ಆಳಂದ: ತಾಲೂಕಿನ ರಾಜೋಳ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳನ್ನು ಬುಧುವಾರ ಶಾಸಕ ಸುಭಾಷ್ ಆರ್ ಗುತ್ತೇದಾರ ವೀಕ್ಷಿಸಿದರು.
ಕಾರ್ಮಿಕರಿಗೆ ನೀಡುತ್ತಿರುವ ಕೂಲಿ ಮತ್ತಿತ್ತರ ವಿಷಯಗಳ ಬಗ್ಗೆ ವಿಚಾರಿಸಿದರು. ಕಾರ್ಮಿಕರು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೆಲಸ ಮಾಡಬೇಕು. ಜಾಬ್ ಕಾರ್ಡ ಇಲ್ಲದವರು ಕೂಡ ಯಾವುದಾದರೊಂದು ವಿಳಾಸದ ದಾಖಲೆಯನ್ನು ನೀಡಿ ಜಾಬ್ ಕಾರ್ಡ ಮಾಡಿಸಿಕೊಳ್ಳಬಹುದು. ಕುಡಿಯುವ ನೀರಿನ ಗಂಭೀರ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಕಾರ್ಮಿಕರಿಗೆ ಶಾಸಕರು ಉಚಿತ ಮಾಸ್ಕ್, ಸ್ಯಾನಿಟೈಜರ್ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ತಾ.ಪಂ ಇಒ ಡಾ. ಸಂಜಯರೆಡ್ಡಿ ಸೇರಿದಂತೆ ಇತರರು ಇದ್ದರು.