ಕಲಬುರಗಿ: ಇಂದು ಬೆಳ್ಳೆಗ್ಗೆ 11 ಗಂಟೆಗೆ ನೇಕಾರರ ಆದ್ಯರು, ದೇವಸಾಲಿ ಜನಾಂಗಕ್ಕೆ ಮಾರ್ಗದರ್ಶನ ನೀಡಿದ ಆಧುನಿಕ ವಚನ ಸಾಹಿತ್ಯ ಪಿತಾಮಹರಾದ ಶಿವೈಕ್ಯ ದಿ. ಫ.ಗು.ಹಳ್ಳಕ್ಕಟ್ಟಿ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, 56 ನೇ ಪುಣ್ಯ ದಿನ ಆಚರಿಸಲಾಯಿತು.
ಕರ್ನಾಟಕ ನೇಕಾರ ರಕ್ಷಣಾ ವೇದಿಕೆಯ ಜಿಲ್ಲಾ ಘಟಕ ದಿಂದ ನಿರ್ಣಯ ತೆಗೆದುಕೊಂಡು ಇಂದು ಮಧ್ಯಾಹ್ನ 1.30 ಗಂಟೆಗೆ ಮನವಿ ಪತ್ರ ಸಲ್ಲಿಸಲಾಯಿತು.
ಮೊದಲು ಸಂಘಟನೆ ಯ ಗೌರವ ಅಧ್ಯಕ್ಷರಾದ ಶ್ರೀ ಶಾಂತಕುಮಾರ ಯಳಸಂಗಿ ಯವರು ಮಾತನಾಡಿ, ನಮ್ಮ ಜನಾಂಗ ಶಿಕ್ಷಣ ಮತ್ತು ಸರಕಾರಿ ಉದ್ಯೋಗ ದಿಂದ ವಂಚಿತವಾಗಿದೆ ಅದಕ್ಕೆ ಇಂದೇ ನಾವು ಸರಕಾರಕ್ಕೆ ಮನವಿಸಲ್ಲಿಸಿ ನಮ್ಮ ಹಕ್ಕುಗಳನ್ನು ಪಡೆಯವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗೋಣ ಎಂದು ಕರೆ ನೀಡಿದರು. ನಂತರ ಜಿಲ್ಲಾ ಘಟಕ ವೇದಿಕೆಯ ಅಧ್ಯಕ್ಷರಾದ ಶ್ರೀ ಭೀಮಾಶಂಕರ ರಾಜಗುಂಡೆ ನಮ್ಮ ಕಾರ್ಯಕರ್ತರೆಲ್ಲರೂ ಮಧ್ಯಾಹ್ನ 1 ಗಂ ಟೆಗೆ ಜಿಲ್ಲಾಧಿಕಾರಿ ಕಛೇರಿ ಯಲ್ಲಿ ಸೇರಿಕೊಂಡು ಮನವಿ ಸಲ್ಲಿಸಿ ಜಾಗ್ರತಿ ಮೂಡಿಸೋಣ ಬನ್ನಿ ಎಂದು ತಿಳಿಸಿದರು.
ಅದರಂತೆ, ಅತಿಥಿಗಳಾಗಿ ಭಾಗವಹಿಸಿದ ರಾಜ್ಯ ಹಟಗಾರ ಕಾರ್ಯದರ್ಶಿಗಳು ಹಾಗೂ ಯುವ ನ್ಯಾಯವಾದಿ ಮತ್ತು ಹಟಗಾರ ಪರಿಷತ್ತಿನ ಕಾನೂನು ಸಲಹೆಗಾರ ವಿನೋದಕುಮಾರ ಜೇನವೆರಿ ಮಾತನಾಡಿ, ನೇಕಾರರಿಗಾಗಿ MSME ಯೋಜನೆ ಅಡಿ ಸರ್ಕಾರ ಧನ ಸಹಾಯ ನೀಡಲು ಕೂಡಾ ಬೇಡಿಕೆ ಇಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಸತೀಶ ಪ್ಯಾಟಿ ಇತರರು ಉಪಸ್ಥಿತರಿದ್ದರು.