ಸೇಡಂ ರೆಡ್ಡಿ ಸಮಾಜದಿಂದ 5.60 ಲಕ್ಷದ ದಿನಸಿ ಕಿಟ್ ಹಸ್ತಾಂತರ

0
666

ಸೇಡಂ: ಕೊರೊನಾ ಮಹಾಮಾರಿಯಿಂದಾಗಿ ಲಾಕ್ ಡೌನ್ ಆಗಿರುವ ಸೇಡಂ ತಾಲೂಕಿನಲ್ಲಿ ಹಸಿವಿನಿಂದ ಯಾರಿಗೂ ತೊಂದರೆ ಆಗಬಾರದು ಮತ್ತು ನಿರ್ಗತಿಕರಿಗೆ ಹಾಗೂ ಬಡವರಿಗೆ ದಿನಸಿ ವಿತರಣೆ ಮಾಡುವುದಕ್ಕಾಗಿ ಸೇಡಂ ತಾಲೂಕಿನ ರೆಡ್ಡಿ ಸಮಾಜದ ವತಿಯಿಂದ 2021 ಆಹಾರದ ಕಿಟ್‍ಗಳನ್ನು ತಹಸೀಲ್ದಾರ ಅವರಿಗೆ ಹಸ್ತಾಂತರಿಸಲಾಯಿತು.

ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಶುಕ್ರವಾರ ಸಂಜೆ ತಹಸೀಲ್ದಾರ ಬಸವರಾಜ ಬೆಣ್ಣಿಶಿರೂರ ಅವರಿಗೆ 5.60 ಲಕ್ಷ ರು. ಮೌಲ್ಯದ ಈ ಆಹಾರದ ಕಿಟ್‍ಗಳನ್ನು ಹಸ್ತಾಂತರ ಮಾಡಲಾಗಿದ್ದು, ಪ್ರತಿ ಕಿಟ್‍ನಲ್ಲಿ 5 ಕೆಜಿ ಅಕ್ಕಿ, ಒಂದು ಕೆಜಿ ಬೇಳೆ ಮತ್ತು ಒಂದು ಕೆಜಿ ಉಪ್ಪು ಒಳಗೊಂಡಿದೆ. ಸೇಡಂ ತಾಲೂಕಿನ ಆಡಕಿ, ಮುಧೋಳ, ಕೋಡ್ಲಾ ಮತ್ತು ಸೇಡಂ ವಲಯಗಳಲ್ಲಿ ಈ ಆಹಾರ ಕಿಟ್‍ಗಳನ್ನು ವಿತರಿಸಲಾಗುವುದು. ಹಾಗೂ ಮುಂದಿನ ದಿನಗಳಲ್ಲಿ ದಿನಸಿ ಅನಿವಾರ್ಯವಾದಾಗ ರೆಡ್ಡಿ ಸಮಾಜಕ್ಕೆ ಮನವಿ ಮಾಡಿಕೊಂಡಾಗ ಸಹೃದಯದಿಂದ ದಾನ ನೀಡುವಂತೆ ತಹಸೀಲ್ದಾರ ಬಸವರಾಜ ಬೆಣ್ಣಿಶಿರೂರ ತಿಳಿಸಿದರು.

Contact Your\'s Advertisement; 9902492681

ಸೇಡಂ ತಾಲೂಕು ರೆಡ್ಡಿ ಸಮಾಜದ ಮುಖಂಡರೂ ಆಗಿರುವ ಮಾಜಿ ಉಪಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಮಾಜಿ ಶಾಸಕರಾದ ಬಸವಂತರೆಡ್ಡಿ ಪಾಟೀಲ ಮೋತಕಪಲ್ಲಿ ಹಾಗೂ ಡಾ.ನಾಗರೆಡ್ಡಿ ಪಾಟೀಲ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ದಾಮೋದರರೆಡ್ಡಿ ಪಾಟೀಲ ಶಿಲಾರಕೋಟ, ರೆಡ್ಡಿ ಸಮಾಜದ ತಾಲೂಕು ಅಧ್ಯಕ್ಷ ನಾಗಭೂಷಣರೆಡ್ಡಿ ಪಾಟೀಲ ಹೂಡಾ, ಹೇಮ ವೇಮ ಟ್ರಸ್ಟ್ ಅಧ್ಯಕ್ಷ ಶರಣರೆಡ್ಡಿ ಪಾಟೀಲ ಜಿಲ್ಲೇಡಪಲ್ಲಿ, ರೆಡ್ಡಿ ಯುವ ಸಂಘದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಶಿವಲಿಂಗರೆಡ್ಡಿ (ರೆಡ್ಡಿಗೌಡ) ಬೆನಕನಳ್ಳಿ, ಮಹಿಳಾ ರೆಡ್ಡಿ ಸಮಾಜದ ಅಧ್ಯಕ್ಷೆ ಲತಾ ಹೇಮರೆಡ್ಡಿ ಪಾಟೀಲ ಕಲಕಂ, ಜಿಪಂ ಮಾಜಿ ಸದಸ್ಯ ಮಧುಸೂದನರೆಡ್ಡಿ ಪಾಟೀಲ ಮುಧೋಳ, ಹಿರಿಯರಾದ ವೆಂಕಟರೆಡ್ಡಿ ಪಾಟೀಲ ಮಾಧವಾರ, ಅನಂತರೆಡ್ಡಿ ಪಾಟೀಲ ಬಟಗೇರಾ, ಜೆಡಿಎಸ್ ತಾಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ ಜಟ್ಟೂರು ರಾಯಕೋಡ, ತಾಪಂ ಸದಸ್ಯ ನಾಗರೆಡ್ಡಿ ದೇಶಮುಖ ಮದನಾ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ಸದಾಶಿವರೆಡ್ಡಿ ಗೋಪನಪಲ್ಲಿ, ಶಿವಶರಣರೆಡ್ಡಿ ಪಾಟೀಲ, ಶ್ರೀಕಾಂತರೆಡ್ಡಿ ಪಾಟೀಲ ಮುಧೋಳ, ನಾಗರೆಡ್ಡಿ ಪೊ.ಪಾಟೀಲ ಮುಧೋಳ, ನಾಗಭೂಷಣರೆಡ್ಡಿ ಮೋತಕಪಲ್ಲಿ ಇತರರು ಹಾಗೂ ತಹಸೀಲ್ ಕಚೇರಿಯ ಶಿರಸ್ತೆದಾರ ನಾಗನಾಥ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here