ಆನಂದ ವಿದ್ಯಾಲಯದಲ್ಲಿ ರಾಜಾ ಮದನಗೋಪಾಲ ನಾಯಕರಿಗೆ ನುಡಿ ನಮನ

0
88

ಸುರಪುರ: ಕಳೆದ ಕೆಲ ದಿನಗಳ ಹಿಂದೆ ನಿಧನರಾದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಹಾಗು ಮಾಜಿ ಸಂಸದ ರಾಜಾ ರಂಗಪ್ಪ ನಾಯಕರಿಗೆ ನಗರದ ಆನಂದ ವಿದ್ಯಾಲಯ ಶಿಕ್ಷಣ ಸಂಸ್ಥೆಯಿಂದ ನುಡಿ ನಮನ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖಂಡ ಪ್ರಕಾಶ ಗುತ್ತೇದಾರ ಮಾತನಾಡಿ, ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರು ನಮಗೆ ಸದಾಕಾಲ ಮಾರ್ಗದರ್ಶಕರಾಗಿದ್ದರು.ನಾವು ಚಿಕ್ಕವರಿರುವಾಗಿನಿಂದಲೂ ಅವರಿಂದ ಅನೇಕ ಸಂಗತಿಗಳನ್ನು ಕಲಿತಿದ್ದೇವೆ.ಅಲ್ಲದೆ ಅವರು ರಾಜಕೀಯ ಜೀವನ ಹೇಗೆ ನಡೆಸಿದರು ಅದಕ್ಕಿಂತ ಹೆಚ್ಚಿನ ಕಾಳಜಿ ಮತ್ತು ಸಮಯವನ್ನು ಕಲೆ ಸಾಹಿತ್ಯ ಸಂಸ್ಕೃತಿ ಚಟುವಟಿಕೆಗಳಿಗೆ ನೀಡಿದ್ದರು.ಅವರು ನಿರ್ಮಿಸಿದ ಗರುಡಾದ್ರಿ ಕಲಾ ಮಂದಿರ ಜೀವಂತ ಸಾಕ್ಷಿಯಾಗಿದೆ.ಅದರೆ ಇಂದು ಅವರಿಲ್ಲದೆ ಗರುಡಾದ್ರಿ ಕಲಾ ಮಂದಿರ ಮತ್ತು ರಿಕ್ರಿಯೇಷನ್ ಕ್ಲಬ್ ಅನಾಥವಾಗಿವೆ ಎಂದರು.

Contact Your\'s Advertisement; 9902492681

ಅದೇರೀತಿಯಾಗಿ ಮಾಜಿ ಸಂಸದ ರಾಜಾ ರಂಗಪ್ಪ ನಾಯಕರು ಕೂಡ ಸಂಸದರಾಗಿದ್ದ ಸಂದರ್ಭದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರ ಹಾಗು ವಿಶೇಷವಾಗಿ ಸುರಪುರ ತಾಲೂಕಿನ ಅಭಿವೃಧ್ಧಿಗೆ ಶ್ರಮಿಸಿದ್ದಾರೆ.ಇಂದು ಅವರನ್ನು ಕೂಡ ನಾವೆಲ್ಲ ಕಳೆದುಕೊಂಡು ಅನಾಥರಾಗಿದ್ದೇವೆ.ಇಬ್ಬರು ಮಹನಿಯರುಗಳು ಇನ್ನು ನೆನಪುಮಾತ್ರ.ಆದರೆ ಅವರು ಮಾಡಿದ ಕಾರ್ಯಗಳು ಸದಾಕಾಲ ಜೀವಂತವಾಗಿರಲಿವೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ರಾಜಾ ಮದನಗೋಪಾಲ ನಾಯಕರ ಹಾಗು ರಾಜಾ ರಂಗಪ್ಪ ನಾಯಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಇದೇ ಸಂದರ್ಭದಲ್ಲಿ ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರಾ,ಹಿರಿಯರಾದ ಭಾಸ್ಕರ ಮ್ಯಾಥ್ಯೂ,ಸಾಹಿತಿ ಬೀರಣ್ಣ ಬಿ.ಕೆ ಆಲ್ದಾಳ ಹಾಗು ಅಧ್ಯಕ್ಷತೆ ವಹಿಸಿದ್ದ ಬಿ.ಧೂಳಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಧಾನಗುರು ಮಹೇಶ ಜಹಾಗೀರದಾರ,ಪಾಲ್ ನಾಯಕ, ಜಾನ್‌ವೆಸ್ಲಿ, ಜಯಪಾಲ್, ಸದಾನಂದ ಡೇವಿಡ್, ಅಮಿತ್ ಪಾಲ್, ಶಿಕ್ಷಕ ಸ್ಯಾಮುವೆಲ್,ಜಯಪ್ಪ ,ಹಣಮಂತ್ರಾಯ ದೊರೆ,ಮಲ್ಲಿಕಾರ್ಜುನ,ಪ್ರಭು ಕುಮಾರಿ,ಸುನಿತಾ,ಸುಜಾತಾ,ಸೋನಾ ಕುಮಾರಿ,ಲಲಿತಾ,ಚಂದ್ರಾ ಮ್ಯಾಥ್ಯೂ,ಶಕುಂತಲಾ,ಆಲಿಪ್ ಜಾನ್ ವೆಸ್ಲಿ,ವಿನೋದ ದಿವಟೆ ಸೇರಿದಂತೆ ಅನೇಕರಿದ್ದರು.s

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here