಾರೆ. ಅವರಿಗೆ ಕ್ಷೌರಿಕ ವೃತ್ತಿಬಿಟ್ಟರೇ ಬೇರೆ ವ್ಯವಹಾರ ಗೊತ್ತಿಲ್ಲದ ಕಾರಣ ಕೆಲಸವಿಲ್ಲದೇ ತುಂಬಾ ತೊಂದರೆಗೆ ಈಡಾಗಿದ್ದಾರೆ. ಸೀಜನ್ ಸಮಯದಲ್ಲಿ ಒಂದಿಷ್ಟು ಹಣ ಕೂಡಿ ಇಡುವ ಸಮಯದಲ್ಲಿ ಕೊರೊನಾ ಎಲ್ಲಿಲ್ಲ ಸಂಕಷ್ಟ ತಂದೊಡ್ಡಿ, ಬದುಕು ಮೂರಾಬಟ್ಟೆ ಮಾಡಿದೆ. ಇತ್ತ ಸಾಲ ಮಾಡಿ ಅಂಗಡಿಗೆ ಯಂತ್ರಗಳನ್ನು ತಂದಿದ್ದೆವೆ. ಅದರ ಸಾಲ ಕಟ್ಟಲು ಸಾಧ್ಯವಿಲ್ಲ.ಅಲ್ಲದೇ ಅಂಗಡಿ ಬಾಡಿಗೆ ಕಟ್ಟದೇ ಸಾಮಜದ ಜನರು ಚಿಂತೆಗೀಡಾಗಿದ್ದಾರೆ.

Contact Your\'s Advertisement; 9902492681

ಅಸಂಘಟಿತ ಸಮುದಾಯ ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಸಂಕಷ್ಟ ಪಡುತ್ತಿದೆ.ಆದ್ದರಿಂದ ಸರ್ಕಾರ ನಮ್ಮ ಸಮುದಾಯದ ಕಡೆಗೆ ಮುಖ ಮಾಡಬೇಕು. ನಮ ಸಮುದಾಯದ ಜನರಿಗೆ ನೆರವಾಗಬೇಕೆಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here