ಪರಿಶಿಷ್ಟ ಜಾತಿ ಬೌದ್ಧ ಆಂದೋಲನ ಅಭಿಯಾನಕ್ಕಾಗಿ ಸುರಪರ ತಾಲೂಕು ಸಮಿತಿ ರಚನೆ

0
54

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಸಭೆ ನಡೆಸಿ ಪರಿಶಿಷ್ಟ ಜಾತಿ ಬೌದ್ಧ ಆಂದೋಲನ ಅಭಿಯಾನ ಸಮಿತಿ ಸುರಪುರ ಅಡಕ ಸಮಿತಿಯನ್ನು ರಚಿಸಲಾಯಿತು.

ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ, ಬೋಧಿಸತ್ವ ಡಾ|| ಬಿ,ಆರ್,ಅಂಬೇಡ್ಕರ್ ರವರ ೬೪ ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆಯನ್ನು ಇದೆ ವಿಜಯ ದಶಮಿಯಂದು ಈಗಾಗಲೇ ಆಚರಿಸಲಾಗಿದ್ದು. ಅದನ್ನು ಪರಿಣಾಮಕಾರಿಯಾಗಿ ತಾಲೂಕ ಮಟ್ಟದಲ್ಲಿ ನಮ್ಮ ಧರ್ಮ ಹಿಂದೂ ಅಲ್ಲ ಬೌದ್ಧ ಎಂದು ದಾಖಲಿಸಲು ತಾಲೂಕನ ಪ್ರತಿಯೊಂದು ಹಳ್ಳಿ ಹಳ್ಳಿಗೆ ಪ್ರಚಾರ ಕೈಗೊಂಡು ಇನ್ನು ಮುಂದೆ ಹಿಂದು ಧರ್ಮ ಕಾಲಂನಲ್ಲಿ ಬೌದ್ಧ ಎಂದು ಅದಿಕೃತವಾಗಿ ಕಾನೂನಾತ್ಮಕವಾಗಿ ದಾಖಲಿಸಲು ಕರೆಕೊಡಲಾಗಿದೆ ಇದಕ್ಕೆ ಸರಕಾರದ ನಿಯಾಮವಳಿಯನ್ನು ತಿದ್ದುಪಡಿಸಲಾಗಿದೆ.ಆದ್ದರಿಂದ ಇಂದಿನ ಸಭೆಯ ಮೂಲಕ ತಾಲೂಕಿನಲ್ಲಿ ಈ ಅಭಿಯಾನ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಮಿತಿ ರಚಿಸಲಾಗುತ್ತಿದೆ ಎಂದರು.

Contact Your\'s Advertisement; 9902492681

ದೇಶದ ಮೂಲನಿವಾಸಿಗರಾದ ನಾವೂಗಳು ಹಿಂದುಗಳೇ ಅಲ್ಲ ನಾವು ಬೌದ್ಧರೆಂದು ದಾಖಲಿಸಿ ಮರಳಿ ಮನೆಗೆ ಹೋಗಬೇಕಾಗಿದೆ. ತಾಲೂಕಿನಲ್ಲಿ ಮುಂದಿನ ಕೇಲವೆ ದಿನಗಳಲ್ಲಿ ಒಂದು ದಿನದ ವಿಚಾರ ಸಂಕಿರ್ಣವನ್ನು ಏರ್ಪಡಿಸಿ ಕನಿಷ್ಟ ೨೦೦ ಬೌದ್ಧ ಉಪಾಸಕರುಗಳಿಗೆ ಮಾಹಿತಿ ನೀಡಿ ತಾಲೂಕಿನ್ಯಾದ್ಯಂತ ಪ್ರಚಾರ ಕೈಗೊಳಲಾಗುವದು ಎಂದು ಈ ಕೇಳಗಿನಂತೆ ಸುರಪುರ ತಾಲೂಕಿನ ಅಡಕ ಸಮಿತಿಯನ್ನು ರಚಿಸಲಾಗಿದೆ ಎಂದರು.

ನೂತನವಾಗಿ ರಚನೆಯಾದ ಸಮಿತಿ: ವೆಂಕಟೇಶ ಸುರಪುರಕರ್, ಹಣಮಂತ ಹೊಸಮನಿ,ಮುರ್ತಿ ಬೊಮ್ಮನಹಳ್ಳಿ,ಲಾಲಾಪ್ಪ ಹೊಸಮನಿ,ಹಣಮಂತ ಭದ್ರಾವತಿ,ರಾಮಣ್ಣ ಶೆಳ್ಳಗಿ,ಶರಣಪ್ಪ ವಾಗನಗೇರಾ,ವೀರಭದ್ರ ತಳವರಗೇರಾ,ಹಣಮಂತ ಬೇವಿನಾಳ,ವಿರಪಾಕ್ಷೀ ಕರಡಕಲ್,ಮಡಿವಾಳಪ್ಪ ಕಿರದಳಿ, ನಿಂಗಣ್ಣ ಗೋನಾಲ್, ರಾಜು ಶಖಾಪುರ,ಶರಣು ಹಸನಾಪೂ,ವೆಂಕಟೇಶ ದೇವಾಪೂರ,ರಾಜು ಬಡಿಗೇರ್,ಶಿವಣ್ಣ ಸಾಸಗೇರಾ,ಶಂಕರ್ ಕಾಂಬ್ಳೇ,ವಿಶ್ವನಾಥ ಹೊಸಮನಿ,ಚಂದಪ್ಪ ಪಂಚಮ್,ಮರೆಪ್ಪ ಕಾಂಗ್ರೆಸ್,ಶ್ರೀಮಂತ ಚಲುವಾದಿ,ಮಲ್ಲು ಕೆಸಿಪಿ,ಸತಿಶ ಯಡಿಯಾಪೂರ,ಅಮ್ಮಪ್ಪ ಬಿಜಾಸಪುರ,ಹಣಮಂತ ರತ್ತಾಳ,ದೇವರಾಜ್ ಹೊಸಮನಿ,ಆನಂದ ಕಟ್ಟಿಮನಿ, ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ವೆಂಕಟೇಶ ಹೊಸಮನಿ,ರಾಮಣ್ಣ ಕಲ್ಲದೇವನಹಳ್ಳಿ,ರಾಹುಲ್ ಹುಲಿಮನಿ,ಮಾಳಪ್ಪ ಕಿರದಳ್ಳಿ, ಭಿಮಣ್ಣ ಬೇವಿನಾಳ,ಬಸವರಾಜ್ ಯಡಿಯಾಪುರ್,ಸಿದ್ದು ಯಡಿಯಾಪುರ,ಮಾನಪ್ಪ ರತ್ತಾಳ,ಅಯ್ಯಪ್ಪ ಬೆವಿನಾಳ,ವೆಂಕಟೇಶ ಬಡಿಗೇರ್, ಇತರರು ಬಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here