ಶಹಾಬಾದ:ಕಲ್ಯಾಣ ಕರ್ನಾಟಕ ಮಹಿಳಾ ಹಿರಿಯ ಕವಿತ್ರಿ, ಲೇಖಕಿ, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಗೀತಾ ನಾಗಭೂಷಣ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಸಾಪ ಮಾಜಿ ತಾಲೂಕಾಧ್ಯಕ್ಷ ಅನೀಲಕುಮಾರ ಇಂಗಿನಶೆಟ್ಟಿ ಸಂತಾಪ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯಲ್ಲಿ 2010ರಲ್ಲಿ ನಡೆದ 76ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಗೀತಾ ನಾಗಭೂಷಣ ಅವರು ಹತ್ತು ಹಲವಾರು ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯಕ್ಕೆ ಅಮೂಲಾಗ್ರ ಕೊಡುಗೆ ನೀಡಿದ್ದಾರೆ. ಅವರ ಬರೆದ ಬದುಕು ಮತ್ತು ಹಸಿ ಮಾಂಸ ಹದ್ದುಗಳು ಎಂಬ ಕಾದಂಬರಿಗಳು ಹೆಚ್ಚು ಮನ್ನಣೆ ಪಡೆದಿವೆ.ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಬಡವಾಗಿದೆ ಎಂದು ಹೇಳಿದರು.
ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ, ಕಸಾಪ ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ,ಸಾಹಿತಿ ಮಲ್ಲಿನಾಥ ತಳವಾರ, ಸಿದ್ದಲಿಂಗಯ್ಯ ಹಿರೇಮಠ, ಮಲ್ಲಣ್ಣ.ಹೆಚ್.ಮಾಲಗತ್ತಿ, ಲಕ್ಷ್ಮಿಕಾಂತ ಕಂದಗೂಳ, ಲೋಹಿತ್ ಕಟ್ಟಿ, ರವಿ ಬೆಳಮಗಿ, ರಮೇಶ ಜೋಗದನಕರ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.