ಯಾದಗಿರಿ: ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯಕ್ಕೂ ಮುನ್ನ ಎಸ್ಟಿ ಮೀಸಲು ಹೆಚ್ಚಳ ಮಾಡಿ ಉಳಿದ ಬೇಡಿಕೆ ಈಡೇರಿಸಬೇಕು. ಒಂದೊಮ್ಮೆ ನಿರ್ಲಕ್ಷಿಸಿದರೆ ಎಲ್ಲೆಲ್ಲಿ ಗ್ರಾಮ ವಾಸ್ತವ್ಯಕ್ಕೆ ಮುಂದಾಗುವರೋ ಅಲ್ಲೆಲ್ಲ ಸಮುದಾಯದಿಂದ ಘೇರಾವ್ ಹಾಕಿ ಬಿಸಿ ಮುಟ್ಟಿಸಲಾಗುವುದು ಎಂದು ವಾಲ್ಮೀಕಿ ನಾಯಕ ಸಂಘದ ತೀರ್ಮಾನಿಸಲಾಗಿದೆಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಜೂ.21ರಂದು ಯಾದಗಿರಿ ಜಿಲ್ಲೆಯ ಗ್ರಾಮ ವಾಸ್ತವ್ಯಕ್ಕೆ ಆಗಮಿಸಲಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ನೇತೃತ್ವದಲ್ಲಿ ಘೇರಾವ್ ಹಾಕಲು ತೀರ್ಮಾನಿಸಲಾಗಿದೆ ಎಂದು ಗೊಲಪಳ್ಳಿ ವಾಲ್ಮೀಕಿ ಪೀಠಾಧ್ಯಕ್ಷರಾದ ಪರಮ ಪೂಜ್ಯ ವರದಾನಂದೇಶ್ವರ ಸ್ವಾಮೀಜಿ, ಯಾದಗಿರಿ ಜಿಲ್ಲಾಧ್ಯಕ್ಷ ಮಾರೆಪ್ಪ ನಾಯಕ ಮಗ್ದಂಪೂರ,ವಿಭಾಗೀಯ ಅಧ್ಯಕ್ಷ ನಂದಕುಮಾರ ಮಾಲಿಪಾಟೀಲ ,ರಾಜ್ಯ ಎಸ್ ಸಿ/ಎಸ್ ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ತಡೆ ಸಮಿತಿ ಅಧ್ಯಕ್ಷ ಶ್ರವಣಕುಮಾರ ಡಿ ನಾಯಕ, ಸಮಾಜದ ಮುಖಂಡರಾದ ಗೌಡಪ್ಪ ಗೌಡಗೇರಿ,ಭೀಮರಾಯ ಠಾಣೆಗುಂದಿ ಮೊನ್ನಪ್ಪ ನಾಯಕ ಯಾದಗಿರಿ,ಸಾಯಿಬಣ್ಣ ಕವಲ್ದಾರ ಹಾಗೂ ಇನ್ನಿತರರು ಇದ್ದರು.