ಕೊರೊನಾ ಸಮಯದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸದೇ ಸರ್ಕಾರ ಹಣ ಲಪಟಾಯಿಸುತ್ತಿದೆ: ಬಾಚಿಮಟ್ಟಿ

0
26

ಸುರಪುರ: ಸರ್ಕಾರ ಅಧಿಕಾರಿಕ್ಕೆ ಬಂದಾಗಿನಿಂದಲು ರಾಜ್ಯದಲ್ಲಿ ಬ್ರಷ್ಟಾಚಾರ ತಾಂಡವವಾಡುತ್ತಿದೆ ಕರೊನಾ ಸಮಯದಲ್ಲಿ ಸರ್ಕಾರದಿಂದ ಖರೀದಿಸಲ್ಪಟ್ಟ ಮಾಸ್ಕ, ಸ್ಯಾನಿಟೈಸರ್ ಹಾಗೂ ವೆಂಟಿಲೇಟರ್ಸ್ ಮತ್ತು ಲಾಕ್ ಡೌನ ಸಮಯದಲ್ಲಿ ಬಡ ಜನರಿಗೆ ವದಗಿಸಿದ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಸಲಾಗಿದೆ ಸುಮಾರು ಎರಡು ಸಾವಿರ ಕೋಟಿಗೂ ಅಧಿಕ ಮೋತ್ತದ ಖರ್ಚಿಗೆ ಸರ್ಕಾರ ಸರಿಯಾದ ಲೆಕ್ಕವನ್ನು ನೀಡುತ್ತಿಲ್ಲಾ ಕರೊನಾ ಸಮಯದಲ್ಲಿ ಖರ್ಚಾದ ಅನುದಾನದ ಕುರಿತು ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನೀಖೆ ನಡೆಸಬೇಕು ಎಂದು ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಆಗ್ರಹಿಸಿದರು.

ನಗರದ ತಹಸಿಲ್ದಾರ ಕಚೇರಿ ಆವರಣದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು,ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳ ಶಾಹಿಗಳಿಗೆ ಅನುಕೂಲ ಕಲ್ಪಿಸಲೆಂದೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೊಳಿಸಿ ರೈತರನ್ನು ಸಂಕಷ್ಟಕ್ಕೆ ದೂಡಿದ್ದಲ್ಲದೆ ಎಪಿಎಂಸಿ ಕಾಯ್ದೆ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಬಡಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿವೆ ಇಷ್ಟಲ್ಲದೆ ಕರೋನಾ ಮಹಾಮಾರಿಯಿಂದ ಜನರು ತಮ್ಮ ಉಪಜೀವನವನ್ನು ಕಳೆದುಕೊಂಡಿದ್ದಾರೆ ಅತಂಹ ಜನರಿಗೆ ಸ್ಪಂದಿಸಬೇಕಾದ ಸರ್ಕಾರ ಕೊರೊನಾದಲ್ಲೂ ಹಣವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ನಂತರ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್ ೨ ತಹಸಿಲ್ದಾರ ಸುಫಿಯಾ ಸುಲ್ತಾನ ಅವರಿಗೆ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ರಾಜಾ ಪಿಡ್ಡನಾಯಕ(ತಾತಾ), ಕಾಂಗ್ರೆಸ್ ಎಸ್ಟಿ ವಿಭಾಗದ ರಾಜ್ಯ ಕಾರ್ಯದರ್ಶಿ ರಮೇಶ ದೊರೆ ಆಲ್ದಾಳ, ಕಿಸಾನ ಘಟಕದ ತಾಲೂಕು ಅಧ್ಯಕ್ಷ ಚನ್ನಪ್ಪಗೌಡ, ಹಣಮಂತ್ರಾಯ ಮಕಾಶಿ, ಶಕೀಲ ಅಹ್ಮದ್, ಕಮುರುದ್ಧಿನ, ಧರ್ಮು ಮಡಿವಾಳ, ಅಹ್ಮದ್ ಶರೀಫ, ಜಹೀರ, ಶರಣು ಕಳ್ಳಿಮನಿ, sಸಿದ್ರಾಮ ಎಲಿಗಾರ, ಗಾಳೆಪ್ಪ, ಯುತ್ ಕಾಂಗ್ರೆಸ್ ತಾಲೂಕು ಘಟಕದ ಅಧ್ಯಕ್ಷ ಸುಲೇಮಾನ, ಪಾರಪ್ಪ ದೇವತ್ಕಲ್ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here