ಕಲಬುರಗಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ಹಾಗೂ ಬಾಲ ಭವನ ಸಮಿತಿ ವತಿಯಿಂದ ಸೋಮವಾರ ಜಿಲ್ಲಾ ಬಾಲ ಭವನದಲ್ಲಿ ಬೇಸಿಗೆ ಶಿಬಿರ ಕಾರ್ಯಕ್ರಮ ನಡೆಯಿತು. ಮಹಾ ನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಕ್ಕಳಲ್ಲಿ ಸೃಜನಶೀಲ ಗುಣ ಮನೋಭಾವ ಅಳವಡಿಸಿ ಇಂದಿನ ಮಕ್ಕಳೆ ನಾಳಿನ ನಾಗರಿಕರು. ಜೀವನ, ಬದುಕು, ಶಿಬಿರ ಕಲಿಕೆ ಮಹತ್ವದ್ದಾಗಿದೆ. ಮಕ್ಕಳ ಮನೋಭಾವ ಕಲಿಕಾ ಹಂತ ಶಿಬಿರದಲ್ಲಿ ಕ್ರೀಯಾಶೀಲತೆ ಕಲಿಸಿಕೊಡುತ್ತದೆ. ಇದರಿಂದ ಮಕ್ಕಳ ಜ್ಞಾನ, ಪ್ರತಿಭೆ ಹೊರ ಹೊಮ್ಮಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ಮಕ್ಕಳ ಕುಸುಮ ಅರಳಿಸಲು ಶಿಬಿರ ಮಾರ್ಗದರ್ಶನವಾಗಲಿ. ಬಹು ಭಾಷಾ ಕಲಿಕೆ ಜೊತೆ ಇತರೆ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಜ್ಞಾನಾರ್ಜನೆ ಹೆಚ್ಚಲು ಸಾಧ್ಯವಾಗುತ್ತದೆ ಎಂದರು.
ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಛಾಯಾಚಿತ್ರ ಕಲಾ ಸಂಸ್ಥೆ ಕಾರ್ಯದಶೀ ಬಸವರಾಜ ತೋಟದ, ಸಂಪನ್ಮೂಲ ವ್ಯಕ್ತಿ ಬಿ.ಎಂ.ರಾವೂರ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಎಂ.ಬಿ.ನಿಂಗಪ್ಪಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷೆ ರೀನಾ ಡಿಸೋಜಾ, ವೆಂಕಟೇಶ ದೇಶಪಾಂಡೆ, ಸುಧಾ ಪಾಳಾ, ಸಂಜುಕುಮಾರ ಕಾಂಬಳೆ, ಮ್ಯಾಥ್ಯೂ ಮಲ್ಲಣ್ಣ ಇದ್ದರು. ಮಲ್ಲಿಕಾರ್ಜುನ ದೊಡ್ಡಿ ನಿರೂಪಿಸಿ ವಂದಿಸಿದರು.