ಶಹಾಪುರ: ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ ಮಾಡಲಾಯಿತು.
ಸ್ಮಾರ್ಟ್ ಫೋನ್ ವಿತರಿಸಿ ಅಂಗನವಾಡಿ ಮೇಲ್ವಿಚಾರಕಿಯರಾದ ಮಾಲತಿಯವರು ಮಾತನಾಡಿ ಇಲಾಖೆಯ ಕಾರ್ಯಚಟುವಟಿಕೆಗಳಿಗೆ ಮಾತ್ರ ಸ್ಮಾರ್ಟ್ ಫೋನ್ ಬಳಸಬೇಕು ಯಾವುದೇ ವಿನಾಕಾರಣ ಇನ್ನಿತರ ಉದ್ದೇಶಕ್ಕಾಗಿ ಬಳಸಬಾರದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳಾದ ಮಲ್ಕಮ್ಮ ಸಾವಿತ್ರಿಬಾಯಿ,ನಿಶಾತ್, ಅಂಜುಮ್,ಹಾಗೂ ಇತರರು ಉಪಸ್ಥಿತರಿದ್ದರು.