ಸುರಪುರ: ನಗರದ ಹೊಸ ಬಾವಿ ಬಳಿಯಿರುವ ಗವಿ ಬುದ್ಧ ವಿಹಾರದ ತಾಣದಲ್ಲಿ ಗೋಲ್ಡನ್ ಕೇವ್ ಗೌತಮ್ ಬುದ್ಧ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಟ್ರಸ್ಟಿನ ಅನೇಕ ಮುಖಂಡರು ಭಾಗವಹಿಸಿ ಬುದ್ಧ ವಿಹಾರದ ಹಸಿರು ತಾಣದಲ್ಲಿ ಎಲ್ಲೆಡೆ ಬಿಸಾಡಿದ್ದ ಬಾಟಲಿ,ಪ್ಲಾಸ್ಟಿಕ್ ವಸ್ತುಗಳು ಮತ್ತಿತರೆ ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮುಖಂಡ ವೆಂಕಟೇಶ ಹೊಸಮನಿ ಮಾತನಾಡಿ,ಬುದ್ಧ ಬಸವಣ್ಣ ಸೇರಿದಂತೆ ಅನೇಕ ಮಹಾತ್ಮರು ದುಶ್ಚಟ ಮತ್ತು ದುರ್ಗುಣಗಳಿಂದ ಮನುಷ್ಯ ದೂರವಿರುವಂತೆ ಸಂದೇಶದಲ್ಲಿ ತಿಳಿಸಿದ್ದಾರೆ.ಆದರೆ ಮನುಷ್ಯರು ಇಂತಹ ಮಹಾತ್ಮರ ಮಾತುಗಳ ಧಿಕ್ಕರಿಸಿ ಇದೇ ಬುದ್ಧನ ತಾಣದಲ್ಲಿಯೆ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು,ಸಿಗರೇಟ್ ಪಾಕೇಟುಗಳು,ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ಸೇರಿದಂತೆ ಅನೇಕ ವಿವಿಧ ಕಸವನ್ನು ಬಿಸಾಡಿದ್ದಾರೆ.
ಅಲ್ಲದೆ ಮದ್ಯ ಸೇವನೆ ಮಾಡುವ ಪುಂಢ ಪೋಕರಿಗಳು ಕುಡಿದು ಮದ್ಯದ ಬಾಟಲಿಗಳನ್ನು ಹೊಡೆದು ಚೂರು ಮಾಡಿ ಬಿಸಾಡುವ ಮೂಲಕ ಪರಿಸರವನ್ನು ಹಾಳು ಮಾಡುತ್ತಿದ್ದಾರೆ..ಇದರಿಂದ ಮಹಾತ್ಮರ ಸಂದೇಶಗಳಿಗೆ ಮನುಷ್ಯರು ಅಪಾಮಾನಿಸಿದಂತಾಗಲಿದೆ.ಆದ್ದರಿಂದ ಅನೇಕ ಜನರು ವಾಯು ವಿಹಾರಕ್ಕೆ ಬರುವ ಈ ತಾಣದಲ್ಲಿ ಪುಂಡರ ಈ ಮೊಜಿಗೆ ಅವಕಾಶ ನೀಡದಂತೆ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಮುಖಂಡರಾದ ರಾಹುಲ್ ಹುಲಿಮನಿ,ಮಾಳಪ್ಪ ಕಿರದಹಳ್ಳಿ,ಆದಪ್ಪ ಹೊಸಮನಿ,ರಮೇಶ ಅರಕೇರಿ,ಭೀಮರಾಯ ಸಿಂಧಗೇರಿ,ಆನಂದ ಅರಕೇರಿ, ರಮೇಶ ಬಡಿಗೇರ,ಮಲ್ಲು ಮುಷ್ಠಳ್ಳಿ,ಪರಶು ಅರಕೇರಿ,ಜಗದೀಶ ಶಾಖಾನವರ್ ಸೇರಿದಂತೆ ಅನೇಕರಿದ್ದರು.