ಮದ್ಯ-ಸದ್ಯ
ಮಕ್ಕಳ ಹಸಿವ ನೀಗಲು
ತಾಯಿ ಹೆಣಗುತ್ತಿದ್ದರೆ ಅತ್ತ…
ತೊಟ್ಟು ಎಣ್ಣೆಗಾಗಿ ತಂದೆ
ಗುನುಗುತ್ತಿದ್ದಾನೆ ಇತ್ತ…
ರೇಷನ್ ಪಡೆಯಲೂ
ಕ್ಯೂ ನಿಲ್ಲದ ತಂದೆ
ಎಣ್ಣೆಗಾಗಿ ಉದ್ದದ
ಸಾಲಿನಲಿ ಕಾದು ನಿಂತ
ಮದ್ಯಾಹ್ನವಾದರೆ
ಮುಚ್ಚುವ ದಿನಸಿ ಅಂಗಡಿ
ಮುಸ್ಸಂಜೆಯಾದರೂ
ಮುಚ್ಚದ ಮಧ್ಯದಂಗಡಿ
ಮನೆ ನೆಮ್ಮದಿ ಕೆಡಿಸಿತು ಮದ್ಯ
ಮುಚ್ಚುವುದಾದರೆ ಮುಚ್ಚಿ ಬಿಡಿ ಸದ್ಯ