ಸುರಪುರ: ಸರ್ಕಾರ ನಮ್ಮ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಕಡೆಗಣಿಸುತ್ತಾ ಬರುತ್ತಿದೆ. ಅನೇಕ ವಷಗಳಿಂದ ಕಡಿಮೆ ಗೌರವ ಧನದಲ್ಲಿ ಸೇವೆ ಮಾಡುತ್ತಿದ್ದೇವೆ, ಈಗ ಕೊರೊನಾ ಸಮಯದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದೇವೆ,ಸರಕಾರ ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಬೆಲೆ ನೀಡಬೇಕು ಎಂದು ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಪುಷ್ಪಲತಾ ಮಾತನಾಡಿದರು.
ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ನಮ್ಮ ಬಹುದಿನಗಳ ಬೇಡಿಕೆಯಾದ ಮಾಸಿಕ ೧೨ ಸಾವಿರ ರೂಪಾಯಿ ಗೌರವಧನ ಹೆಚ್ಚಿಸಬೇಕು. ಕರೊನಾ ಸಮಯದಲ್ಲಿ ಪ್ರತಿ ಮನೆ ಮನೆಗೂ ತೆರಳಿ ಜನರ ಮಾಹಿತಿ ಕಲೆಹಾಕಿದ್ದು ಮತ್ತು ಜನರಿಗೆ ಈ ವೈರಸ್ ತಗುಲದಂತೆ ಮುಂಜಾಗೃತೆ ವಹಿಸಲು ಅರಿವು ಮೂಡಿಸಲು ಹಾಗೂ ನಮ್ಮ ಆರೋಗ್ಯ ರಕ್ಷಣೆಗಾಗಿ ಸರಿಯಾದ ಕಿಟ್‌ಗಳನ್ನೂ ನೀಡಿಲ್ಲ. ಸ್ಯಾನಿಟೈಜರಾಗಲಿ, ಕರ ರಕ್ಷಾ ಕವಚಗಳಾಗಲಿ, ಮುಖಗವಸು, ಏನನ್ನು ನೀಡುತ್ತಿಲ್ಲ. ಆದರೆ ಹಗಲಿರುಳು ನಾವು ದುಡಿಯುತ್ತೇವೆ ಆದರೆ ಸರ್ಕಾರ ನಮ್ಮ ಶ್ರಮಕ್ಕೆ ಬೆಲೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೆ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ೧೨ ಸಾವಿರ ಪ್ರತಿ ತಿಂಗಳ ಗೌರವಧನ ಘೋಷಿಸಬೇಕು ಮತ್ತು ನಮಗೆ ಕೊರೊನಾದಿಂದ ರಕ್ಷಣೆಗಾಗಿ ಅಗತ್ಯವಾದ ಉತ್ತಮ ಗುಣಮಟ್ಟದ ಕಿಟ್‌ಗಳನ್ನು ನೀಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಇಡೇರಿಸುವವರೆಗೂ ಅರ್ನಿಧಿಷ್ಠಾವಧಿ ಹೋರಾಟ ನಡೆಸಲಾಗುವುದು ಎಂದರು.ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಾಲೂಕು ಆರೋಗ್ಯಾಧಿಕಾರಿ ಡಾ: ಆರ್.ವಿ.ನಾಯಕ ಅವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರಾದ ಶಾಂತವ್ವ ಹಸನಾಪುರ, ಪ್ರಮಲತಾ, ತಾಯಮ್ಮ, ಶ್ರೀದೇವಿ, ಸುಜಾತ, ವಿಜಯಲಕ್ಷ್ಮೀ, ಬಸಮ್ಮ, ಹುಲಗಮ್ಮ, ಶಿವಕಾಂತಮ್ಮ, ದೇವಮ್ಮ, ಮರೆಮ್ಮ, ಚಂದಮ್ಮ, ಮಾನಮ್ಮ ಸೇರಿದಂತೆ ಇನ್ನಿತರರಿದ್ದರು.